ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡ ಬರೆಯಲು ಪರದಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಶನಿವಾರ ಕೊಪ್ಪಳಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಶಿವರಾಜ ತಂಗಡಗಿ ಭೇಟಿ ನೀಡಿದ್ದರು. ಈ ವೇಳೆ ಅಂಗನವಾಡಿ ಮಕ್ಕಳಿಗೆ `ಶುಬವಾಗಲಿ’ ಎಂದು ಬರೆದಿದ್ದರು. ಬಳಿಕ ಬೆಂಬಲಿಗರು ತಿಳಿಸಿದ್ದಕ್ಕೆ ಸರಿಯಾಗಿ `ಶುಭವಾಗಲಿ’ ಎಂದು ತಿದ್ದುಪಡಿ ಮಾಡಿದರು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕನ್ನಡ ಬರೆಯಲು ಪರದಾಡಿದ ಸಚಿವರು ಎಂದು ವೈರಲ್ ಆಗುತ್ತಿದೆ. ಸಚಿವರ ಕನ್ನಡ ಭಾಷಾ ಜ್ಞಾನದ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ.
ರಾಜ್ಯ ಸರ್ಕಾರಿ ನೌಕರರ ಹಾಜರಾತಿಗೆ ಮಹತ್ವದ ಕ್ರಮ : ಮುಖದ ಗುರುತು ದಾಖಲಿಸಲು ಕಚೇರಿಗಳಲ್ಲಿ ಎಐ ಬಳಕೆ.!


