BBMP
Loading ...

RBI

ನವದೆಹಲಿ: ಕಳೆದ ಐದು ವರ್ಷಗಳ ನಂತರ ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ಇದೇ ಮೊದಲ ಬಾರಿಗೆ ತನ್ನ ರೇಪೋ ದರವನ್ನು ಕಡಿತ ಮಾಡಿದೆ. ಈ ಮೂಲಕ ಸಾಲ ಪಡೆದವರಿಗೆ ಹಾಗೂ ಇಎಂಇ ಕಟ್ಟುತ್ತಿರುವವರಿಗೆ ಆರ್​ಬಿಐ ಗುಡ್​ ನ್ಯೂಸ್​ ನೀಡಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಆರ್‌ಬಿಐ ಗವರ್ನರ್ ಆಗಿ ನೇಮಕಗೊಂಡ ಬಳಿಕ ಸಂಜಯ್ ಮೆಲ್ಹೋತ್ರಾ ಅವರು ತಮ್ಮ ಮೊದಲ ಪ್ರಮುಖ ಭಾಷಣದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರದಲ್ಲಿ ಕಡಿತವನ್ನು ಘೋಷಿಸಿದ್ದಾರೆ.

ಕೇಂದ್ರ ಬ್ಯಾಂಕ್ ತನ್ನ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳ ಕಡಿತದೊಂದಿಗೆ ಶೇ. 6.5 ರಿಂದ 6.25% ಕ್ಕೆ ಇಳಿಸುವುದಾಗಿ ಘೋಷಿಸಿದೆ. ಮೂವರು ಆರ್‌ಬಿಐ ಮತ್ತು ಅಷ್ಟೇ ಸಂಖ್ಯೆಯ ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಮೂರು ದಿನಗಳ ಸಭೆಯ ಬಳಿಕ ರೆಪೋ ದರ ಇಳಿಕೆಯ ನಿರ್ಧಾರವನ್ನು ಆರ್​ಬಿಐ ಗವರ್ನರ್​ ಸಂಜಯ್ ಮೆಲ್ಹೋತ್ರಾ ಶುಕ್ರವಾರ (ಫೆ.07) ಪ್ರಕಟಿಸಿದ್ದಾರೆ.

ಐದು ವರ್ಷಗಳ ಬಳಿಕ ರೆಪೋ ದರ ಕಡಿತವಾಗಿದೆ. ಆರ್‌ಬಿಐ ಕೊನೆಯದಾಗಿ 2020ರ ಮೇ ತಿಂಗಳಲ್ಲಿ 40 ಮೂಲ ಅಂಕಗಳೊಂದಿಗೆ ರೆಪೋ ದರವನ್ನು ಶೇ. 4 ಕ್ಕೆ ಇಳಿಸಿತ್ತು. ರೆಪೋ ದರ ಕಡಿತದಿಂದ ಗೃಹ, ವಾಹನ ಸಾಲಗಳ ಬ್ಯಾಂಕ್​ಗಳ ಇಎಂಐ ಮೊತ್ತ ಕಡಿಮೆಯಾಗಲಿದೆ. ಇದರಿಂದ ಜನ ಸಾಮಾನ್ಯರ ಜೇಬಿಗೆ ಹೊರೆಯಾಗುವುದಿಲ್ಲ.

ಕೇಂದ್ರ ಬ್ಯಾಂಕ್ ಮುಂದಿನ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇ. 6.7 ಎಂದು ಅಂದಾಜಿಸಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರದ ಮುನ್ಸೂಚನೆಯನ್ನು ಯಾವುದೇ ಬದಲಾವಣೆ ಮಾಡದೇ ಹಾಗೇ ಇರಿಸಿದೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಹಣದುಬ್ಬರದ ಮುನ್ಸೂಚನೆಯನ್ನು 4.8 ಪ್ರತಿಶತದಲ್ಲಿ ಇರಿಸಿದೆ.

ಸಿದ್ದರಾಮಯ್ಯಗೆ ಬಿಗ್​ ರಿಲೀಫ್​: ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ ಹೈಕೋರ್ಟ್

Leave a Reply

Your email address will not be published. Required fields are marked *