BBMP
Loading ...

ಬೆಂಗಳೂರು: ಕಾಂಗ್ರೆಸ್‌ ಜಾತಿ ಗಣತಿ ದಂಗಲ್ ಜೋರಾಗಿದೆ. ಕಾಂಗ್ರೆಸ್‌ನಲ್ಲಿ ಜಾತಿ ಗಣತಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಾಳೆ ಸಂಜೆ ಡಿಸಿಎಂ ಡಿಕೆ ಶಿವಕುಮಾರ್‌ ಸಭೆ ಕರೆದಿದ್ದಾರೆ.

ಇಂದು ಸಂಜೆ 6 ಗಂಟೆಗೆ ಡಿಕೆಶಿ ತಮ್ಮ ಸರ್ಕಾರಿ ನಿವಾಸದಲ್ಲಿ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಈ ಸಭೆಗೆ ಒಕ್ಕಲಿಗ ಸಚಿವರು, ಶಾಸಕರು, ಎಂಎಲ್‌ಸಿಗಳಿಗೆ ಆಹ್ವಾನ ನೀಡಲಾಗಿದೆ.

ಜಾತಿ ಗಣತಿ ಸಂಬಂಧ ಏ.17 ರಂದು ಸಿಎಂ ಸಿದ್ದರಾಮಯ್ಯ ವಿಶೇಷ ಕ್ಯಾಬಿನೆಟ್‌ ಸಭೆಯನ್ನು ಕರೆದಿದ್ದಾರೆ. ಈ ಸಭೆಗೂ ಮುನ್ನ ಒಕ್ಕಲಿಗ ನಾಯಕರ ನಿಲುವು ಏನಿರಬೇಕೆಂದು ಡಿಕೆಶಿ ಅಭಿಪ್ರಾಯ ಸಂಗ್ರಹ ಮಾಡಲು ಈ ಸಭೆಯನ್ನು ಕರೆದಿದ್ದಾರೆ.

ಜಾತಿ ಗಣತಿ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಇನ್ನೂ ನಾನು ವರದಿಯನ್ನೇ ಓದಿಲ್ಲ. ಶಾಸಕರ ಜೊತೆ ಚರ್ಚಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಮ್ಮ ಮೆಟ್ರೋ ಬಿಗ್ ಅಪ್ಡೇಟ್: ಹಳದಿ ಮಾರ್ಗ ಜೂನ್ ನಿಂದ ಕಾರ್ಯಾರಂಭ!

Leave a Reply

Your email address will not be published. Required fields are marked *