BBMP
Loading ...

BBMP Tax

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಐತಿಹಾಸಿಕ‌ ನಿರ್ಧಾರಕ್ಕೆ ಮುಂದಾಗಿದ್ದು, 2020ರ ಬಿಬಿಎಂಪಿ ಕಾಯ್ದೆ ತಿದ್ದುಪಡಿಯನ್ನ ಇದೇ‌ ಮೊದಲ ಬಾರಿಗೆ ಜಾರಿಗೆ ತರುತ್ತಿದೆ. ಆಸ್ತಿ ತೆರಿಗೆ (Property Tax) ಪಾವತಿಸದವರ ಆಸ್ತಿ ಹರಾಜು ಹಾಕಲು 2020ರ ಕಾಯ್ದೆಯ ತಿದ್ದುಪಡಿ ಅವಕಾಶ ನೀಡಿತ್ತು. ಇತಿಹಾಸದಲ್ಲಿ ಇದೇ ಮೊದಲು ಆಸ್ತಿ ತೆರಿಗೆ ಪಾವತಿಸದವರ ಆಸ್ತಿಯನ್ನು ಹರಾಜು ಮಾಡಲು ಮುಂದಾಗಿದ್ದು, ಅದಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ.

ಮಹದೇವಪುರ ವಲಯದ 60 ಆಸ್ತಿ ಹರಾಜಿಗೆ ಫೆಬ್ರವರಿ 13ರಂದು‌ ಮುಹೂರ್ತ ಫಿಕ್ಸ್ ಆಗಿದ್ದು, ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಸ್ತಿ ತೆರಿಗೆ ಪಾವತಿಸದವರ ಆಸ್ತಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಕೊನೆ ಅಸ್ತ್ರ ಬಳಸಲು ಮುಂದಾದ ಬಿಬಿಎಂಪಿ
ಮಹದೇವಪುರ ವಲಯದ 6 ಉಪವಿಭಾಗಗಳಲ್ಲೂ ತಲಾ 10 ಆಸ್ತಿ ಹರಾಜಿಗೆ ಬಿಬಿಎಂಪಿ ನಿರ್ಧಾರ ಮಾಡಿದೆ. ದೀರ್ಘಕಾಲದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 60 ಆಸ್ತಿಗಳ ಹರಾಜನ್ನು ಬಿಬಿಎಂಪಿ ಪ್ರಕಟಿಸಿದೆ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಷ್ ಮೌದ್ಗಿಲ್ ಹಾಗೂ ವಲಯ ಆಯುಕ್ತ ರಮೇಶ್ ಮಾರ್ಗದರ್ಶನದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ನೋಟಿಸ್, ಬೇಡಿಕೆ ನೋಟಿಸ್, ಮುಟ್ಟುಗೋಲು ಹೀಗೆ ಎಲ್ಲ ಪ್ರಕ್ರಿಯೆ ನಂತರ ಕೊನೆ ಅಸ್ತ್ರ ಬಳಸಲು ಬಿಬಿಎಂಪಿ ಮುಂದಾಗಿದೆ.

ಆಸ್ತಿ ತೆರಿಗೆ ವಸೂಲು ಮಾಡಲು 2020ರಲ್ಲೇ ಕಾನೂನು ತಿದ್ದುಪಡಿಯಾಗಿದ್ದರೂ ಇದೇ ಮೊದಲ ಬಾರಿಗೆ ಕಾನೂನು ಬಳಕೆ ಮಾಡಲಾಗುತ್ತಿದೆ. ಆಸ್ತಿ ಹರಾಜಿನ ಮೊತ್ತದಲ್ಲಿ ತೆರಿಗೆ ಬಾಕಿ ಮೊತ್ತ ಪಡೆದು ಉಳಿದ ಮೊತ್ತವನ್ನು ಆಸ್ತಿ ಮಾಲೀಕರ ಬ್ಯಾಂಕ್ ಖಾತೆ ಪಾವತಿ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಆರ್ ಪುರ, ಹೂಡಿ, ಹೊರಮಾವು, ವೈಟ್ ಫೀಲ್ಡ್, ಹೆಚ್​ಎಎಲ್ ಹಾಗೂ ಮಾರತಹಳ್ಳಿ ವ್ಯಾಪ್ತಿಯ ಒಟ್ಟು 60 ಆಸ್ತಿಗಳನ್ನು ಬಿಬಿಎಂಪಿ ಹರಾಜು ಮಾಡಲಿದೆ.

ಮೈಕ್ರೊ ಫೈನಾನ್ಸ್ ಸಿಬ್ಬಂದಿ ಏನಾದ್ರೂ ಕಿರುಕುಳ ಕೊಟ್ಟರೆ ಈ ಸಹಾಯವಾಣಿ ನಂಬರ್​ಗೆ ಕರೆ ಮಾಡಿ!

Leave a Reply

Your email address will not be published. Required fields are marked *