BBMP
Loading ...

BBMP Election

ಬೆಂಗಳೂರು: ಪ್ರಸ್ತುತ ಬಿಬಿಎಂಪಿ ಆಡಳಿತ ಹಿಡಿತಕ್ಕೆ ಸಿಗುತ್ತಿಲ್ಲ. ಪಾಲಿಕೆಯಲ್ಲಿಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ. ಪಾರದರ್ಶಕತೆಯಂತೂ ಇಲ್ಲವೇ ಇಲ್ಲ. ರಾಜಧಾನಿ ವಿಸ್ತಾರವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಯೂ ತೀವ್ರಗತಿಯಲ್ಲಿಹೆಚ್ಚುತ್ತಿದೆ. 18 ವರ್ಷಗಳ ಹಿಂದೆ ರಚನೆಯಾಗಿದ್ದ ಬಿಬಿಎಂಪಿ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಜಾಗತಿಕ ಮಟ್ಟದ ನಗರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಸಮರ್ಥ ಆಡಳಿತಕ್ಕೆ ಪರ್ಯಾಯ ಪ್ರಯತ್ನ ಅನಿವಾರ್ಯವಾಗಿದೆ ಎಂದು ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಅಭಿಪ್ರಾಯಪಟ್ಟಿದೆ.

ಬಿಬಿಎಂಪಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿಮಂಗಳವಾರ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿಶಾಸಕ ರಿಜ್ವಾನ್‌ ಅರ್ಷದ್‌ ಅಧ್ಯಕ್ಷತೆಯ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ತರಾತುರಿಯಲ್ಲಿಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕವನ್ನು ಪರಾಮರ್ಶಿಸಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಅವರಿಗೆ ವರದಿ ಸಲ್ಲಿಸಿದೆ. ಇದರ ಹಿಂದೆ ಚುನಾವಣೆ ಮುಂದೂಡುವ ತಂತ್ರವಿದೆ ಎಂಬ ಆರೋಪವೂ ಇದೆ.

ಈ ವಿಧೇಯಕವನ್ನು ವಿಧಾನಮಂಡಲದಲ್ಲಿಮಂಡಿಸಿ ಅಂಗೀಕಾರ ಪಡೆಯಬೇಕಿದೆ. ಆದರೆ, ಪ್ರತಿಪಕ್ಷಗಳು ಹಾಗೂ ಸಂಘ-ಸಂಸ್ಥೆಗಳು ಬಿಬಿಎಂಪಿ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಅಂಗೀಕಾರ ಪಡೆದುಕೊಂಡರೆ, 2-7 ಪಾಲಿಕೆಗಳಾಗಿ ವಿಭಜನೆ, ಹೊರವಲಯದ ಪ್ರದೇಶಗಳ ಸೇರ್ಪಡೆ, ವಾರ್ಡ್‌ಗಳ ಮರುವಿಂಗಡಣೆ, ಮೀಸಲಾತಿ ಪ್ರಕಟಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ಎಲ್ಲಪ್ರಕ್ರಿಯೆಗಳ ಪೂರ್ಣಕ್ಕೆ ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ.

ಬಿಬಿಎಂಪಿಯನ್ನು ಗರಿಷ್ಠ 7 ಸಣ್ಣ ಪಾಲಿಕೆಗಳಾಗಿ ವಿಭಜಿಸಿ ಸ್ವತಂತ್ರ ಆಡಳಿತಕ್ಕೆ ಅನುವು ಮಾಡಿಕೊಡುವುದು ಹಾಗೂ ಒಟ್ಟಾರೆ ಬೆಂಗಳೂರು ಅಭಿವೃದ್ಧಿ ಸಮನ್ವಯಕ್ಕಾಗಿ ‘ಗ್ರೇಟರ್‌ ಬೆಂಗಳೂರು ಪ್ರಾಧಿಕಾರ’ ರಚಿಸಲು ಪ್ರಸ್ತಾಪಿಸಲಾಗಿದೆ. ಪ್ರಾಧಿಕಾರದ ಅಧ್ಯಕ್ಷರಾಗಿ ಸಿಎಂ ಹಾಗೂ ಉಪಾಧ್ಯಕ್ಷರಾಗಿ ಬೆಂಗಳೂರು ನಗರ ಉಸ್ತುವಾರಿ ಸಚಿವರು ಇರುತ್ತಾರೆ ಎಂಬ ಈ ಮುಂಚಿನ ವಿಧೇಯಕದ ಪ್ರಸ್ತಾಪವನ್ನು ವಿಧಾನಸಭೆ ಸಮಿತಿಯೂ ಒಪ್ಪಿದೆ.

ಜನಸಂಖ್ಯೆ ಮತ್ತು ಆದಾಯ ಮೂಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಾಲಿಕೆಯನ್ನು ವಿಭಜನೆ ಮಾಡಬೇಕು. ಕನಿಷ್ಠ ಆದಾಯ ಮೂಲಗಳಿರುವ ಪಾಲಿಕೆಗೆ ಸರಕಾರವೇ ಆರ್ಥಿಕ ಬೆಂಬಲ ನೀಡಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.

ಕನಿಷ್ಠ 100 ವಾರ್ಡ್‌
ಭವಿಷ್ಯದ ಅಗತ್ಯಗಳಿಗಾಗಿ ಗರಿಷ್ಠ 7 ಪಾಲಿಕೆಗಳಾಗಿ ವಿಭಜಿಸಲು ವಿಧೇಯಕದಲ್ಲಿಅವಕಾಶ ಕಲ್ಪಿಸಲಾಗಿದ್ದರೂ ಎಷ್ಟು ಪಾಲಿಕೆಗಳನ್ನು ರಚಿಸಬೇಕು ಎಂಬುದನ್ನು ಸಮಿತಿಯು ಸರಕಾರದ ವಿವೇಚನೆಗೆ ಬಿಟ್ಟಿದೆ. ಆದರೆ, 100 ರಿಂದ 120 ವಾರ್ಡ್‌ಗಳನ್ನು ಒಳಗೊಂಡು ಒಂದೊಂದು ಪಾಲಿಕೆ ರಚಿಸಬಹುದು ಎಂದು ಸಲಹೆ ಮಾಡಿದೆ. ವಿಸ್ತರಣೆಯಾಗುವ ಗ್ರೇಟರ್‌ ಬೆಂಗಳೂರು ವ್ಯಾಪ್ತಿ ಆಧರಿಸಿ ಬಿಬಿಎಂಪಿಯನ್ನು 4 ಪಾಲಿಕೆಗಳಾಗಿ ರಚಿಸುವ ಸಾಧ್ಯತೆಗಳು ಹೆಚ್ಚಿವೆ.

ಸುಮಾರು 840 ಚ.ಕಿ.ಮೀ. ವಿಸ್ತೀರ್ಣದ ಬೆಂಗಳೂರು ನಗರದ ಅಭಿವೃದ್ಧಿ ಸದ್ಯದ ವ್ಯವಸ್ಥೆಯಲ್ಲಿ ಸಾಧ್ಯವೇ ಇಲ್ಲ. ಹಾಗಾಗಿ, ವಿಭಜನೆ ಅತ್ಯಗತ್ಯ. ಜತೆಗೆ ಸಂಬಂಧಿತ ಸಂಸ್ಥೆಗಳ ನಡುವೆ ಸಮನ್ವಯ ಗಟ್ಟಿಗೊಳಿಸಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾಗಬೇಕು. ಪ್ರಾಧಿಕಾರವು ಸಮನ್ವಯಕ್ಕೆ ಸೀಮಿತವಾಗಲಿದ್ದು, ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡಲು ವಿಧೇಯಕದಲ್ಲಿಪ್ರಸ್ತಾಪಿಸಲಾಗಿದೆ. ಆದರೆ, ಬೆಂಗಳೂರು ಬ್ರಾಂಡ್‌ ಗರಿಮೆಗೆ ಕುಂದು ಬರದಿರಲು ಪಾಲಿಕೆಗಳಿಗೆ ಹೊಸ ಹೆಸರುಗಧಿಳು ಬೇಡ. ದಿಕ್ಕುಗಳಿಂದಲೇ ಗುರುತಿಸಬೇಕು ಎಂದು ಸಲಹೆ ಮಾಡಲಾಗಿದೆ ಎಂದು ರಿಜ್ವಾನ್‌ ತಿಳಿಸಿದರು.

ಪೂರ್ಣಾವಧಿಗೆ ಇಬ್ಬರೇ ಮೇಯರ್‌
ಸದ್ಯ ಬಿಬಿಎಂಪಿಯಲ್ಲಿಮೇಯರ್‌ ಅವಧಿ 11 ತಿಂಗಳಿಗೆ ಸೀಮಿತವಾಗಿದ್ದು, ಇಷ್ಟು ಕಡಿಮೆ ಅವಧಿಯಲ್ಲಿವಾಸ್ತವಿಕ ಪರಿಸ್ಥಿತಿ ಅರ್ಥ ಮಾಡಿಕೊಂಡು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಮೇಯರ್‌ ಅವಧಿಯನ್ನು ಕನಿಷ್ಠ 30 ತಿಂಗಳು ಅಂದರೆ, 5 ವರ್ಷಗಳ ಸಾಮಾನ್ಯ ಸಮಿತಿಯ ಅವಧಿಯಲ್ಲಿಇಬ್ಬರು ಮೇಯರ್‌ಗಳಿಗೆ ಮಾತ್ರ ಅವಕಾಶ ಇರಬೇಕು ಎಂದು ಸಮಿತಿ ತನ್ನ ವರದಿಯಲ್ಲಿಶಿಫಾರಸು ಮಾಡಿದೆ.

ಆಗಸ್ಟ್‌ನಲ್ಲಿ ಚುನಾವಣೆ?
ಜನಗಣತಿ ಕಾರ್ಯ ಆರಂಭಿಸಲು ಕೇಂದ್ರ ಸರಕಾರ ಬಯಸಿದ್ದು, ಅದಕ್ಕೆ ಪೂರಕ ಅವಕಾಶ ಕಲ್ಪಿಸಿಕೊಡಲು ರಾಜ್ಯಕ್ಕೆ ಸೂಚಿಸಿದೆ. ಅಂತೆಯೇ ಜನಗಣತಿ ಶುರುವಾಗುವ ವೇಳೆಗೆ ವಾರ್ಡ್‌ಗಳ ಗಧಿಡಿ ನಿಗದಿಯಾಗಬೇಕಿದೆ. ಬಜೆಟ್‌ ಅಧಿವೇಶನದಲ್ಲಿವಿಧೇಯಕ ಅಂಗೀಕರಿಸಿ ಗ್ರೇಟರ್‌ ಬೆಂಗಳೂರು ರಚನೆ ಮಾಡಲು ಸರಕಾರ ಬಯಸಿದ್ದು, ಜುಲೈ ವೇಳೆಗೆ ಬಿಬಿಎಂಪಿ ವಿಭಜನೆ ಮತ್ತು ವಾರ್ಡ್‌ ಮರುವಿಂಗಡಣೆ ಕಾರ್ಯ ಅಂತಿಮಗೊಳಿಸುವ ಸಾಧ್ಯತೆ ಇದೆ. ಹಾಗಾಗಿ, ಆಗಸ್ಟ್‌ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಪುರಪಿತೃಗಳಿಲ್ಲಎಂಬ ಕೊರಗು ನಿವಾರಣೆಯಾಗಲಿದೆ ಎಂದು ರಿಜ್ವಾನ್‌ ಅರ್ಷದ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಹಾ ಶಿವರಾತ್ರಿ: ಫೆ.26ರಂದು ಬೆಂಗಳೂರಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ

Leave a Reply

Your email address will not be published. Required fields are marked *