BBMP
Loading ...

Siddaramaiah

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಗೆ ಭಾರಿ ಸದ್ದು ಮಾಡಿದ ವಿಚಾರವೆಂದರೆ ಅದು ಸ್ಮಾರ್ಟ್​ ಮೀಟರ್​ ಹಗರಣ. ಸ್ಮಾರ್ಟ್​ ಮೀಟರ್​ ಅಳವಡಿಕೆ ಯೋಜನೆಯಡಿ ದುಪ್ಪಟ್ಟು ಹಣ ವಸೂಲಿ ಮಾಡಲು ಬೆಸ್ಕಾಂ ಮುಂದಾಗಿದೆ ಎಂದು ಸುದ್ದಿ ಭಾರಿ ಚರ್ಚೆಯಾಯಿತು. ಖಾಸಗಿ ಕಂಪನಿಯೊಂದಕ್ಕೆ ಟೆಂಟರ್​ ನೀಡಿರುವ ವಿಚಾರವೂ ಗೊತ್ತಾಯ್ತು. ಈ ಬಗ್ಗೆ ಮಾಧ್ಯಮಗಳು ತೀವ್ರ ಸುದ್ದಿ ಮಾಡುತ್ತಿದ್ದಂತೆ ಕಾಂಗ್ರೆಸ್​ ಹೈಕಮಾಂಡ್​ ಕೂಡ ಎಚ್ಚೆತ್ತುಕೊಂಡಿದೆ.

ಸ್ಮಾರ್ಟ್​ ಮೀಟರ್​​ ಹಗರಣ ಕಾಂಗ್ರೆಸ್​ ಹೈಕಮಾಂಡ್​ಗೂ ಮುಟ್ಟಿದ್ದು, ದೆಹಲಿಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಈ ಹಗರಣದಿಂದ ಸಿಎಂ ಸಿದ್ದರಾಮಯ್ಯ ಕೂಡ ಸಿಡಿಮಿಡಿಗೊಂಡಿದ್ದು, ದೆಹಲಿಯಿಂದ ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ದಿಢೀರ್​ ಇಂಧನ ಇಲಾಖೆ ಪ್ರಗತಿ ಪರಿಶೀಲನೆಗೆ ಮುಂದಾಗಿದ್ದಾರೆ. ಇಂಧನ ಸಚಿವ ಕೆಜೆ ಜಾರ್ಜ್ ಸೇರಿ ಇಲಾಖೆಯ ಅಧಿಕಾರಿಗಳಿಗೆ ಬುಲಾವ್​ ನೀಡಿದ್ದಾರೆ.

ಸಚಿವ ಕೆ ಜೆ ಜಾರ್ಜ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ. ಅಧಿಕಾರಿಗಳ ವಿರುದ್ಧವೂ ಚಾಟಿ ಬೀಸಲಿದ್ದಾರೆ ಸಿದ್ದರಾಮಯ್ಯ. ಇಂದು ಸಂಜೆ 5.30ಕ್ಕೆ ಸಿಎಂ ನಿವಾಸ ಕಾವೇರಿಯಲ್ಲಿ ಮೀಟಿಂಗ್​ ನಡೆಯಲಿದ್ದು, ಸ್ಮಾರ್ಟ್​ ಮೀಟರ್​ ಹಗರಣದ ಬಗ್ಗೆ ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳಿಂದ ಪಕ್ಷಕ್ಕೆ ಒಂದು ಒಳ್ಳೆಯ ಇಮೇಜ್​ ಬಂದಿದ್ದು, ಹಗರಣಗಳಿಂದ ಕೆಟ್ಟ ಹೆಸರು ಬರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೊಂದು ದೊಡ್ಡ ಹಗರಣ ಎಂದು ಬಿಜೆಪಿ ಮತ್ತು ಜೆಡಿಎಸ್​ ಪಕ್ಷದ ನಾಯಕರು ಕೂಡ ಧ್ವನಿ ಎತ್ತಿದ್ದಾರೆ. ಕೆಪಿಟಿಸಿಎಲ್​ನಲ್ಲಿ​ ಸ್ಮಾರ್ಟ್​ ಮೀಟರ್​ಗೆ ಶೆಡ್ಯೂಲ್​ ಆಫ್​ ರೇಟ್​ ಇರೋದು 2,400 ರೂಪಾಯಿ. ಆದರೆ, ಜಿಎಸ್​ಟಿ ಸೇರಿದಂತೆ 4,998 ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ಮೂಲಕ ಗ್ರಾಹಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲು ಮುಂದಾಗಿದೆ ಎನ್ನಲಾಗಿದೆ.

ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್‌ನಲ್ಲಿ 15,568 ಕೋಟಿ ರೂ. ಮೊತ್ತದ ಹಗರಣ ಆಗಿದೆ. ಇದು ರಾಜ್ಯದ ದೊಡ್ಡ ಹಗರಣ ಎಂದು ಶಾಸಕ ಅಶ್ವಥ್ ನಾರಾಯಣ್ ಕೂಡ ಬಾಂಬ್ ಸಿಡಿಸಿದ್ದಾರೆ.

ಸ್ಮಾರ್ಟ್​ ಮೀಟರ್​ ಹಗರಣ ಆರೋಪ: ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್​ನಿಂದ ತಡೆಯಾಜ್ಞೆ

Leave a Reply

Your email address will not be published. Required fields are marked *