BBMP
Loading ...

BBMP Tax

ಬೆಂಗಳೂರು: ನಗರವಾಸಿಗಳಿಗೆ ಆಸ್ತಿ ತೆರಿಗೆ ಪಾವತಿಗೆ ಇವತ್ತೇ ಕೊನೇ ದಿನವಾಗಿದೆ. ಇಂದು ಆಸ್ತಿ ತೆರಿಗೆ ಪಾವತಿ ಮಾಡದಿದ್ರೆ ತೆರಿಗೆ ಜೊತೆಗೆ 100% ದಂಡ ಪಾವತಿಸಬೇಕಾಗುತ್ತದೆ. ಈ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ..

ಹೌದು. 2024-25ರ ಸಾಲಿನ ಆಸ್ತಿ ತೆರಿಗೆ ಸಂಗ್ರಹಕ್ಕೆ ಇಂದು ಕಡೇ ದಿನ. ಇಂದು ತೆರಿಗೆ ಪಾವತಿ ಮಾಡದಿದ್ದರೆ ತೆರಿಗೆ ಜೊತೆಗೆ ಅದರ 100% ದಂಡ ಕಟ್ಟಬೇಕಾಗುತ್ತದೆ. ಆಸ್ತಿ ತೆರಿಗೆ ಎಷ್ಟು ಬಾಕಿ ಇದೆಯೋ ಅಷ್ಟೇ ದಂಡವನ್ನೂ ಆಸ್ತಿ ಮಾಲೀಕರು ಪಾವತಿಸಬೇಕಿದೆ. ಇದರ ಜೊತೆಗೆ ವಾರ್ಷಿಕ 15% ಬಡ್ಡಿ ದರವೂ ಇರಲಿದೆ.

ಈ ಹಿಂದೆ ಆಸ್ತಿ ತೆರಿಗೆಯ ದುಪ್ಪಟ್ಟು ಮೌಲ್ಯದ ದಂಡ ಪಾವತಿಸಬೇಕಿತ್ತು. ಆದರೆ ಸರ್ಕಾರ ಇದನ್ನು ಕಡಿತಗೊಳಿಸಿ ಆಸ್ತಿತೆರಿಗೆಯ ಸಮಾನ ಹಣವನ್ನು ದಂಡವಾಗಿ ಕಟ್ಟಲು ಸೂಚಿಸಿದೆ. ಅಂದರೆ 100 ರೂಪಾಯಿ ಆಸ್ತಿ ತೆರಿಗೆ ಬಾಕಿ ಇದ್ದರೆ, ಇದರ ಮೇಲೆ ಮತ್ತೆ 100 ರೂಪಾಯಿಯಷ್ಟು ದಂಡ ಬೀಳಲಿದೆ. ಆದರೆ ಈ ಅವಕಾಶವೂ ಮಾರ್ಚ್ 31ಕ್ಕೆ ಅಂದರೆ ಇಂದು ಕೊನೆಯಾಗಲಿದೆ. ನಂತರ 100% ದಂಡ ಹಾಗೂ 15% ಬಡ್ಡಿ ಜೊತೆಗೆ ಆಸ್ತಿ ತೆರಿಗೆ ಪಾವತಿಸಬೇಕಿದೆ. ಅಂದರೆ 1,000 ರೂ ಆಸ್ತಿ ತೆರಿಗೆ ಇದ್ದರೆ, 2,000 ರೂ ಜೊತೆಗೆ 15% ಬಡ್ಡಿಯನ್ನೂ ಕಟ್ಟಬೇಕಾಗುತ್ತದೆ.

ಬಿಬಿಎಂಪಿಯು 2024-25ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ 5,210 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ, ಈವರೆಗೆ 4,604 ಕೋಟಿ ರೂಪಾಯಿ ವಸೂಲಿ ಆಗಿದೆ. ಮಾರ್ಚ್ 31ರೊಳಗೆ ಬಾಕಿ ಆಸ್ತಿ ತೆರಿಗೆ ಪಾವತಿಸದಿದ್ದರೆ ಡಬಲ್ ಹಣ ದಂಡದ ರೂಪದಲ್ಲಿ ವಸೂಲಿ ಮಾಡಲು ಬಿಬಿಎಂಪಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಇಂದು ರಾತ್ರಿ 11 ಗಂಟೆ ಒಳಗಡೆ ತೆರಿಗೆ ಪಾವತಿಸಿದ್ರೆ ದುಪ್ಪಟ್ಟು ತೆರಿಗೆ ಪಾವತಿಸುವ ಹೊರೆ ತಪ್ಪಲಿದೆ.

ಒಟ್ಟಾರೆ ಆರ್ಥಿಕ ವರ್ಷ ಅಂತ್ಯ ಆಗ್ತಾ ಇದೆ.. ಆಸ್ತಿ ತೆರಿಗೆ ಪಾವತಿಗೆ ಮಾರ್ಚ್ 31ರ ವರೆಗೂ ಅವಕಾಶ ನೀಡಲಾಗಿತ್ತು. ಯಾರು ತೆರಿಗೆ ಪಾವತಿಸಿಲ್ಲವೋ ಅವರಿಗೆ 100% ದಂಡ ಹಾಕಿ ವಸೂಲಿ ಮಾಡಲಿದ್ದು ತೆರಿಗೆ ಪಾವತಿದಾರರು ಇಂದು ರಾತ್ರಿ 12 ಗಂಟೆ ಒಳಗಡೆ ತೆರಿಗೆ ಪಾವತಿಸಿದ್ರೆ ದಂಡದಿಂದ ಬಚಾವ್ ಆಗಬಹುದು.

ಬೆಂಗಳೂರಿಗರಿಗೆ ಬಿಗ್ ಶಾಕ್: ನಾಳೆಯಿಂದ ಕಸಕ್ಕೆ ಸೆಸ್ ಜಾರಿ! ಎಷ್ಟು ತೆರಿಗೆ? ಇಲ್ಲಿದೆ ಸಂಪೂರ್ಣ ಮಾಹಿತಿ…

Leave a Reply

Your email address will not be published. Required fields are marked *