BBMP
Loading ...

Kothagere

ತುಮಕೂರು: ವಾಟ್ಸ್​ಆಯಪ್​ ಸ್ಟೇಟಸ್ ಮೂಲಕ ಕುಣಿಗಲ್ ತಾಲ್ಲೂಕು ಕೊತ್ತಗೆರೆ ಗ್ರಾಮ ಪಂಚಾಯಿತಿ ಸದಸ್ಯನ ತಾಕತ್ತು ಪ್ರಶ್ನಿಸಿದ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯ ನಡೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೊತ್ತಗೆರೆ ಗ್ರಾಪಂ ಮಾವಿನಕಟ್ಟೆ ಕ್ಷೇತ್ರದಲ್ಲಿ ಅವಿರೋಧ ಆಯ್ಕೆಯಾಗಿದ್ದ ಗೌತಮಿ ಅದೇ ವ್ಯಾಪ್ತಿಯ ಎಂ.ಎಲ್.ಪರಮೇಶ ಅವರ ಗೆಲುವಿಗೆ ಟೊಂಕಕಟ್ಟಿ ನಿಂತು ಗೆಲ್ಲಿಸಿಕೊಂಡಿದ್ದರು.

ಬಳಿಕ ಗೌತಮಿ ಗ್ರಾಪಂ ಅಧ್ಯಕ್ಷೆ ಕೂಡ ಆಗಿದ್ದರು. ಇತ್ತೀಚೆಗೆ ಸದಸ್ಯರು ಗೌತಮಿ ವಿರುದ್ಧ ತಿರುಗಿಬಿದ್ದು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಾಯ ತಂದರು.

ಗೌತಮಿ ಕೋರ್ಟ್ ಮೆಟ್ಟಿಲೇರಿದರೂ ಬಿಡದ ಸದಸ್ಯರು ಅವಿಶ್ವಾಸ ಮಂಡಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿದ್ದು ಸದಸ್ಯರ ನಡುವೆ ವೈಮನಸ್ಸಿಗೆ ಕಾರಣವಾಗಿದ್ದು, ಈ ರಂಪ, ಬೀದಿರಂಪವಾಗಿದೆ. ಇದರ ಬೆನ್ನಲ್ಲೇ ಗೌತಮಿ ಮಾಡಿದ್ದಾರೆ ಎನ್ನಲಾದ ವಾಟ್ಸ್‌ಆಯಪ್ ಸಂದೇಶದ ಸ್ಟೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹಣ ಕೊಡು ಇಲ್ಲ ಗಾಂಡು ಅಂತ ಒಪ್ಕೋ… ನೀ ಚುನಾವಣೆಯಲ್ಲಿ ಗೆದ್ದು ಮೆರೀತಿರೋದು ನಾನು ಖರ್ಚು ಮಾಡಿದ ಹಣದಿಂದ. ನನ್ನ ಅಪ್ಪನ 22 ಲಕ್ಷ ಹಣ ತಂದು ನಿನ್ನ ಚುನಾವಣೆಯಲ್ಲಿ ಗೆಲ್ಲಿಸಿದೆ. ಅದೂ ನನ್ನ ಅಪ್ಪನ ಜಮೀನು ಮಾರಿ ತಂದ ಹಣ. ಆ ಹಣದಿಂದಲೇ ಗೆದ್ದು ಇವತ್ತು ನನ್ನ ಬೆನ್ನಿಗೆ ಚೂರಿ ಹಾಕ್ತೀಯಾ…. ಮರ್ಯಾದೆಯಿಂದ ಹಣ ವಾಪಸ್ ಕೊಡು. ಇಲ್ಲಾಂದ್ರೆ ಕುಡಿದ ಅಮಲಲ್ಲಿ ನಿನ್ನ ಬಾಯಲ್ಲಿ ಬಂದಿರೋ ಆ ಮಾತುಗಳೆಲ್ಲಾ ಜನರ ಮುಂದೆ ಬಯಲು ಆಗುತ್ತೆ… ಕಂಡೋರ ದುಡ್ಡಲ್ಲಿ ಮೆಂಬರ್ ಆಗೋದಲ್ಲ. ತಿ*ದಲ್ಲಿ ಧಮ್ ಇದ್ರೆ ನನ್ ದುಡ್ಡು ವಾಪಸ್ ಕೊಡು. ಇಲ್ಲ ನೀ ಗಾಂಡು ಅಂತ ಒಪ್ಕೋ.. ಇದ್ಯಾವುದು ಮಿಂಡ್ರಿ ದುಡ್ಡಲ್ಲ. ನನ್ನ ಅಪ್ಪನ ಜಮೀನು ಮಾರಿ ನಿನ್ನ ಗೆಲ್ಸೋಕೆ ಓಡಾಡಿದ್ದೀನಿ. ಅಮೌಂಟ್ ಕ್ಲಿಯರ್ ಆಗಬೇಕು ಅಷ್ಟೇ… ನಿನ್ನ ತಮ್ಮ ಹೇಳಿದ್ದಕ್ಕೆ ನಾನು ಹಣ ಕೊಟ್ಟದ್ದು. ನೀ ಕೊಡದಿದ್ದರೆ ನಿನ್ನ ತಮ್ಮನ ಮನೆ ಅತ್ರ ಹೋಗ್ತೀನಿ… ಎಂದು ಎಚ್ಚರಿಸಿ ಸಂದೇಶ ಕಳುಹಿಸಿರುವುದು ಕದನ ಕುತೂಹಲ ಮೂಡಿಸಿದೆ. ಇಬ್ಬರೂ ಕಾಂಗ್ರೆಸ್ ಬೆಂಬಲಿತರು ಎಂಬುದೇ ವಿಶೇಷ.

KSRTC ಪ್ರಯಾಣಿಕರಿಗೆ ಸಿಹಿ ಸುದ್ದಿ: ಯುಗಾದಿಗೆ 2,000 ಹೆಚ್ಚುವರಿ ಬಸ್, ಮುಂಗಡ ಬುಕ್ಕಿಂಗ್​ಗೆ 10 ರಷ್ಟು ರಿಯಾಯಿತಿ

Leave a Reply

Your email address will not be published. Required fields are marked *