ಬೆಂಗಳೂರು: ನಿನ್ನೆ (ಏಪ್ರಿಲ್ 12) ಬೆಂಗಳೂರಿನಲ್ಲಿ ಪ್ರಸಿದ್ಧ ಕರಗ ಮಹೋತ್ಸವ ನಡೆದಿದೆ. ಚಿತ್ರ ಪೌರ್ಣಮಿಯ ವಿಶೇಷ ದಿನವಾದ ನಿನ್ನೆ ಮಧ್ಯರಾತ್ರಿ ಧರ್ಮರಾಯಸ್ವಾಮಿ ರಥೋತ್ಸವ ಜರುಗಿತು. ಕರಗ ಶಕ್ತ್ಯೋತ್ಸವ ಸಹ ನಡೆಯಿತು,
ಈ ಮಹೋತ್ಸವಕ್ಕಾಗಿ ಭಕ್ತಗಣ ಕಾಯುತ್ತಿತ್ತು. ಬೆಳಗ್ಗೆಯಿಂದಲೇ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಭಕ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದರು. ಇನ್ನು ವಾಹಿನಿಗಳ ಮೂಲಕ ಖ್ಯಾತಿಯನ್ನು ಪಡೆದಿರುವ ಬ್ರಹ್ಮಾಂಡ ಗುರೂಜಿ ಸಹ ಧರ್ಮರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
ಚಿತ್ರ ಪೌರ್ಣಮಿಯ ಪ್ರಾಮುಖ್ಯತೆಯನ್ನು ವಿವರಿಸಿದ ಬ್ರಹ್ಮಾಂಡ ಗುರೂಜಿ ಇದೇ ದಿನದಂದು ಹನುಮ ಜನಿಸಿದ್ದು ಎಂದೂ ಸಹ ತಿಳಿಸಿದರು. ಅಲ್ಲದೇ ಈ ವರ್ಷ ರೋಗ ರುಜಿನಗಳು ಹೆಚ್ಚಾಗಲಿದೆ ಎಂದು ತಿಳಿಸಿದ ಇವರು ನರೇಂದ್ರ ಮೋದಿ ಒಂದೂವರೆ ವರ್ಷದಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದರು.
ವೈರಾಗ್ಯ ಬಂದಮೇಲೆ ರಾಜೀನಾಮೆ ಕೊಡೋದು, ವಿಶೇಷವಾಗಿ ಸ್ಥಾನ ಬಿಟ್ಟುಕೊಟ್ಟು ಹೋಗುವುದು ಸಾಮಾನ್ಯ ಎಂದ ಬ್ರಹ್ಮಾಂಡ ಗುರೂಜಿ ಸನ್ಯಾಸಿಯೊಬ್ಬ ದೇಶವನ್ನು ಬಳಿಕ ನಡೆಸಿಕೊಂಡು ಹೋಗುತ್ತಾನೆ ಎಂದರು. ಈ ಮೂಲಕ ಪರೋಕ್ಷವಾಗಿ ಯೋಗಿ ಆದಿತ್ಯನಾಥ್ ಮೋದಿ ರಾಜೀನಾಮೆಯ ಬಳಿಕ ಪ್ರಧಾನಿಯಾಗಲಿದ್ದಾರೆ ಎಂದು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.
ಈ ರೀತಿಯ ಹೇಳಿಕೆ ನೀಡುವ ಮುನ್ನ ಭಾರತ ಗೋರಕ್ಷಣಾ ದೇಶವಾಗಿದೆ. ಮೋದಿಯಂತಹ ಹಾಗೂ ಯೋಗಿಯಂತಹ ನಾಯಕರಿಂದ ಇದು ಸಾಧ್ಯವಾಗಿದೆ ಎಂದು ಉಲ್ಲೇಖಿಸಿದ್ದರು.
ಬೆಂಗಳೂರಿನಲ್ಲಿ ಅಗ್ನಿ ಅವಘಡ: 20ಕ್ಕೂ ಹೆಚ್ಚು ಶೆಡ್ಗಳು ಬೆಂಕಿಗಾಹುತಿ, ತಪ್ಪಿದ ದುರಂತ


