BBMP
Loading ...

RV Deshapande

ಕಾರವಾರ: ಸರ್ಕಾರವು ಯಾವುದನ್ನೂ ಉಚಿತವಾಗಿ ನೀಡಬಾರದು. ಏನೇ ನೀಡಿದರೂ ಅದಕ್ಕೆ ಹಣ ನಿಗದಿಯಾಗಬೇಕು. ಉಚಿತ ಎನ್ನುವುದೇ ಅಪಾಯಕಾರಿ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.

ದಾಂಡೇಲಿಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಅದರ ಲಾಭ ಪಡೆದುಕೊಂಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಸೇವೆ ನೀಡಿದಂತೆ ಪುರುಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂದರು.

ಎಲ್ಲರಿಗೂ ಉಚಿತವಾಗಿ ನೀಡುತ್ತಾ ಹೋದರೆ ಸಾರಿಗೆ ಸಂಸ್ಥೆ ನಡೆಸುವುದು ಕಷ್ಟವಾಗಬಹುದು. ಮುಂದೆ ಉಚಿತ ಯೋಜನೆ ಅಪಾಯಕಾರಿಯಾಗಬಹುದು. ಉಚಿತ ಯೋಜನೆಗಳನ್ನ ಉಳ್ಳವರು ಬಳಸಬಾರದು ಎಂದು ಹೇಳಿದರು.

ಅಮಾಯಕರ ಜೀವ ಬಲಿ ಪಡೆಯುತ್ತಲೇ ಇದೆ ಬಿಬಿಎಂಪಿ ಕಸದ ಲಾರಿ: 4 ವರ್ಷಗಳಲ್ಲಿ ಬಲಿಯಾದವರೆಷ್ಟು? ಇಲ್ಲಿದೆ ಮಾಹಿತಿ…

Leave a Reply

Your email address will not be published. Required fields are marked *