BBMP
Loading ...

BBMP Park

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಉದ್ಯಾನಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದಲ್ಲಿ ಅಂತಹ ಪ್ರಕರಣ ಸಂಬಂಧ ದೂರು ನೀಡಬಹುದು ಎಂದು ಪಾಲಿಕೆ ತಿಳಿಸಿದೆ.

ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 1,287 ಉದ್ಯಾನಗಳು ಇವೆ. ಸಾರ್ವಜನಿಕರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಪಾರ್ಕ್‌ಗಳ ಪ್ರವೇಶ ಸಮಯವನ್ನು ಬದಲಿಸಲಾಗಿದೆ. ಅದರಂತೆ ಬೆಳಿಗ್ಗೆ 5ರಿಂದ ರಾತ್ರಿ 10ರವರೆಗೆ ತೆರೆಯುವಂತೆ ಹಿಂದಿನ ವರ್ಷದ ಜೂ.12ರಂದು ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದರು. ಈ ಅವಧಿದಲ್ಲಿ ಪಾರ್ಕ್‌ಗಳ ನಿರ್ವಹಣೆಯ ಅಧಿಕಾರಿ/ಸಿಬ್ಬಂದಿ ಪ್ರವೇಶ ನಿರಾಕರಿಸಿದರೆ ಪಾಲಿಕೆಗೆ ದೂರು ಸಲ್ಲಿಸಬಹುದು ಎಂದು ಅರಣ್ಯ, ಪರಿಸರ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮನವಿ ಮಾಡಿದ್ದಾರೆ.

ಸದರಿ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ಸಮಯದಲ್ಲಿ ಯಾವುದೇ ಉದ್ಯಾನಗಳಲ್ಲಾಗಲಿ ಸಾರ್ವಜನಿಕರ ಪ್ರವೇಶವನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ಯಾವುದಾದರೂ ಉದ್ಯಾನಗಳಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿದಲ್ಲಿ ಅಂತಹ ಪಾರ್ಕ್‌ಗಳ ಛಾಯಾಚಿತ್ರದೊಂದಿಗೆ ಬಿಬಿಎಂಪಿಗೆ ದೂರು ನೀಡಲು ಕೋರಿದೆ.

ಸಹಾಯವಾಣಿ 1533ಕ್ಕೆ ದೂರು ನೀಡಿ:

ಉದ್ಯಾನ ಮುಚ್ಚಿದ್ದಲ್ಲಿ ಅಥವಾ ಪ್ರವೇಶ ನಿರಾಕರಿಸಿದಲ್ಲಿ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533, ವ್ಯಾಟ್ಸಪ್ ಸಂಖ್ಯೆ 9480685700 ಹಾಗೂ ಸಹಾಯ 2.0 ತಂತ್ರಾಂಶದ ಮೂಲಕ ದೂರು ನೀಡಬಹುದು ಎಂದು ಪಾಲಿಕೆಯ ವಿಶೇಷ ಆಯುಕ್ತರು (ಅರಣ್ಯ, ಪರಿಸರ ವಿಭಾಗ) ಕೋರಿದ್ದಾರೆ.

ಬೆಂಗಳೂರು: ಮರದ ಕೊಂಬೆ ಬಿದ್ದು ಎಲೆಕ್ಟ್ರಿಷಿಯನ್ ಸಾವು, ಮತ್ತೋರ್ವನಿಗೆ ಗಾಯ

Leave a Reply

Your email address will not be published. Required fields are marked *