ಶನಿವಾರ (ಮೇ 10) ಸಂಜೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಬಳಿಕ, ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ಹಾಗೂ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಯಾವುದೇ ಫೈರಿಂಗ್ ಇಲ್ಲದೇ ಶಾಂತಿಯುತವಾಗಿತ್ತು ಎಂದು ಭಾರತೀಯ ಸೇನೆ ತಿಳಿಸಿದೆ.
ಗಡಿಯಲ್ಲಿ ಶೆಲ್ ದಾಳಿ ಮತ್ತು ಗುಂಡಿನ ದಾಳಿಯ ಯಾವುದೇ ಘಟನೆಗಳು ವರದಿಯಾಗಿಲ್ಲ. ಇದು ಕಳೆದ 19 ದಿನಗಳಲ್ಲೇ ಮೊದಲ ಶಾಂತಿಯುತ ರಾತ್ರಿಯಾಗಿದೆ. ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ದಾಳಿಯ ಬಳಿಕ ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆಯಾಗುತ್ತಿತ್ತು. 19 ದಿನಗಳ ಬಳಿಕ ಮೊದಲ ಸಂಪೂರ್ಣ ವಿರಾಮ ಕಂಡುಬಂದಿದೆ.
ಏಪ್ರಿಲ್ 23 ರಿಂದ ಮೇ 6 ರವರೆಗೆ, ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಅನೇಕ ವಲಯಗಳಲ್ಲಿ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯ ಘಟನೆಗಳು ವರದಿಯಾದವು. ಮೇ 7 ಮತ್ತು 11 ರ ನಡುವೆ ಭಾರೀ ಫಿರಂಗಿ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಯಾಗಿ ಉಲ್ಬಣಗೊಂಡಿತು.
ಕದನ ವಿರಾಮ ಉಲ್ಲಂಘನೆಯಿಂದ ಇತ್ತೀಚೆಗೆ ತೀವ್ರವಾದ ಶೆಲ್ ದಾಳಿಗಳಿಂದ ಭೂತ ಪಟ್ಟಣವಾಗಿ ಮಾರ್ಪಟ್ಟಿದ್ದ ಗಡಿ ಪ್ರದೇಶವಾದ ಪೂಂಚ್ನ ಸುರನ್ಕೋಟ್, ಇದೀಗ ಸಹಜ ಸ್ಥಿತಿಯತ್ತ ಮರಳಲು ಪ್ರಾರಂಭಿಸಿದೆ. ಕದನ ವಿರಾಮ ಒಪ್ಪಂದದ ನಂತರ ಗಡಿ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ, ಸುರನ್ಕೋಟ್ನಲ್ಲಿ ಭಾರೀ ಶೆಲ್ ದಾಳಿ ನಡೆದಿದ್ದು, ನಿವಾಸಿಗಳಲ್ಲಿ ಭೀತಿ ಮೂಡಿಸಿದೆ. ದಾಳಿಯ ನಂತರ, ನಿವಾಸಿಗಳು ಪಟ್ಟಣವನ್ನು ತೊರೆದಿದ್ದಾರೆ. ಕೆಲವರು ಹತ್ತಿರದ ಬೆಟ್ಟದ ಹಳ್ಳಿಗಳು ಮತ್ತು ಬಂಕರ್ಗಳಲ್ಲಿ ಆಶ್ರಯ ಪಡೆದರೆ, ಇತರರು ಜಮ್ಮುವಿನ ಸುರಕ್ಷಿತ ಭಾಗಗಳಿಗೆ ತೆರಳಿದ್ದಾರೆ. ಪರಿಸ್ಥಿತಿ ಈಗ ಸುಧಾರಿಸುತ್ತಿರುವುದರಿಂದ, ಜನರು ಶೀಘ್ರದಲ್ಲೇ ಪೂಂಚ್ನಲ್ಲಿರುವ ತಮ್ಮ ಮನೆಗಳಿಗೆ ಮರಳುವ ಭರವಸೆಯಲ್ಲಿದ್ದಾರೆ.
ಶಾಕಿಂಗ್ ನ್ಯೂಸ್! ಕಾಮಿಡಿ ಕಿಲಾಡಿ-3 ವಿನ್ನರ್, ಪ್ರತಿಭಾನ್ವಿತ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಇನ್ನಿಲ್ಲ!


