BBMP
Loading ...

Nanjavadhuta Shree

ಬೆಂಗಳೂರು: ಇಂದು (ಏ್ರಪಿಲ್​ 21) ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಹಾಗೂ ಪರಮಪೂಜ್ಯ ಜಗದ್ಗುರು ಯುಗಯೋಗಿ ಡಾ. ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಯವರ 46ನೇ ವರ್ಧಂತಿ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀಗಳಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಶ್ರೀಗಳ ವರ್ಧಂತಿ ಮಹೋತ್ಸವ ದಿನದಂದೇ ಮಧ್ಯಕರ್ನಾಟಕ ನೀರಾವರಿ ಹಕ್ಕೊತ್ತಾಯ ಸಮಾರಂಭವನ್ನು ಸಹ ಹಮ್ಮಿಕೊಳ್ಳಲಾಗಿದೆ. ಈ ವಿಶೇಷ ಸಮಾರಂಭ ಶಿರಾ ತಾಲೂಕಿನ ಶ್ರೀ ಕ್ಷೇತ್ರ ಪಟ್ಟನಾಯಕನಹಳ್ಳಿಯ ಸ್ಪಟಿಕಪುರಿ ಮಹಾಸಂಸ್ಥಾನ ಮಠದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ, ಶ್ರೀಗಳ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಲಾಗಿದೆ.

ಮಠದ ಕುರಿತು : ಪಟ್ಟ ನಾಯಕನಹಳ್ಳಿಯ ಶ್ರೀಮಠ ಅವಧೂತ ಗುರು ಪರಂಪರೆಗೆ ಸೇರಿದ್ದು. 19ನೇ ಶತಮಾನದಲ್ಲಿ ತಮ್ಮ ಗುರುಗಳ ನೆನಪಿನಲ್ಲಿ 1ನೇ ನಂಜಾವಧೂತ ಸ್ವಾಮೀಜಿ ಪೀಠವನ್ನು ಸ್ಥಾಪನೆ ಮಾಡಿದರು. ತಮ್ಮ ಪವಾಡಗಳಿಂದ ಭಕ್ತರ ಮನಗೆದ್ದ ಶ್ರೀಗಳು ಅಂತ್ಯ ಕಾಲದಲ್ಲಿ ಭಕ್ತರ ಮುಂದೆ ನಾನು ಶ್ರೀಮಠದ 7ನೇ ಗುರುವಾಗಿ ಮತ್ತೆ ಪೀಠಾರೋಹಣ ಮಾಡುತ್ತೇನೆ. ಅಂದು ಎಣ್ಣೆಯಿಲ್ಲದ ದೀಪ, ಎತ್ತಿಲ್ಲದ ಗಾಡಿ ಮತ್ತು ಶ್ರೀಮಠದ ಮುಂದೆ ಗಂಗೆ ಹರಿಯುತ್ತಾಳೆ ಎಂಬ ಮಾತನ್ನು ಹೇಳಿ ಲಿಂಗೈಕ್ಯರಾದರು.

ತದನಂತರ ರಂಗಾವಧೂತ ಶ್ರೀ, ಶ್ರೀರಂಗಾವಧೂತ ಶ್ರೀ, ಮುದ್ದರಂಗವಧೂತ ಶ್ರೀ, ಪರಮಹಂಸವಧೂತ ಶ್ರೀಗಳು ಹಾಗೂ ಶ್ರೀ ಗುರುಕುಮಾರವಾಧೂತ ಶ್ರೀಗಳು ಪೀಠವನ್ನು ಅಲಂಕರಿಸಿ, ಮಠದ ಪರಂಪರೆಯನ್ನು ಬೆಳೆಸಿಕೊಂಡು ಬಂದರು. ಪ್ರಸುತ್ತ 7ನೇ ಪೀಠಾಧ್ಯಕ್ಷರಾಗಿರುವ ಶ್ರೀ ನಂಜಾವಧೂತರು ಭಕ್ತರ ಅಪೇಕ್ಷೆಯಂತೆ ಅನೇಕ ಸಮಾಜಸೇವೆಯ ಕೆಲಸಗಳನ್ನು ಮಾಡುತ್ತಾ, ಶ್ರೀಮಠ ವಿಶ್ವ ಪ್ರಸಿದ್ಧಿಯಾಗುವಂತೆ ಮಾಡಿದರು.

ಶೇಂಗಾ, ಸೂರ್ಯಕಾಂತಿ, ರಾಗಿ ಮಾತ್ರ ಬೆಳೆಯುತ್ತಿದ್ದ ತಾಲೂಕಿನ ರೈತರಿಗೆ ಕಡಿಮೆ ನೀರು ಬಳಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು ಎಂದು ಅರಿವು ಮೂಡಿಸುವ ಕಾರ್ಯ ಮಾಡಿದ್ದು, ಶ್ರೀಗಳು. ರೈತರಿಗಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ನೂತನ ತಂತ್ರ ಜ್ಞಾನದ ಪರಿಚಯ ಮಾಡಿಕೊಟ್ಟಿದ್ದು ಶ್ರೀಗಳು. ಎಚ್.ಡಿ. ಕುಮಾರಸ್ವಾಮಿ, ಧರ್ಮಸಿಂಗ್, ಸದಾನಂದಗೌಡ, ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಮುಂತಾದವರು ಶ್ಲಾಘಿಸಿದ್ದಾರೆ.

ಜಲಕ್ಕಾಗಿ ಹಕ್ಕೊತ್ತಾಯ : ಯಾವ ನೀರಿನ ಸೆಲೆಯೂ ಇಲ್ಲದೆ ತತ್ತರಿಸಿರುವ ಬಯಲುಸೀಮೆಗೆ ನೀರನ್ನು ಯಾವ ಮೂಲದಿಂದ ಅದರೂ ಸರಿಯೇ ಕೂಡಿ ಎಂಬ ಹಕ್ಕೋತ್ತಾಯವನ್ನು ಸರ್ಕಾರಕ್ಕೆ ಮುಟ್ಟಿಸುವ ಶ್ರೀಗಳ ಮನದಾಳ ಅರಿತ ಸರ್ಕಾರ ಭದ್ರಾ ಮೇಲ್ಡಂಡೆ ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೆ ಮುಂದಾಗಿರುವುದು ಶ್ರೀಗಳ ಹೋರಾಟಕ್ಕೆ ಸಿಕ್ಕ ಯಶಸ್ಸು.

ಮದ್ವೆಯಾದ 3 ತಿಂಗಳಿಗೆ ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೋಟ್ಯಾಧಿಪತಿ ಮಂಗಳಮುಖಿ ಬರ್ಬರ ಹತ್ಯೆ!

Leave a Reply

Your email address will not be published. Required fields are marked *