ಬೆಂಗಳೂರಿನಲ್ಲಿರುವ ಅನೇಕ ಬಿಲ್ಡಿಂಗ್ಗಳಿಗೆ ಸರಿಯಾದ ದಾಖಲಾತಿಗಳಿರೋದಿಲ್ಲ. ಇದು ಕಟು ಸತ್ಯ. ಯಾಕಂದ್ರೆ ಸೈಟ್ ಖರೀದಿ ಮಾಡಿದ್ದಾಯಿತು. ಮನೆ ಕಟ್ಟಿದ್ರೆ ಮುಗಿದೋಯ್ತು. ಅಲ್ಲಿಗೆ ಈ ಜಾಗ ಹಾಗೂ ಮನೆ ನಮ್ಮದೇ ಅಂತ ಅಂದುಕೊಂಡು ಸುಮ್ಮನಾಗಿ ಬಿಡ್ತೀವಿ. ಆದ್ರೆ ಇದಕ್ಕೂ ಮೀರಿದ ವಿಷ್ಯಗಳಿರುತ್ತವೆ.
ಯಾಕಂದ್ರೆ ಖಾತಾಗಳೇ ಇಲ್ಲದೇ ಎಷ್ಟೋ ಮನೆಗಳು ನಿರ್ಮಾಣಗೊಂಡಿವೆ. ಖಾತಾ ಇಲ್ಲದೆ ತೆರಿಗೆ ಕೂಡ ಕಟ್ಟೋದಿಲ್ಲ. ಇದಕ್ಕೆ ಎರಡು ಕಾರಣಗಳಿರಬಹುದು. ಒಂದು ಪೂವರ್ಜರಿಂದ ಬಂದ ಜಾಗದಲ್ಲಿ ಮನೆ ಕಟ್ಟಿರಬಹುದು. ಇನ್ನೊಂದು ಅವರಿಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲದೇ ಇರಬಹುದು. ಹಾಗಾಗಿ ಅಂತಹವರಿಗೆ ಬಿಬಿಎಂಪಿ ಈಗ ಹೊಸ ಸೇವೆಯನ್ನು ನೀಡೊದಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ. ಅದೇನೆಂದ್ರೆ ನಿಮ್ಮ ಮನೆ ಬಾಗಿಲಿಗೆ ಖಾತಾಗಳನ್ನು ಡೆಲಿವರಿ ಮಾಡೋದಕ್ಕೆ ಬಿಬಿಎಂಪಿ ಈಗ ಹೊಸ ಐಡಿಯಾ ಮಾಡಿದೆ.
ಇಷ್ಟು ದಿನ ಬೆಂಗಳೂರಲ್ಲಿ ಊಟ, ಪಾರ್ಸೆಲ್ಗಳಷ್ಟೇ ಹೋಮ್ ಡೆಲಿವರಿ ಆಗುತ್ತಾ ಇತ್ತು. ಆದ್ರೀಗ ನಿಮ್ಮ ಮನೆಯ ಖಾತಾ ಕೂಡ ನಿಮಗೆ ಹೋಮ್ ಡೆಲಿವರಿ ಆಗುತ್ತೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೇವೆ ನೀಡೋದಕ್ಕೆ ಬಿಬಿಎಂಪಿ ಯೋಜನೆ ರೂಪಿಸಿಕೊಂಡಿದೆ. ಇದರ ಅನುಸಾರ ಬೆಂಗಳೂರಿನ 198 ವಾರ್ಡ್ಗಳಲ್ಲಿ ಈ ಸೇವೆ ಜಾರಿಯಾಗುತ್ತೆ.
ಯಾವೆಲ್ಲ ಮನೆಗಳ ಅಥವಾ ಸೈಟ್ಗಳ ಖಾತೆಗಳನ್ನು ಇನ್ನೂ ಆ ಮಾಲೀಕರು ಪಡೆದುಕೊಂಡಿಲ್ಲವೋ. ಅಂತಹ ಜಾಗದ ಮಾಲೀಕರಿಗೆ ಬಿಬಿಎಂಪಿ ಅವರವರ ಖಾತೆಗಳನ್ನು ಮನೆ ಬಾಗಿಲಿಗೆ ತಲುಪಿಸೋ ಯೋಜನೆ ಇದು. ಖಾಸಗಿ ಏಜೆನ್ಸಿಗಳ ಸಹಯೋಗದೊಂದಿಗೆ ಸರಿ ಸುಮಾರು 23 ಲಕ್ಷ ಖಾತೆಗಳನ್ನು ಮನೆ-ಮನೆಗೆ ತಲುಪಿಸೋಕೆ ರೆಡಿಯಾಗಿದೆ.
ಆದ್ರೆ ಇದರಲ್ಲಿ ಒಂದು ಟ್ವಿಸ್ಟ್ ಇದೆ. ಅದೇನೆಂದ್ರೆ ಬಿಬಿಎಂಪಿ ಕಳಿಸೋ ಈ ಖಾತೆ ಫೈನಲ್ ಅಲ್ಲ. ಇದು ಜಸ್ಟ್ ನಿಮ್ಮ ಹೆಸರಿಗೆ ಈ ಲ್ಯಾಂಡ್ ಖಾತೆ ಆಗಿದೆ ಅನ್ನೋದನ್ನು ಪ್ರೂವ್ ಮಾಡೋ ಡ್ರಾಫ್ಟ್ ಖಾತೆ ಅಷ್ಟೇ. ಆದ್ರೆ ನೀವು ಅಂತಿಮವಾದ, ಅಧಿಕೃತ ಇ-ಖಾತಾಗಳನ್ನು ಇನ್ನುಳಿದ ಡಾಕ್ಯೂಮೆಂಟ್ಸ್ಗಳನ್ನು ನಿಮ್ಮ ಹತ್ತಿರದ ಬೆಂಗಳೂರು ಒನ್ನಲ್ಲಿ ಸಲ್ಲಿಸಿ ಅಥವಾ bbmp.erc.kar.gov.in ಈ ವೆಬ್ಸೈಟ್ಗೆ ಲಾಗಿನ್ ಆಗಿ ಅರ್ಜಿ ಸಲ್ಲಿಸಿ, ಖಾತೆಗಳನ್ನು ಪಡೆಯಬಹುದು.
ಈ ಅಂತಿಮ ಖಾತೆಯನ್ನು ಜನರಿಗೆ ಆದಷ್ಟು ಬೇಗ ತಲುಪಿಸೋಕೆ ಆಯಾ ವಲಯವಾರು AROಗಳು ತ್ವರಿತಗತಿಯಲ್ಲಿ ಅಪ್ರೂವ್ ಮಾಡುವಂತೆ, ಬಿಬಿಎಂಪಿ ಕೂಡ ಆದೇಶಿಸಿದೆ. ಆದ್ರೆ ಯಾರ ಬಳಿ ಈಗಾಗ್ಲೇ ಇ-ಖಾತಾಗಳು ಇದ್ಯೋ ಅವರು ಯಾವುದೇ ಗೊಂದಲಕ್ಕೆ ಒಳಗಾಗೋ ಅವಶ್ಯಕತೆ ಇಲ್ಲ ಅಂತ ತಿಳಿಸಿದೆ.
ಹೆಚ್ಚಿನ ಮಾಹಿತಿ ಪಡೆಯೋದಕ್ಕೆ ಹಾಗೂ ನಾಗರಿಕರಿಗೆ ಅನುಕೂಲವಾಗೋದಕ್ಕೆ ಬಿಬಿಎಂಪಿ ಹೆಲ್ಪ್ಲೈನ್ ಕೂಡ ತೆರೆದಿದೆ.. 9480683695– ಈ ನಂಬರ್ಗೆ ಕರೆ ಮಾಡಿ ನೀವು ಸಹಾಯ ಪಡೆಯಬಹುದು.
ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕ ಅಲರ್ಟ್, ಕೋಳಿ ಮಾಂಸ ಬೆಲೆ ಇಳಿಕೆ?


