BBMP
Loading ...

MP Tejashwi

ಬೆಂಗಳೂರು:-ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾರ್ಚ್​ 6ರಂದು ಹೆಸರಘಟ್ಟ ಸಮೀಪದ ಖಾಸಗಿ ರೆಸಾರ್ಟ್​ನಲ್ಲಿ ಶಿವಶ್ರೀ ಸ್ಕಂದಪ್ರಸಾದ್ ಜೊತೆಗೆ ತೇಜಸ್ವಿ ಸೂರ್ಯ ಅವರು ಮದುವೆಯಾಗಿದ್ದರು.

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರ ಅದ್ದೂರಿ ಆರತಕ್ಷತೆ ನಡೆದಿದೆ. ನವ ದಂಪತಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಅನೇಕ ಗಣ್ಯರು ಶುಭಹಾರೈಸಿದ್ದಾರೆ.

ಸಂಭ್ರಮದಲ್ಲಿ ಸಿಎಂ, ಡಿಸಿಎಂ, ಸಚಿವರು, ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಆಪ್ತರು, ಬಂಧುಗಳು ಆಗಮಿಸಿ ಜೋಡಿಯನ್ನು ಆಶೀರ್ವದಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಜಿ.ಪರಮೇಶ್ವರ್‌, ಸಚಿವ ಜಮೀರ್‌ ಅಹ್ಮದ್‌ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ನವದಂಪತಿಗೆ ವಿಶ್‌ ಮಾಡಿದರು.

ಮಾರ್ಚ್‌ 5 ಮತ್ತು 6 ರಂದು ತೇಜಸ್ವಿ ಸೂರ್ಯ ವಿವಾಹ ಸಮಾರಂಭ ಬೆಂಗಳೂರು ಕನಕಪುರ ರೆಸಾರ್ಟ್‌ನಲ್ಲಿ ನಡೆದಿತ್ತು. ಇದಕ್ಕೆ ಕುಟುಂಬ ಸದಸ್ಯರು, ಆಪ್ತ ವಲಯದ ಸ್ನೇಹಿತರು, ರಾಜಕೀಯ ಗಣ್ಯರು ಸಾಕ್ಷಿಯಾಗಿದ್ದರು.

ನಟಿ ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಕೇಳಿಬರುತ್ತಿದೆ ಕರ್ನಾಟಕದ ಪ್ರಭಾವಿ ರಾಜಕಾರಣಿ ಹೆಸರು!

Leave a Reply

Your email address will not be published. Required fields are marked *