ಬೆಂಗಳೂರು: ನಗರದಲ್ಲಿ ಕುಡಿಯುವ ನೀರು ಪೋಲು ಮಾಡದಂತೆ ಜಲಮಂಡಳಿ ಖಡಕ್ ಆದೇಶ ಮಾಡಿತ್ತು. ಹೀಗಿದ್ದರೂ ವ್ಯರ್ಥ ಮಾಡಿದಂತ 112 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೇ 5.60 ಲಕ್ಷ ದಂಡವನ್ನು ಒಂದೇ ವಾರದಲ್ಲಿ ವಸೂಲಿ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದಂತ ಡಾ.ರಾಮ್ ಪ್ರಸಾದ್ ಮನೋಹರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬೆಂಗಳೂರಲ್ಲಿ ಫೆ.17ರಂದು ಅನಗತ್ಯವಾಗಿ ನೀರು ಪೋಲು ಮಾಡದಂತೆ ಆದೇಶ ಮಾಡಲಾಗಿತ್ತು. ಈ ಮೂಲಕ ನೀರಿನ ಕೊರತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
ಅನಗತ್ಯವಾಗಿ ನೀರು ಪೋಲು ಮಾಡುವುದನ್ನು ತಡೆಗಟ್ಟುವುದು ನಮ್ಮ ಉದ್ದೇಶವಾಗಿದೆ. ಈ ಆದೇಶವನ್ನು ಮೀರಿ ನಗರದಲ್ಲಿ ವಾಹನ ಸ್ವಚ್ಛಗೊಳಿಸೋದಕ್ಕೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣ ಸೇರಿ ಇತರೆ ಕಾರಣಕ್ಕೆ ಕುಡಿಯುವ ನೀರು ಪೋಲು ಮಾಡಿರುವುದು ಕಂಡು ಬಂದಿದೆ. ಅಂತವರ ವಿರುದ್ಧ 112 ಕೇಸ್ ದಾಖಲಿಸಲಾಗಿದೆ. 5.60 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ ಎಂಬುದಾಗಿ ತಿಳಇಸಿದ್ದಾರೆ.


