ಲಖನೌ: ಗಂಡನೊಬ್ಬ ತನ್ನ 8 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಮದುವೆ ಮಾಡಿಕೊಟ್ಟ ಘಟನೆ ದೇಶಾದ್ಯಂತ ಭಾರಿ ಚರ್ಚೆಯಾಗುತ್ತಿದೆ. ಅದರಲ್ಲೂ ಲವರ್ ಜತೆ ಪತ್ನಿಯನ್ನು ಮದುವೆ ಮಾಡಿಕೊಡಲು ಗಂಡ ಕೊಟ್ಟಿರುವ ಕಾರಣ ಮಾತ್ರ ಎಲ್ಲರ ಹುಬ್ಬೇರಿಸಿದೆ. ಆ ಕಾರಣ ಏನು ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.
ಅಂದಹಾಗೆ ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಸಂತ ಕಬೀರ್ ನಗರದ ಕತಾರ್ ಜೋತ್ ಗ್ರಾಮದಲ್ಲಿ. ಬಬ್ಲು ಎಂಬಾತ 2017ರಲ್ಲಿ ಗೋರಖ್ಪುರದ ರಾಧಿಕಾ ಎಂಬಾಕೆಯನ್ನು ವಿವಾಹವಾದನು. ಗಂಡ ಹೆಂಡತಿ ಇಬ್ಬರೂ ಸಂತೋಷದಿಂದ ಜೀವನ ನಡೆಸುತ್ತಿದ್ದರು. ತಮ್ಮ 8 ವರ್ಷದ ದಾಂಪತ್ಯ ಜೀವನದಲ್ಲಿ ಇಬ್ಬರು ಮಕ್ಕಳು ಹುಟ್ಟಿದರು. ಹಿರಿಯ ಮಗ ಆರ್ಯನ್ಗೆ 7 ವರ್ಷ ಮತ್ತು ಕಿರಿಯ ಮಗಳು ಶಿವಾನಿ 2 ವರ್ಷ ವಯಸ್ಸು.
ಜೀವನೋಪಾಯಕ್ಕಾಗಿ ಬಬ್ಲು ಆಗಾಗ ಮನೆಯಿಂದ ಹೊರಗೆ ಇರುತ್ತಿದ್ದ. ಈ ಸಮಯದಲ್ಲಿ, ಆತನ ಪತ್ನಿ ರಾಧಿಕಾ ಅದೇ ಗ್ರಾಮದ ವಿಕಾಸ್ ಎಂಬ ಯುವಕನೊಂದಿಗೆ ಪ್ರೇಮ ಸಂಬಂಧವನ್ನು ಬೆಳೆಸಿದಳು. ಅವರ ಸಂಬಂಧ ಬಹಳ ಕಾಲ ನಡೆಯಿತು. ಈ ಸಂಬಂಧ ಗ್ರಾಮದಲ್ಲಿ ಚರ್ಚೆಯ ವಿಷಯವಾಯಿತು. ಬಳಿಕ ಕುಟುಂಬ ಸದಸ್ಯರಿಗೂ ಈ ವಿಷಯ ತಿಳಿದಾಗ ಅವರು ಬಬ್ಲುಗೆ ಮಾಹಿತಿ ನೀಡಿದರು.
ಬಳಿಕ ಬಬ್ಲು ರಾಧಿಕಾ ಜೊತೆ ಈ ವಿಷಯವನ್ನು ಚರ್ಚಿಸಿ, ಆಕೆಯ ಮನವೊಲಿಸಲು ಪ್ರಯತ್ನಿಸಿದನು. ಆದರೆ, ರಾಧಿಕಾ, ತನ್ನ ಗೆಳೆಯನಿಗಾಗಿ ತನ್ನ ಮಕ್ಕಳನ್ನು ಸಹ ಬಿಟ್ಟುಕೊಡಲು ಮುಂದಾದಳು. ತನಗೆ ತನ್ನ ಗೆಳೆಯ ಬೇಕೆಂದು ಒತ್ತಾಯಿಸಿದಳು. ಬಳಿಕ ಒಂದು ನಿರ್ಧಾರಕ್ಕೆ ಬಂದ ಬಬ್ಲು, ಮಕ್ಕಳನ್ನು ನಾನೇ ಬೆಳೆಸುತ್ತೇನೆ ಎಂದು ಹೇಳಿದ. ಅಲ್ಲದೆ, ತಾನೇ ಮುಂದೆ ನಿಂತು ತನ್ನ ಪತ್ನಿ ರಾಧಿಕಾಳನ್ನು ವಿಕಾಸ್ ಜತೆ ಮದುವೆ ಮಾಡಿಕೊಟ್ಟ. ಮದುವೆ ಸಮಯದಲ್ಲಿ ರಾಧಿಕಾ ಅಳುತ್ತಿದ್ದಳು. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
ಕಾರಣವೇನು?
ಇದೀಗ ಬಬ್ಲು, ತನ್ನ ಹೆಂಡ್ತಿಯನ್ನ ಆಕೆಯ ಪ್ರಿಯಕರನ ಜತೆ ಮದುವೆ ಮಾಡಿಕೊಡಲು ಕಾರಣ ಏನೆಂಬುದನ್ನು ಬಿಚ್ಚಿಟ್ಟಿದ್ದಾನೆ. ಮಾಧ್ಯಮಗಳ ಬಳಿ ಮಾತನಾಡಿರುವ ಬಬ್ಲು, ತನ್ನ ಜೀವ ಉಳಿಸಿಕೊಳ್ಳಲು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಂದಹಾಗೆ, ಇತ್ತೀಚೆಗೆ ಮೀರತ್ನಲ್ಲಿ ನಡೆದ ಘಟನೆಯಿಂದ ಬಬ್ಲು ಭಯಭೀತರಾಗಿದ್ದರು. ಮೀರತ್ನಲ್ಲಿ ಪ್ರಿಯಕರ ಮತ್ತು ಪತ್ನಿ ಸೇರಿ ತನ್ನ ಪತಿಯನ್ನ ತುಂಡುಗಳಾಗಿ ಕತ್ತರಿಸಿ ಡ್ರಮ್ನಲ್ಲಿ ತುಂಬಿದ್ದರು. ಇದರಿಂದ ಹೆದರಿದ ಬಬ್ಲು ಈ ನಿರ್ಧಾರಕ್ಕೆ ಬಂದಿದ್ದಾನೆ.
ನನಗೆ ಸಂಭವಿಸಬಹುದಾದ ಯಾವುದೇ ಅಪಘಾತಗಳನ್ನು ತಪ್ಪಿಸಲು ನಾನು ಅವರಿಬ್ಬರ ಮದುವೆ ಮಾಡಲು ನಿರ್ಧರಿಸಿದೆ. ಇತ್ತೀಚಿನ ದಿನಗಳಲ್ಲಿ, ಗಂಡಂದಿರು ತಮ್ಮ ಹೆಂಡತಿಯರಿಂದ ಕೊಲೆಯಾಗುತ್ತಿರುವುದನ್ನು ನಾವು ನೋಡಿದ್ದೇನೆ. ಮೀರತ್ನಲ್ಲಿ ಏನಾಯಿತು ಎಂಬುದನ್ನು ನೋಡಿದ ನಂತರ, ನಾವಿಬ್ಬರೂ ಶಾಂತಿಯುತವಾಗಿ ಬದುಕಲು ನನ್ನ ಹೆಂಡತಿಯನ್ನು ಅವಳ ಪ್ರಿಯಕರನೊಂದಿಗೆ ಮದುವೆ ಮಾಡಲು ನಿರ್ಧರಿಸಿದೆ ಎಂದು ಬಬ್ಲು ಹೇಳಿದ್ದಾನೆ.
ಬೆಂಗಳೂರಿನಲ್ಲಿ ಪತ್ನಿ ತುಂಡರಿಸಿ ಸೂಟ್ಕೇಸ್ಗೆ ತುಂಬಿದ್ದ ಟೆಕ್ಕಿ ಪತಿ: ಮಹಾರಾಷ್ಟ್ರದಲ್ಲಿ ಹಂತಕ ಅರೆಸ್ಟ್


