BBMP
Loading ...

Koppal DC

ಕೊಪ್ಪಳ: ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ನೀಡದ ಕಾರಣ ಕೊಪ್ಪಳ ಜಿಲ್ಲಾಧಿಕಾರಿಯವರ ಅಧಿಕೃತ ಕಾರನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೊಪ್ಪಳ ಜಿಲ್ಲೆಯ ಗಂಗಾವತಿಯ ನ್ಯಾಯಾಲಯ ಆದೇಶಿಸಿದೆ.

ಜಿಲ್ಲಾಧಿಕಾರಿ ನಳಿನ್ ಅತುಲ್ ಅವರ ವಾಹನದ ಕೀಲಿಯನ್ನು ನೀಡಲು ನಿರಾಕರಿಸಿದ್ದರಿಂದ ಕಾರನ್ನು ವಶಪಡಿಸಿಕೊಳ್ಳಲು ಹೋಗಿದ್ದ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರು ಖಾಲಿ ಕೈಯಲ್ಲಿ ಹಿಂತಿರುಗಬೇಕಾಯಿತು. ಗಂಗಾವತಿ ನಗರಸಭೆ ವಾಲ್ಮೀಕಿ ವೃತ್ತದಿಂದ ಜಯನಗರ ಬಡಾವಣೆವರೆಗೆ ರಸ್ತೆ ಅಗಲೀಕರಣ ಮಾಡಲಾಗಿದೆ. ಈ ವೇಳೆ ಗಂಗಾವತಿಯ ಕಲ್ಮಠ ಹಾಗೂ ವೀರುಪಾಕ್ಷಪ್ಪ ಅವರ ಭೂಮಿ ಒತ್ತುವರಿ ಮಾಡಿ ರಸ್ತೆ ಅಗಲೀಕರಣ ಮಾಡಲಾಗಿದೆ. ಮಾಲೀಕರಿಗೆ ಮಾಹಿತಿ ನೀಡದೇ ರಸ್ತೆ ಅಗಲೀಕರಣ ಮಾಡಿದ್ದು, ಮತ್ತು ಪರಿಹಾರ ಕೊಡದ ಹಿನ್ನೆಲೆ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು.

ಸುದೀರ್ಘ 6 ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಕೋರ್ಟ್‌ ಜಿಲ್ಲಾಧಿಕಾರಿಯ ಕಾರು ಜಪ್ತಿ ಮಾಡಲು ಆದೇಶ ಮಾಡಿತ್ತು. ವಿಚಾರಣೆ ಮಾಡಿದ ಬಳಿಕ ಕಲ್ಮಠಕ್ಕೆ ಸುಮಾರು 7 ಲಕ್ಷ ರೂ., ವಿರೂಪಾಕ್ಷಪ್ಪ ಅವರಿಗೆ 6 ಲಕ್ಷ ರೂ. ಪರಿಹಾರ ನೀಡಲು ಆದೇಶ ಮಾಡಿತ್ತು. ಇದುವರೆಗೂ ಪರಿಹಾರ ಸಿಕ್ಕಿರಲಿಲ್ಲ. ಹೀಗಾಗಿ ಮಾಲೀಕರು ಮತ್ತೊಮ್ಮೆ ಕೋರ್ಟ್ ಮೊರೆ ಹೋದಾಗ ಗಂಗಾವತಿಯ ಹಿರಿಯ ಶ್ರೇಣಿಯ ನ್ಯಾಯಾಲಯ ಕಾರು ಜಪ್ತಿ ಮಾಡಲು ಆದೇಶ ನೀಡಿತ್ತು.

ಗಂಗಾವತಿ ಹಿರಿಯ ನ್ಯಾಯಾಲಯವನ್ನು ಇಬ್ಬರೂ ಸಂಪರ್ಕಿಸಿದ ನಂತರ, ನ್ಯಾಯಾಧೀಶ ರಮೇಶ್ ಎಸ್ ಗಾಣಿಗೇರ್ ಕಾರನ್ನು ವಶಪಡಿಸಿಕೊಳ್ಳಲು ಆದೇಶಿಸಿದರು. ವಕೀಲರಾದ ಸಂಜಯ್ ಬಿ ಚಾನೆಲ್, ರಾಮಣ್ಣ ಸೋದ್ರ ಮತ್ತು ಉಮೇಶ್ ಡಿ ಅವರು ಕಾರನ್ನು ವಶಪಡಿಸಿಕೊಳ್ಳಲು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಜಿಲ್ಲಾಧಿಕಾರಿ ಕೀಲಿಗಳನ್ನು ನೀಡಲು ನಿರಾಕರಿಸಿದಾಗ, ವಕೀಲರು ವಾಹನವನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಕಾರನ್ನು ಸ್ಥಳಾಂತರಿಸಲು ಸಾಧ್ಯವಾಗದ ಕಾರಣ ಅವರು ಅಲ್ಲಿಂದ ಹೊರಟುಹೋದರು.

ಮಾಜಿ DGP ಓಂ ಪ್ರಕಾಶ್ ಹತ್ಯೆ ಪ್ರಕರಣ: ಚೂರಿ ಇರಿತಕ್ಕೂ ಮುನ್ನ ಕಣ್ಣಿಗೆ ಖಾರದ ಪುಡಿ ಎರಚಿದ್ದ ಪತ್ನಿ, 10ಕ್ಕೂ ಹೆಚ್ಚು ಬಾರಿ ಇರಿದು ಕೊಲೆ

Leave a Reply

Your email address will not be published. Required fields are marked *