ಬೆಂಗಳೂರು: ಬಿಬಿಎಂಪಿ ಕನ್ನಡ ಕಡ್ಡಾಯ ಅಂತೇನೋ ರೂಲ್ಸ್ ಮಾಡಿತ್ತು. ಆದ್ರೆ ಇದೀಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನೋ ಗಾದೇ ಮಾತಿನ ಹಾಗೆ ಬಿಬಿಎಂಪಿಯೇ ಕನ್ನಡವನ್ನ ಮರೆತಿದೆ. ಬಿಬಿಎಂಪಿ ಕಡೆಯಿಂದ ‘ನಮ್ಮ ರಸ್ತೆ ನಮ್ಮ ಹೆಮ್ಮೆ’ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿತ್ತು. ಆದ್ರೆ ಈ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ. ಬಿಬಿಎಂಪಿ ಕಡೆಯಿಂದ ಆಯೋಜಿಸಿರುವ ನಮ್ಮ ರಸ್ತೆ ನಮ್ಮ ಹೆಮ್ಮೆ ಕಾರ್ಯಕ್ರಮದ ಸುತ್ತಲೂ ಅಳವಡಿಸಿರುವ ಮಾಹಿತಿ ಫಲಕದಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದೆ. ಹೆಡ್ ಲೈನ್ ಹೊರತುಪಡಿಸಿ ಉಳಿದೆಲ್ಲ ಮಾಹಿತಿ ಇಂಗ್ಲಿಷ್ನಲ್ಲಿ ತುಂಬಿಹೋಗಿದೆ.
ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಅಂತ ಹೇಳುವ ಸರ್ಕಾರವೇ ಈಗ ಕನ್ನಡ ಮರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ ಕನ್ನಡರಾಮಯ್ಯ ಅಂತಲೇ ಪ್ರಖ್ಯಾತಿ ಪಡೆದಿದ್ದಾರೆ. ಆದ್ರೆ ಇವರ ಸರ್ಕಾರದಲ್ಲೇ ಕನ್ನಡ ಮಾಯವಾಯ್ತಾ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.
‘ನಮ್ಮ ರಸ್ತೆ, ನಮ್ಮ ಹೆಮ್ಮೆ‘ ಕಾರ್ಯಕ್ರಮದಲ್ಲಿಲ್ಲ ಕನ್ನಡ!
ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನಮನೆಯಲ್ಲಿ ಕಾರ್ಯಕ್ರಮ ಜರುಗುತ್ತಿದೆ. ಬೆಸ್ಕಾಂ, ಮೆಟ್ರೋ, ಬಿಎಂಟಿಸಿ, ಸಂಚಾರಿ ಪೊಲೀಸ್, ಡಲ್ಟ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ರೂ ಕೂಡ ಕಾರ್ಯಕ್ರಮದಲ್ಲಿ ಕನ್ನಡವೇ ಮಾಯವಾಗಿದೆ. ಶೇ. 95ರಷ್ಟು ಇಂಗ್ಲಿಷ್ ಬಳಕೆ ಮಾಡಿದ್ರೆ, ಕೇವಲ ಶೇ. 5 ರಷ್ಟು ಮಾತ್ರ ಕನ್ನಡಕ್ಕೆ ಆದ್ಯತೆ ನೀಡಲಾಗಿದೆ.
ಅಂಗಡಿ ನಾಮಫಲಕಗಳಿಗಷ್ಟೇ ಕನ್ನಡ ಕಡ್ಡಾಯನಾ?
ಕರ್ನಾಟಕದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯ ಅಂತ ಹೇಳಿ ಬಿಬಿಎಂಪಿ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಹಲವು ಸಂಘಟನೆಗಳು ಕೂಡ ಕನ್ನಡ ಕಡ್ಡಾಯ ಮಾಡಬೇಕು ಅಂತ ಹೇಳಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ವು. ಜೊತೆಗೆ ಇಂಗ್ಲಿಷ್ ನಾಮಫಲಕಗಳನ್ನ ಕಿತ್ತು ಬಿಸಾಡಿ ಅಂಗಡಿ ಮಾಲೀಕರಿಗೆ ಬಿಬಿಎಂಪಿ ದಂಡ ಕೂಡ ವಿಧಿಸಿತ್ತು. ಇದೆಲ್ಲಾ ಆದ ಮೇಲೆ ಕೋರ್ಟ್‌ನಿಂದ ಒಂದಿಷ್ಟು ಗಡುವು ಅಂತ ಕೊಟ್ಟು ನಾಮಫಲಕ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿತ್ತು. ನಂತರ ಮುಂದಿನ ದಿನಗಳಲ್ಲಿ ಇದು ಅಸ್ತಿತ್ವಕ್ಕೆ ಬಂದು, ಎಲ್ಲಾ ಅಂಗಡಿ, ಬೀದಿ ಬದಿ ವ್ಯಾಪಾರಿಗಳು ಜೊತೆಗೆ ಎಲ್ಲಾ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲೂ ಕನ್ನಡ ಕಡ್ಡಾಯ ಮಾಡಿ ಕನ್ನಡದ ನಾಮಫಲಕಗಳನ್ನ ಅಳವಡಿಸಿದ್ರು. ಇದರಿಂದ ಕನ್ನಡ ಪರ ಸಂಘಟನೆಗಲು ಕೂಡ ಸಂಭ್ರಮಿಸಿದ್ರು.
ಕನ್ನಡವನ್ನೇ ಮರೆತು ಬಿಡ್ತಾ ಬಿಬಿಎಂಪಿ?
ಆದ್ರೆ, ಬಿಬಿಎಂಪಿಯೇ ಈಗ ಕನ್ನಡ ಕಡ್ಡಾಯ ಎಂಬ ಮಾಹಿತಿಯನ್ನ ಮರೆತಂತಿದೆ. ತಾನೇ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕನ್ನಡವನ್ನ ಮರೆತಿದೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್ ಕುಮಾರ್ ಗಾಜಿನಮನೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಸುತ್ತಲೂ ಅಳವಡಿಸಿರುವ ಮಾಹಿತಿ ಫಲಕದಲ್ಲಿ ಕನ್ನಡ ಮೂಲೆಗುಂಪಾಗಿದೆ.
ಬಿಬಿಎಂಪಿ ಕಾರ್ಯಕ್ರಮದ ವಿರುದ್ಧ ಆಕ್ರೋಶ
ಬಿಬಿಎಂಪಿ ಆಯೋಜಿಸಿರುವ ನಮ್ಮ ರಸ್ತೆ ನಮ್ಮ ಹೆಮ್ಮೆ ಮಾಹಿತಿ ಫಲಕಕ್ಕೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಬಿಎಂಪಿ ಮತ್ತು ಸರ್ಕಾರವೇ ಕನ್ನಡ ಮರೆತಿದೆ. ತಮಗೊಂದು ನಿಯಮ, ಜನರಿಗೊಂದು ನಿಯಮನಾ? ಅಂತ ಪ್ರಶ್ನೆ ಮಾಡ್ತಿದೆ. ಜೊತೆಗೆ ಕಾರ್ಯಕ್ರಮದ ಬಗ್ಗೆ ಸರ್ಕಾರಕ್ಕೆ ಮತ್ತು ಉಸ್ತುವಾರಿ ಸಚಿವರಿಗೆ ಛೀಮಾರಿ ಹಾಕ್ತಿದೆ.
ರಸ್ತೆ ಗುಂಡಿಗಳನ್ನ ಮುಚ್ಚುವುದನ್ನ ಬಿಟ್ಟು, ಬಿಟ್ಟಿ ಪ್ರಚಾರಕ್ಕಿಳಿದಿದ್ದಾರೆ ಉಸ್ತುವಾರಿ ಸಚಿವರು ಹಾಗೂ ಬಿಬಿಎಂಪಿ ಎಂದು ಜನ ವ್ಯಂಗ್ಯವಾಡ್ತಿದ್ದಾರೆ. ವಿಪಕ್ಷಗಳು ಕೂಡ ಬಿಬಿಎಂಪಿಯ ಈ ‘ನಮ್ಮ ರಸ್ತೆ, ನಮ್ಮ ಹೆಮ್ಮೆ‘ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡ್ತಿದ್ದಾರೆ.
ಪುರುಷರಿಗೆ ಮೀಸಲಿರುವ ಸೀಟ್‌ನಲ್ಲಿ ಮಹಿಳೆಯರು ಕೂರಲು ಬಿಡಬೇಡಿ: ಕೆಎಸ್‌ಆರ್‌ಟಿಸಿ ಸೂಚನೆ
ಮಾನವೀಯತೆ ಮರೆತ ಶೇಷಾದ್ರಿಪುರಂ ಪೊಲೀಸರು: ತಡರಾತ್ರಿವರೆಗೆ ಠಾಣೆಯಲ್ಲಿ ಗರ್ಭಿಣಿ ಪರದಾಟ


