ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ನ್ಯಾಯಾಲಯಕ್ಕೆ ಇಂದು ಹಾಜರಾಗಿದ್ದಾರೆ. ಕಳೆದ ಬಾರಿ ವಿಚಾರಣೆ ನಡೆದಾಗ ದರ್ಶನ್ ಗೈರು ಹಾಜರಾಗಿದ್ದರು. ಆ ಬಗ್ಗೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ಇಂದು ಹಾಜರಾಗಿದ್ದು, ಇದೇ ವೇಳೆ ಪ್ರಕರಣದ ಎರಡನೇ ಆರೋಪಿ ಪವಿತ್ರಾಗೌಡ ಕೂಡ ಹಾಜರಾಗಿದ್ದು, ನ್ಯಾಯಾಲಯದಲ್ಲಿ ಕೆಲವೊಂದು ಘಟನೆಗಳು ಬೆಳಕಿಗೆ ಬಂತು.
ರೇಣುಕಾಸ್ವಾಮಿ ಕೊಲೆ ಕೇಸ್ ಸದ್ಯ ವಿಚಾರಣಾ ನ್ಯಾಯಾಲಯದಲ್ಲಿ ಟ್ರಯಲ್ ನಡಿತಿದೆ. ಹೀಗಾಗಿ ಪ್ರಕರಣದ ಎ೧ ಆರೋಪಿ ಪವಿತ್ರಾ ಗೌಡ , ದರ್ಶನ್ ಎ2 ಆರೋಪಿ ಇಂದು ಪ್ರಕರಣದ ವಿಚಾರಣೆಗೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ಹಾಜರಾಗಿ ಹಾಜರಾತಿ ನೀಡಿದರು. ನಂತರ ನ್ಯಾಯಾಲಯ ವಿಚಾರಣೆ ಜುಲೈ 10 ಕ್ಕೆ ಮುಂದೂಡಿಕೆ ಮಾಡಿದೆ.
ಇನ್ನು ಈ ವೇಳೆ ಒಂದಷ್ಟು ಘಟನೆಗಳು ನಡೆದವು. ದರ್ಶನ್ ಹಾಗೂ ಪವಿತ್ರಾಗೌಡ ತನ್ನ ಸಹಚರರ ಜೊತೆ ಬೇರೆ ಬೇರೆ ಕಾರಿನಲ್ಲಿ ಬಂದಿದ್ದು, ಕೋರ್ಟ್ ಹಾಲ್ನಲ್ಲಿ ಅಕ್ಕ-ಪಕ್ಕದಲ್ಲಿ ನಿಂತಿದ್ದರು. ಅಷ್ಟೇ ಅಲ್ಲದೇ ವಿಚಾರಣೆ ಮುಗಿಸಿ ಕೋರ್ಟ್ನಿಂದ ಹೊರ ಬರುವಾಗ ದರ್ಶನ್ ಕೈನ ಪವಿತ್ರಾ ಹಿಡಿದುಕೊಂಡಿದ್ದರು.
ವಿಚಾರಣೆ ಮುಗಿಸಿ ಕೆಳಗಡೆ ಬರುವ ಲಿಫ್ಟ್ನಲ್ಲಿ ಪವಿತ್ರಾ ಗೌಡ ನಟ ದರ್ಶನ್ ಅವರೊಟ್ಟಿಗೆ ಮಾತನಾಡಿ, ನಂಬರ್ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಾಗೆ ಪವಿತ್ರಾ ಗೌಡ ಅವರು ತಮ್ಮ ಕಷ್ಟ ಹೇಳಿಕೊಂಡರಂತೆ. ಆಗ ದರ್ಶನ್, ಪವಿತ್ರಾ ಅವರನ್ನು ಅಪ್ಪಿಕೊಂಡು ಸಮಾಧಾನ ಮಾಡಿದ್ದಾರೆ. ನಾನಿದ್ದೀನಿ ಟೆನ್ಷನ್ ಬೇಡ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಪವಿತ್ರಾ ಗೌಡ ಅವರು ದರ್ಶನ್ ಅವರ ಹೊಸ ಮೊಬೈಲ್ ನಂಬರ್ ಅನ್ನು ಕೇಳಿದರಂತೆ. ಅದರಂತೆ ದರ್ಶನ್ ಅವರು ಪವಿತ್ರಾ ಗೌಡಗೆ ತಮ್ಮ ಹೊಸ ಮೊಬೈಲ್ ನಂಬರ್ ಅನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಪರಸ್ಪರ ಸಂಪರ್ಕದಲ್ಲಿ ಇಲ್ಲ. ದರ್ಶನ್ ಜೈಲಿಗೆ ಹೋಗಿ ಬಂದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರೊಟ್ಟಿಗೆ ಆತ್ಮೀಯತೆ ಹೆಚ್ಚಾಗಿದೆ. ಇತ್ತ ಪವಿತ್ರಾ ಗೌಡ ಜೊತೆಗೆ ಸಂಬಂಧವನ್ನು ಕಡಿದುಕೊಂಡಿದ್ದಾರೆ.
ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ನಡೆಯುವ ಮೊದಲು ಜೊತೆಯಾಗಿದ್ದ ಹಕ್ಕಿಗಳು ಇವಾಗ ಬೇರೆ ಬೇರೆಯಾಗುದ್ದು ,ಇಂದು ಮತ್ತೆ ಕೋರ್ಟಲ್ಲಿ ಅವಾಂತರ ಸೃಷ್ಟಿ ಮಾಡಿದ್ದಾರೆಂಬ ಗುಸು ಗುಸು ವಿಚಾರ ಕೇಳಿ ಬರ್ತಿದೆ.
ಆರ್ಸಿಬಿ vs ಎಸ್ಆರ್ಎಚ್ ಪಂದ್ಯ ಬೆಂಗಳೂರಿನಲ್ಲಿ ರದ್ದು…. ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!


