BBMP
Loading ...

Whatsapp

ಬೆಂಗಳೂರು: ಇತ್ತೀಚೆಗೆ ಸತೇಂದರ್ ಕುಮಾರ್ ಆಂಟಿಲ್ ಕೇಸ್‌ನಲ್ಲಿ ಕೂಡ ವಾಟ್ಸಾಪ್‌ ಮೂಲಕ ಪೊಲೀಸರು ನೋಟಿಸ್ ನೀಡಿದ್ದರು. ಆದರೆ ಸುಪ್ರೀಂಕೋರ್ಟ್ ಸಿಆರ್​​ಪಿಸಿ, ಬಿಎನ್​​ಎಸ್​ಎಸ್​ ಕಾಯ್ದೆಯಲ್ಲಿ ಸೂಚಿಸಿರುವಂತೆ ನೋಟಿಸ್ ನೀಡಬೇಕು ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಆದೇಶ ನೀಡಿದೆ.

ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ನೀಡಿದ್ದ ವಾಟ್ಸಾಪ್‌ ನೋಟಿಸ್ ರದ್ದುಪಡಿಸಿ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರ ಪೀಠ ಶುಕ್ರವಾರ ಆದೇಶ ಹೊರಡಿಸಿದೆ. ಇಂತಹ ಅಭ್ಯಾಸವು ಕಾನೂನಿನಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ನೋಟಿಸ್ ನೀಡುವುದು ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆಡುಗೋಡಿ ಪೊಲೀಸರು ಬಿಎನ್‌ಎಸ್‌ಎಸ್, 2023 ರ ಕಲಂ 35 (3) ರ ಅಡಿಯಲ್ಲಿ ನೀಡಿದ ನೋಟಿಸ್‌ನಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ಆಡುಗೋಡಿ ಪೊಲೀಸರು ವಾಟ್ಸಾಪ್‌ ಮೂಲಕ ಐಟಿ ಕಾಯ್ದೆ ಸೆ.66(C), 66(D)ರಡಿ ನೋಟಿಸ್ ನೀಡಿದ್ದರು. ಆದರೆ ವಾಟ್ಸಾಪ್‌ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ಆದೇಶ ನೀಡಿದೆ.

ಲ್ಯಾಪ್​ಟಾಪ್​ ಮತ್ತು 1 ಲಕ್ಷ ರೂ. ಲಂಚ ಪಡೆದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯ ಪಿಎಸ್‌ಐ, ಕಾನ್ಸ್​ಟೇಬಲ್​ ಸಸ್ಪೆಂಡ್‌

Leave a Reply

Your email address will not be published. Required fields are marked *