BBMP
Loading ...

KSLECA

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಸಂಘದ ಸದಸ್ಯರು ಹಾಗೂ ವಿದ್ಯುತ್ ಗ್ರಾಹಕರ ಹಲವಾರು ಸಮಸ್ಯೆಗಳನ್ನು ಪರಿಸುವಂತೆ ಆಗ್ರಹಿಸಿ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್​ ನೇತೃತ್ವದಲ್ಲಿ ಇಂದಿನಿಂದ ಅನಿರ್ಧಿಷ್ಟಾವಧಿವರೆಗೆ ಬೃಹತ್​ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಇಂದು (ಮಾರ್ಚ್​ 18) ನಗರದ ಫ್ರೀಡಂ ಪಾರ್ಕ್​ನಲ್ಲಿ ಬೆಳಗ್ಗೆ 10 ಗಂಟೆಯಿಂದ ಅನಿರ್ಧಿಷ್ಟವಧಿಕಾಲದವರೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ. ತಂಡ ಬೇಧ ಮರೆತು ಮಾಜಿ ಪದಾಧಿಕಾರಿಗಳು ಸಂಘದ ಎಲ್ಲಾ ಸದಸ್ಯರು ಹಾಗೂ ಗ್ರಾಹಕರು ಭಾಗವಹಿಸಿ ಬೃಹತ್ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಸಂಘದ ವತಿಯಿಂದ ಹೋರಾಟ ಸಮಿತಿ ಚೇರ್ಮನ್​ ವೈ.ಎಚ್​. ಆನಂದ್​ ಅವರು ಮನವಿ ಮಾಡಿದ್ದಾರೆ.

ಆದಷ್ಟು ಬೇಗ ಸಂಘದ ಬೇಡಿಕಗಳನ್ನು ಈಡೇರಿಸದೇ ಹೋದರೆ, ಪ್ರತಿಭಟನೆ ಇನ್ನಷ್ಟು ತೀವ್ರವಾಗಿರಲಿದೆ ಎಂದು ಸಂಘದ ರಾಜ್ಯಾಧ್ಯಕ್ಷರಾದ ಸಿ.ರಮೇಶ್​ ಅವರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಸಂಘದ ಬೇಡಿಕೆಗಳು ಏನು?
1) ವಿದ್ಯುತ್ ಸ್ಮಾರ್ಟ್ ಮೀಟರ್ ಮಾಪಕಗಳ (SMART ENERGY METER) ದರ ಹೆಚ್ಚಳದ ಬಗ್ಗೆ ಹಾಗೂ 3 ತಿಂಗಳ ಕಾಲಾವಕಾಶ ನೀಡುವ ಬಗ್ಗೆ.
2) ಬೆ.ವಿ.ಕಂ ನಗರ ವ್ಯಾಪ್ತಿಯ ಕಛೇರಿಗಳಲ್ಲಿ ನೆಟವರ್ಕ್ / ಸರ್ವರ್ ಸಮಸ್ಯೆ ಮತ್ತು ಗ್ರಾಮಾಂತರ ವ್ಯಾಪ್ತಿಯ ಐಡಿಯಾ ಇನ್ಫಿನಿಟಿ ನೆಟವರ್ಕ್ ಇಲ್ಲದಿರುವ ಬಗ್ಗೆ (BRAZ).
3) ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಿರುವ ಬಗ್ಗೆ.
4) 2012 ರ ಹಿಂದೆ ಎರಡನೇ ದರ್ಜೆ ಪರವಾನಗಿ ವಿದ್ಯುತ್ ಗುತ್ತಿಗೆದಾರರಿಗೆ ಒಂದನೇ ದರ್ಜೆ ಪರವಾನಗಿ ಪಡೆಯಲು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆಗೆ ವಿನಾಯಿತಿ ನೀಡಿ ಅನುಭವದ ಆಧಾರದ ಮೇಲೆ ಪ್ರಥಮ ದರ್ಜೆ ವಿದ್ಯುತ್ ಪರವಾನಗಿ ನೀಡುವ ಬಗ್ಗೆ.
5) 66/11ಕೆವಿ ಹಾಗೂ 110/11 ವಿದ್ಯುತ್ ವಿತರಣಾ ಕೇಂದ್ರಗಳ ಪಾಳಿ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸಲು ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಿಗೆ ಅನುಮತಿಯನ್ನು ನೀಡುವ ಬಗ್ಗೆ.
6).2 ಮೆಗಾ ವ್ಯಾಟ್ ಹಾಗೂ ಮತ್ತು ಅದಕ್ಕಿಂತ ಹೆಚ್ಚು ಮೆಗಾ ವ್ಯಾಟ್ ಸಂಪರ್ಕ ಪಡೆಯುವಾಗ ವಿಳಂಭವಾಗುತ್ತಿರುವ ಬಗ್ಗೆ.
7) ಗ್ರಾಮಾಂತರ ವ್ಯಾಪ್ತಿಯಲ್ಲಿ ದಿನಾಂಕ: 19.11.2023 ಹಿಂದೆ ಅಕ್ರಮವಾಗಿ ಕೃಷಿ ವಿದ್ಯುತ್ ಸಂಪರ್ಕವನ್ನು ಪಡೆದಿರುವ ಕೃಷಿ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸುವ ಬಗ್ಗೆ.
8) ಎಸ್ಕಾಂಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಕೂಲಿ ಕೆಲಸಗಳನ್ನು (LABOUR AWARD) ನಿರ್ವಹಿಸುವಾಗ ನೌಕರರುಗಳಿಗೆ ವಿದ್ಯುತ್ ಅವಘಡಗಳಾದಂತಹ ಸಂಧರ್ಭದಲ್ಲಿ ಕಂಪನಿಗಳಿಂದ ಅಪಘಾತವಾದ / ಮರಣವನ್ನು ಹೊಂದಿದ ಕಾರ್ಮಿಕರಿಗೆ ಕಂಪನಿ ವತಿಯಿಂದ (ಎಸ್ಕಾಂ) ಪರಿಹಾರವನ್ನು ನೀಡುವ ಬಗ್ಗೆ
9).ಈಗಾಗಲೇ ಜಾರಿಯಾಗಿರುವ 1ರಿಂದ 5ಲಕ್ಷದವರೆಗಿನ ತುಂಡು ಗುತ್ತಿಗೆಯ ಕಾಮಗಾರಿಯನ್ನು ಸ್ಥಳಿಯ ಗುತ್ತಿಗೆದಾರರಿಗೆ ಕೊಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಬಗ್ಗೆ
10) ಆರ್ಥಿಕವಾಗಿ ಹಿಂದುಳಿದ ವಿದ್ಯುತ್ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಗಮವನ್ನು ರಚಿಸಿಕೊಡುವ ಬಗ್ಗೆ

Leave a Reply

Your email address will not be published. Required fields are marked *