BBMP
Loading ...

Police

ಬೆಂಗಳೂರು: ಟ್ರಾಫಿಕ್ ಪೊಲೀಸರು ಅಲ್ಲಲ್ಲಿ ವಾಹನ ತಪಾಸನೆ ಹೆಸರಲ್ಲಿ ಹಣ ವಸೂಲಿ ಮಾಡುತ್ತಾರೆ ಎನ್ನುವ ಆರೋಪ ಕೇಳಿಬರೋದು ಹೊಸದೇನಲ್ಲ. ಅದರಲ್ಲೂ ವೀಕೆಂಡ್ ಬಂದ್ರೆ ಸಾಕು ವಾಹನ ಸವಾರರು ಹೊರಗಡೆ ಹೋದಾಗ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದು, ದಂಡ ಕೊಟ್ಟೋದು ಒಂದೆಡೆ ಆದ್ರೆ ದಂಡದ ಬದಲಿಗೆ ಕಡಿಮೆ ಹಣದಲ್ಲಿ ಪೊಲೀಸರು ವ್ಯವಹಾರಕ್ಕೆ ಇಳಿಯುತ್ತಾರೆ ಎನ್ನುವ ಆರೋಪಗಳು ಹಿಂದೆ ಕೇಳಿಬಂದಿವೆ.

ಇದೀಗ ಟ್ರಾಫಿಕ್ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಹೆಸರಲ್ಲಿ ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮತ್ತೊಮ್ಮೆ ಕೇಳಿಬಂದಿದೆ. ರಾತ್ರಿ ವೇಳೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುವಾಗ, ವಾಹನ ಸವಾರರಿಂದ ಪೊಲೀಸರು ಹಣ ಪಡೆಯುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಪೊಲೀಸರ ಕರಾಳ ಮುಖ ವಿಡಿಯೋದಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈ ವೀಡಿಯೊದಲ್ಲಿ ಪೊಲೀಸರು ನಡು ರಸ್ತೆಯಲ್ಲಿಯೇ ಹಣ ಪಡೆಯುವುದನ್ನು ಮಹಡಿ ಮೇಲೆ ನಿಂತು ವೀಡಿಯೋ ಚಿತ್ರಿಕರಿಸಿದ್ದಾರೆ. ರಾತ್ರಿ ವೇಳೆ ಒಂದಲ್ಲ ಒಂದು ಕಾರಣ ಹೇಳಿ ವಾಹನ ಸವಾರರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *