BBMP
Loading ...

BMTC

ಬೆಂಗಳೂರು: ಬೆಂಗಳೂರಿನಿಂದ ದೇವನಹಳ್ಳಿಯ ವಿಜಯಪುರಕ್ಕೆ ಹೋಗ್ತಿದ್ದ ಬಸ್ ನಲ್ಲಿ ಕಳ್ಳಿಯರ ಕೈ ಚಳಕ ತೋರಿರುವ ಘಟನೆ ನಡೆದಿದೆ. ಪಕ್ಕದಲ್ಲಿದ್ದ ಮಹಿಳಾ‌ ಪ್ರಯಾಣಿಕರ ಮಾಂಗಲ್ಯ ಸರ ಕಳ್ಳತನ ಮಾಡಿದ್ದು, ಮತ್ತೊಂದು ಕಿಲಾಡಿ ಲೇಡಿಯಿಂದ ಮೊಬೈಲ್ ಕಳ್ಳತನ ಮಾಡಿ ಎಸ್ಕೇಪ್‌ ಆಗುವ ವೇಳೆಗೆ ಲೇಡಿ ಕಂಡಕ್ಟರ್ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹೌದು ಸೋಮವಾರ ರಾತ್ರಿ 7:15 ಕ್ಕೆ ಮೆಜೆಸ್ಟಿಕ್​ನಿಂದ ದೇವನಹಳ್ಳಿ ಬಳಿಯ ವಿಜಿಪುರಕ್ಕೆ ಹೋಗುತ್ತಿದ್ದ ಡಿಪೋ- 50ಕ್ಕೆ ಸೇರಿದ ಬಿಎಂಟಿಸಿ ಬಸ್​ ಅನ್ನು ಆಂಧ್ರಪ್ರದೇಶದಿಂದ ಬಂದ ನಾಲ್ವರು ಮಹಿಳೆಯರು ಹತ್ತಿದ್ದಾರೆ. ಬಸ್ (BUS) ಪ್ರಯಾಣದ ವೇಳೆ ಪಕ್ಕದಲ್ಲಿದ್ದ ಮಹಿಳೆ ಬ್ಯಾಗ್​ನಿಂದ ಓರ್ವ ಕಳ್ಳಿ ಮೊಬೈಲ್ ಕಳ್ಳತನ ಮಾಡುತ್ತಿದ್ದಳು. ಇದನ್ನು, ನೋಡಿದ ಮಹಿಳಾ ಕಂಡಕ್ಟರ್ ಚಾಲಕ ಮುನಿರತ್ನ ಅವರಿಗೆ ವಿಚಾರ ತಿಳಿಸಿದ್ದಾರೆ.‌

ಬಸ್ ಡೋರ್ ಲಾಕ್ ಮಾಡಿ ಪೋಲಿಸರು ಬರುವರೆಗೂ ಬಸ್ ನಿಲ್ಲಿಸಿ ಎಂದು ಹೇಳಿದ್ದಾರೆ. ಮಹಿಳಾ ಕಂಡಕ್ಟರ್​ ಮಾತನಿನಂತೆ ಚಾಲಕ ಡೋರ್​ ಲಾಕ್ ಮಾಡಿ, ಪೊಲೀಸರು ಬರುವವರೆಗೂ ಬಸ್​ ನಿಲ್ಲಿಸಿದ್ದಾರೆ. ಚಾಲಕ ಡೋರ್ ಲಾಕ್ ಮಾಡ್ತಿದ್ದಂತೆ ಕಳ್ಳಿಯರು ಮಗು ಅಳುತ್ತಿದೆ. ನಾವು ಹೋಗಬೇಕೆಂದು ನಾಟಕವಾಡಿ ಪರಾರಿಯಾಗಲು ಯತ್ನಿಸಿದ್ದಾರೆ.

ಆದರೆ, ಚಾಲಕ ಮಂಜುನಾಥ್ ಡೋರ್ ತೆರೆಯಲಿಲ್ಲ. ಬಳಿಕ, ಕದ್ದ ಮೊಬೈಲ್ ಮತ್ತು ಮಾಂಗಲ್ಯ ಸರವನ್ನು ಕಳ್ಳಿಯರು ಸೀಟ್ ಕೆಳಗೆ ಬಿಸಾಡಿದ್ದಾರೆ. ಪೋಲಿಸರು ಬಂದ ಮೇಲೆ ಮಹಿಳೆಯರ ಬ್ಯಾಗ್ ಚೆಕ್ ಮಾಡಿದಾಗ ಬ್ಯಾಗ್ ತುಂಬ ಬಂಗಾರ ಮತ್ತು ಸಾಕಷ್ಟು ಮೊಬೈಲ್ ಪೋನ್ ಪತ್ತೆಯಾಗಿವೆ. ಯಲಹಂಕ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಜನತೆಗೆ ಬಿಗ್ ಶಾಕ್: ಪ್ರತಿ 1 ಲೀಟರ್‌ ನೀರಿಗೆ 1 ಪೈಸೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ..!

Leave a Reply

Your email address will not be published. Required fields are marked *