BBMP
Loading ...

Chamundamma

ಬೆಂಗಳೂರು: ರಾಜಣ್ಣ ಹಿಂದು ಮಿಲ್ಟ್ರಿ ಹೋಟೆಲ್​ ಹೆಸರಿನಲ್ಲಿ ಸುಮಾರು 40 ವರ್ಷಗಳಿಂದ ಸ್ವಾವಲಂಬಿ ಮಹಿಳೆಯಾಗಿ ಸಾವಿರಾರು ಜನರಿಗೆ ಶುಚಿ-ರುಚಿಯಾಗಿ ಆಹಾರ ತಯಾರು ಮಾಡುವಲ್ಲಿ ತಮ್ಮದೇಯಾದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಚಾಮುಂಡಮ್ಮ ಅವರಿಗೆ ವಿಶ್ವ ಮಹಿಳಾ ದಿನದಂದು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಂದು ಗೋವಿಂದರಾಜನಗರದ ವಿಧಾನಸಭಾ ಕ್ಷೇತ್ರದ ಪಾಪಯ್ಯ ಗಾರ್ಡನ್​ನಲ್ಲಿ ನಡೆದ ಸಮಾರಂಭದಲ್ಲಿ ಚಾಮುಂಡಮ್ಮ ಅವರಿಗೆ ಶಾಸಕ ಪ್ರಿಯಕೃಷ್ಣ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಹೋಟೆಲ್​ ಹೆಸರಿನ ಬೋರ್ಡ್​ ಇಲ್ಲದೆಯೇ ಸುಮಾರು 40 ವರ್ಷಗಳಿಂದ ರಾಜಣ್ಣ ಹಿಂದು ಮಿಲ್ಟ್ರಿ ಹೋಟೆಲ್​ ಸೇವೆ ಸಲ್ಲಿಸುತ್ತಿದೆ. ನಗರದ ಪ್ರಮುಖ ಮಿಲ್ಟ್ರಿ ಹೋಟೆಲ್​ಗಳಲ್ಲಿ ರಾಜಣ್ಣ ಮಿಲ್ಟ್ರಿ ಹೋಟೆಲ್​ ಕೂಡ ಒಂದು. ನಿತ್ಯವೂ ನೂರಾರು ಮಂದಿ ಈ ಹೋಟೆಲ್​ ರುಚಿಯನ್ನು ಸವಿಯುತ್ತಿದ್ದಾರೆ.

ಬೆಂಗಳೂರು 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗ ಕೊನೆಗೂ ಫೈನಲ್‌..!

Leave a Reply

Your email address will not be published. Required fields are marked *