ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎನ್ನುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಗುಡ್‌ನ್ಯೂಸ್‌ವೊಂದನ್ನು ಕೊಟ್ಟಿದೆ. ಸಾಮಾನ್ಯವಾಗಿ ಬಿಬಿಎಂಪಿ ಆಸ್ತಿ ಮಾರಾಟ ಅಥವಾ ಜಾಗಗಳ ಮಾರಾಟವನ್ನು ಮಾಡುವುದಿಲ್ಲ. ಆದರೆ, ಇದೀಗ ಬೆಂಗಳೂರಿನಲ್ಲಿ ಬಿಡಿಎ ಮಾದರಿಯಲ್ಲಿ ಆಸ್ತಿ ಮಾರಾಟಕ್ಕೆ ಮುಂದಾಗಿದೆ. ಬಿಬಿಎಂಪಿ ಸಹ ಆಸ್ತಿ ಮಾರಾಟಕ್ಕೆ ಮುಂದಾಗಿರುವುದನ್ನು ಕೇಳಿ ಬೆಂಗಳೂರಿಗರು ಖುಷಿಯಾಗಿದ್ದಾರೆ. ಅಲ್ಲದೆ ಇನ್ನೊಂದು ಖುಷಿಯ ವಿಚಾರ ಎಂದರೆ ಇದು ಸರ್ಕಾರ ನಿಗದಿ ಮಾಡಿದ ಬೆಲೆಯಲ್ಲಿ ಸಿಗಲಿದೆ. ಅಂದರೆ ಈ ಆಸ್ತಿಗಳು ಕಡಿಮೆ ಬೆಲೆಗೆ ಸಿಗಲಿವೆ. ಹಾಗಾದರೆ ಬೆಂಗಳೂರಿನಲ್ಲಿ ಎಲ್ಲಿ ಆಸ್ತಿ ಮಾರಾಟ ಮಾಡಲಾಗುತ್ತಿದೆ. ಇದನ್ನು ಖರೀದಿ ಮಾಡುವುದು ಹೇಗೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಆಸ್ತಿ ಮಾರಾಟಕ್ಕೆ ಚಿನ್ನದಂತಹ ಮೌಲ್ಯ ಇದೆ. ಇದೇ ಕಾರಣಕ್ಕೆ ಇಲ್ಲಿ ರಿಯಲ್ ಎಸ್ಟೇಟ್ ಒಳ್ಳೆಯ ಸ್ಕೋಪ್ ಸಹ ಇದೆ. ಇದೀಗ ನಗರದಲ್ಲಿ 600ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎನ್ನುವವರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಆಸ್ತಿದಾರರಿಗೆ ಶಾಕ್ ಕೊಟ್ಟಿದೆ. ಹೌದು ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡು ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಬಿಬಿಎಂಪಿಯು ಶಾಕ್ ಮುಟ್ಟಿಸಿದೆ. ಅಲ್ಲದೆ ಅದೇ ಸಮಯದಲ್ಲಿ ಆಸ್ತಿ ಖರೀದಿ ಮಾಡಬೇಕು, ಬೆಂಗಳೂರಿನಲ್ಲಿ ನಮ್ಮದೊಂದು ಮನೆ ಇರಬೇಕು ಎನ್ನುವವರಿಗೆ ಬಿಬಿಎಂಪಿಯು ಗುಡ್‌ನ್ಯೂಸ್ ಕೊಟ್ಟಿದೆ.
ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ 608 ಆಸ್ತಿಗಳಿಂದ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಹೇಳಿದ್ದಾರೆ. ಈ ಆಸ್ತಿಗಳನ್ನು ಮುಕ್ತವಾಗಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುತ್ತಿದ್ದು. ಬೆಂಗಳೂರಿನಲ್ಲಿ ಇರುವವರು ಅಥವಾ ಕರ್ನಾಟಕದ ಎಲ್ಲಿಯವರಾದರೂ ಖರೀದಿ ಮಾಡಬಹುದಾಗಿದೆ. ವಲಯಗಳ ಆಸ್ತಿ ಸಂಖ್ಯೆ ಹಾಗೂ ಮಾರಾಟ ದಿನಾಂಕವನ್ನೂ ಬಿಬಿಎಂಪಿ ನಿಗದಿ ಮಾಡಿದೆ.
ಇನ್ನು ಈ ಆಸ್ತಿಗಳ ಹರಾಜು ಪ್ರಕ್ರಿಯೆ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ನಡೆಯುತ್ತಿದೆ. ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆ ತೆಗೆದುಕೊಳ್ಳಲಿದೆ. ಆಸ್ತಿ ತೆರಿಗೆ ಪೂರ್ಣ ಬಾಕಿ ವಸೂಲಿ ಮಾಡಿದ ಮೇಲೆ ಮಾಲೀಕರ ಬ್ಯಾಂಕ್ ಖಾತೆಗೆ ಉಳಿದ ಹಣ ಜಮೆ ಆಗಲಿದೆ.
ವಲಯ – ಹರಾಜು ಆಸ್ತಿಗಳ ಸಂಖ್ಯೆ
1. ಪೂರ್ವ ವಲಯ – 118
2. ಪಶ್ಚಿಮ ವಲಯ – 120
3. ದಕ್ಷಿಣ ವಲಯ – 109
4. ಮಹದೇವಪುರ ವಲಯ – 60
5. ಬೊಮ್ಮನಹಳ್ಳಿ ವಲಯ – 70
6. ಯಲಹಂಕ ವಲಯ – 40
7. ಆರ್.ಆರ್ ನಗರ ವಲಯ – 50
8. ದಾಸರಹಳ್ಳಿ ವಲಯ – 41
ಒಟ್ಟು: 608
ಎಲ್ಲಿ ನಡೆಯಲಿದೆ ಆಸ್ತಿ ಹರಾಜು ಪ್ರಕ್ರಿಯೆ: ಬೆಂಗಳೂರಿನ ಎಲ್ಲಾ ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಆಸ್ತಿ ಮಾರಾಟವಾಗಲಿದೆ. ಇದನ್ನು ಯಾರು ಬೇಕಾದರೂ ಖರೀದಿ ಮಾಡಬಹುದು. ಇನ್ನು ಆಸ್ತಿ ಹರಾಜು ಬಿಬಿಎಂಪಿಯ ಆಯಾ ವಲಯಗಳ ಕಚೇರಿಯಲ್ಲಿ ನಡೆಯಲಿದೆ.
ಎಲ್ಲೆಲ್ಲಿ ಯಾವಾಗ ನಡೆಯಲಿದೆ ಆಸ್ತಿ ಹರಾಜು ?
* ಪೂರ್ವ ವಲಯದಲ್ಲಿ 118 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ಪಶ್ಚಿಮ ವಲಯದಲ್ಲಿ 120 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ದಕ್ಷಿಣ ವಲಯದಲ್ಲಿ 109 ಆಸ್ತಿಗಳನ್ನು 14ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ಮಹದೇವಪುರ ವಲಯದಲ್ಲಿ 60 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ಬೊಮ್ಮನಹಳ್ಳಿ ವಲಯದಲ್ಲಿ 70 ಆಸ್ತಿಗಳನ್ನು 14ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ಯಲಹಂಕ ವಲಯದಲ್ಲಿ 40 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ಆರ್.ಆರ್ ನಗರ ವಲಯದಲ್ಲಿ 50 ಆಸ್ತಿಗಳನ್ನು 10ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.
* ದಾಸರಹಳ್ಳಿ ವಲಯದಲ್ಲಿ 41 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.


