ಮಂಡ್ಯ: ಮದ್ದೂರು ತಾಲ್ಲೂಕು, ಚಿಕ್ಕರಸಿನಕೆರೆ ಹೋಬಳಿ, ಗೋಪನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸಿದ್ದೇಶ್ವರ ಮೂಲ ದೇವಸ್ಥಾನವನ್ನು ವಿಸ್ತರಣೆ ಮಾಡಿ ನಿರ್ಮಿಸಲಾಗಿದ್ದು , ಸದರಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ದಿನಾಂಕ 04.05.2025 ರಂದು ಬೆಳಗ್ಗೆ 05.30 ರಿಂದ ಹೋಮ-ಹವನ ಕಾರ್ಯಕ್ರಮಗಳು ನಡೆಸಲಾಗುತ್ತದೆ.
ಇದೇ ದಿನಾಂಕ 04.05.2025 ರಂದು ಬೆಳಗ್ಗೆ 05.30ರ ನಂತರ ಶ್ರೀ ಸಿದ್ದೇಶ್ವರ ದೇವಸ್ಥಾನದ ಕೊಂಡದ ಪ್ರಯುಕ್ತ ಗ್ರಾಮದಲ್ಲಿ ಬಂಡಿ ಕಾರ್ಯಕ್ರಮ ಇರುತ್ತದೆ. ದಿನಾಂಕ 05.05.2025ರ ಸೋಮವಾರ ಬೆಳಗ್ಗೆ 06.00 ಗಂಟೆಗೆ ಕೊಂಡ-ಹಾಯುವ ಕಾರ್ಯಕ್ರಮ ಇರುತ್ತದೆ.
ಇದೇ ದಿನಾಂಕ ಮಧ್ಯಾಹ್ನ 12.00 ಗಂಟೆಗೆ ಶ್ರೀ ಸಿದ್ದೇಶ್ವರ ಒಕ್ಕಲು ಮಕ್ಕಳು ಹಾಗು ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಈ ದಿವಸ ವಂತಿಗೆ ನೀಡಿರುವ ಕುಲಭಾಂದವರನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿದೆ.
ಶ್ರೀ ಸಿದ್ದೇಶ್ವರ ದೇವರ ಕುಲಭಾಂದವರು ತಮ್ಮ ಕುಟುಂಬ ಸಮೇತರಾಗಿ ಆಗಮಿಸಬೇಕೆಂದು ಹಾಗು ಗೋಪನಹಳ್ಳಿ ಸುತ್ತಮುತ್ತಲ ಭಕ್ತಾದಿಗಳು ಒಬ್ಬರಿಂದ ಒಬ್ಬರಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸಿದ್ದೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ನಿವೃತ್ತ ತಹಶೀಲ್ದಾರ್ ಮತ್ತು ಗೌರವಾಧ್ಯಕ್ಷರಾದ ಶಿವಣ್ಣ.ಎಸ್, ಅಧ್ಯಕ್ಷರಾದ ಶಿವರಾಮಯ್ಯ ಗೋಪನಹಳ್ಳಿಯ ಶ್ರೀ ಸಿದ್ದೇಶ್ವರ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಎಂದ ಸೋನು ನಿಗಮ್..ಕೆಚ್ಚೆದೆಯ ಕನ್ನಡಿಗರನ್ನು ಕೆಣಕಿದ ಗಾಯಕ


