BBMP
Loading ...

ಬೆಂಗಳೂರಿನ ಪಿಜಿ ಮಾಲೀಕರಿಗೆ ಬಿಬಿಎಂಪಿ ಶಾಕ್ ನೀಡಿದೆ. ಅನಧಿಕೃತ ಪಿಜಿಗಳ ಮೇಲೆ ದಾಳಿ ನಡೆಸಿ ಬೀಗ ಜಡಿಯಲಾಗುತ್ತಿದೆ. ವೈಟ್‌ಫೀಲ್ಡ್, ಮಾರತಹಳ್ಳಿ ಮತ್ತು ಕಾಡುಗೋಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ.

40 ರಸ್ತೆ ಇರುವ ಕಡೆ ಮಾತ್ರ ಪಿಜಿ ಇರಬೇಕು. ಹೀಗಂತ ಬಿಬಿಪಿಎಂಪಿ ಹೊಸ ರೂಲ್ಸ್​ ತಂದಿದೆ. ಹೀಗಾಗಿ 40 ಅಡಿ ರಸ್ತೆಯಿಲ್ಲ ಪಿಜಿಗಳನ್ನು ಟಾರ್ಗೆಟ್​ ಮಾಡಿರುವ ಬಿಬಿಎಂಪಿ ಬಾಗಿಲ್​ ಬಂದ್​ ಮಾಡಿಸುತ್ತಿದೆ.

ಬಹುತೇಕ ಪಿಜಿಗಳು 20 ರಿಂದ 30 ಅಡಿ ರಸ್ತೆಯಲ್ಲಿದ್ದು, ಅವಗಳನ್ನು ಹುಡುಕಿ ಬಾಗಿಲು ಮುಚ್ಚಿಸಲಾಗುತ್ತಿದೆ. ಈಗಾಗಲೇ 50ಕ್ಕೂ ಅಧಿಕ ಪಿಜಿಗಳನ್ನು ಬಂದ್​ ಮಾಡಿಸಲಾಗಿದೆ. ಬೆಂಗಳೂರಿನಲ್ಲಿ 25 ಸಾವಿರಕ್ಕೂ ಹೆಚ್ಚು ಪಿಜಿಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಿಜಿಗಳ ಬಾಗಿಲು ಬಂದ್​ ಆಗಲಿವೆ.

ಮೈಸೂರು ಸ್ಯಾಂಡಲ್ ಫ್ಯಾಕ್ಟರಿ: 416 ಕೋಟಿ ರೂಪಾಯಿ ದಾಖಲೆಯ ನಿವ್ವಳ ಲಾಭ

Leave a Reply

Your email address will not be published. Required fields are marked *