BBMP
Loading ...

BBMP Tax

ಬೆಂಗಳೂರಿನ ಆಸ್ತಿದಾರರಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ದೊಡ್ಡ ಶಾಕ್‌ ಕೊಟ್ಟಿದೆ. ನಗರದಲ್ಲಿ ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ದೊಡ್ಡ ಶಾಕ್‌ ನೀಡುತ್ತಿದ್ದು. ಈ ರೀತಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಬಿಬಿಎಂಪಿ ಈ ರೀತಿ ಕಠಿಣ ಕ್ರಮ ತೆಗೆದುಕೊಳ್ಳುತ್ತಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಆಸ್ತಿದಾರರಿಗೆ ಬಿಬಿಎಂಪಿ ಹಾಗೂ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇ ಖಾತಾ ಹಾಗೂ ಹೊಸ ಖಾತಾ ಸೇರಿದಂತೆ ವಿವಿಧ ಆಸ್ತಿ ವಿಷಯದಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ ಬೆಂಗಳೂರಿನ ಆಸ್ತಿದಾರರಿಗೆ ಬಿಬಿಎಂಪಿ ಹೊಸ ಶಾಕ್‌ವೊಂದನ್ನು ಕೊಟ್ಟಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನ ಆಸ್ತಿದಾರರಿಗೆ ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿಯು ಪ್ರಮುಖ ಸೂಚನೆಗಳನ್ನು ಕೊಡುತ್ತಿದೆ. ಆಸ್ತಿ ತೆರಿಗೆ ಸಂಗ್ರಹದ ವಿಚಾರದಲ್ಲಿಯೂ ಬಿಬಿಎಂಪಿಯು ಹಲವು ಕಠಿಣ ನಿಯಮಗಳನ್ನು ಅನುಸರಿಸುತ್ತಿದೆ. ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಆಸ್ತಿ ತೆರಿಗೆ ವ್ಯಾಪ್ತಿಯ ಒಳಗೆ ತರುವುದಕ್ಕೆ ಹಲವು ಕಠಿಣ ಕ್ರಮಗಳನ್ನು ಅನುಸರಿಸುತ್ತಿದೆ. ಇದೀಗ ಆಸ್ತಿ ತೆರಿಗೆ ಉಳಿಸಿಕೊಂಡವರಿಗೆ ದೊಡ್ಡ ಶಾಕ್‌ ಕೊಟ್ಟಿದೆ. ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವುದಕ್ಕೆ ಬಿಬಿಎಂಪಿ ಮುಂದಾಗಿದೆ. ತುಂಬಾ ದಿನಗಳು / ವರ್ಷಗಳಿಂದ ಆಸ್ತಿ ತೆರಿಗೆಯನ್ನು ಪಾವತಿ ಮಾಡದೆ ಇರುವ ಬಾಕಿದಾರರ (ಸುಸ್ತಿದಾರರ) ಜಾಗದ ಆಸ್ತಿಗಳನ್ನು ತುರ್ತು ಮಾರಾಟ ಮಾಡುವುದಕ್ಕೆ ಹರಾಜು ಪ್ರಕ್ರಿಯೆ ಪ್ರಾರಂಭಿಸುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನ ಆಸ್ತಿದಾರರಿಗೆ ದೊಡ್ಡ ಶಾಕ್‌ ಕೊಡಲಾಗಿದೆ.

ಆಸ್ತಿಗಳ ಹರಾಜಿಗೆ ಮುಂದಾದ ಪಾಲಿಕೆ: ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರಿಗೆ ಇಲ್ಲಿಯವರೆಗೆ ಬಿಬಿಎಂಪಿಯು ಕೇವಲ ನೋಟಿಸ್ ಕೊಡಲಾಗುತ್ತಿತ್ತು. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಿಬಿಎಂಪಿ ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಇದರಿಂದ ಬೆಂಗಳೂರಿನಲ್ಲಿರುವ ಕೆಲವು ಆಸ್ತಿ ತೆರಿಗೆ ಪಾವತಿ ಮಾಡದೆ ಇರುವ ಆಸ್ತಿದಾರರು ತಮ್ಮ ಆಸ್ತಿ ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ.

ನೋಟಿಸ್‌ ನೀಡದ ಮೇಲೆಯೂ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ: ಇನ್ನು ಬೆಂಗಳೂರಿನಲ್ಲಿ ಆಸ್ತಿ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿಯು ಏಕಾಏಕಿ ತೆಗೆದುಕೊಂಡಿಲ್ಲ. ಈ ವಿಷಯವನ್ನು ಬಿಬಿಎಂಪಿಯ ಅಧಿಕಾರಿಗಳೇ ಹೇಳಿದ್ದಾರೆ. ಆಸ್ತಿ ಮಾಲೀಕರ ಆಸ್ತಿಯನ್ನು ಹರಾಜು ಹಾಕುವುದಕ್ಕಿಂತ ಮುಂಚೆ ಹಲವು ನೋಟಿಸ್‌ಗಳನ್ನು ಕೊಡಲಾಗಿದೆ. ಇಷ್ಟಾದರೂ ಆಸ್ತಿದಾರರು ಬಾಕಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಿಲ್ಲ. ಹೀಗಾಗಿ, ಆಸ್ತಿ ತೆರಿಗೆ ಹರಾಜು ಪ್ರಕ್ರಿಯೆಯಂತಹ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನೋಟಿಸ್‌ ಕೊಟ್ಟ ಮೇಲೂ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರ ಮೇಲೆ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಆಸ್ತಿದಾರರಿಗೆ ಬಿಬಿಎಂಪಿಯಿಂದ ನೀಡಲಾಗಿದ್ದ ನೋಟಿಸ್‌ಗಳು
* ಕಾರಣ ಕೇಳುವ ಸೂಚನೆ
* ಬೇಡಿಕೆ ನೋಟಿಸ್
* ಆಸ್ತಿಗಳ ಮುಟ್ಟುಗೋಲು ಸೂಚನೆ
* ವಸತಿಯೇತರ ಆಸ್ತಿಗಳಿಗೆ ಬೀಗ ಹಾಕುವುದು. ಈ ನಾಲ್ಕು ಕ್ರಮಗಳನ್ನು ತೆಗೆದುಕೊಂಡ ಮೇಲೆಯೂ ಕೆಲವು ಆಸ್ತಿದಾರರು ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿಯನ್ನು ಪಾವತಿ ಮಾಡಿಲ್ಲ. ಹೀಗಾಗಿ ಕೊನೆಯದಾಗಿ ಆಸ್ತಿ ತೆರಿಗೆ ವಸೂಲಾತಿಗಾಗಿ ಈ ಆಸ್ತಿಗಳನ್ನು ಹರಾಜಿಗೆ ಇರಿಸಲಾಗುತ್ತಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈ ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದೆ. ಪಾಲಿಕೆಯಲ್ಲಿನ 8-10 ಪ್ರಮುಖ ಆಸ್ತಿದಾರರನ್ನು ಪ್ರತಿ ವಲಯದಿಂದ ಸುಮಾರು 1ರಿಂದ2 ಆಸ್ತಿದಾರರನ್ನು ಗುರುತಿಸಲಾಗಿದೆ. ಇನ್ನು ಸ್ಥಿರ ಆಸ್ತಿಗಳ ಮಾರಾಟದ ಹರಾಜು ಮಾರಾಟ ದಿನಾಂಕವನ್ನು ನಿಗದಿಪಡಿಸುವ ನೋಟಿಸ್‌ಗಳನ್ನು ಸಹ ನೀಡಲಾಗಿದೆ. ಇವೆಲ್ಲವೂ ತುಂಬಾ ದಿನಗಳಿಂದ ಆಸ್ತಿ ತೆರಿಗೆಯನ್ನು ಪಾವತಿ ಮಾಡಲಾಗದೆ ಇರುವ ಪ್ರಕರಣಗಳಾಗಿವೆ.

ಬಡವರ ಮೇಲೆ ಬಿಡಿಎ ದರ್ಪ; ವಿದ್ಯುತ್‌ ಕಿತ್ತುಕೊಂಡು ಕತ್ತಲೆಗೆ ದೂಡುತ್ತಿರುವ ಅಧಿಕಾರಿಗಳು!

BMP

Leave a Reply

Your email address will not be published. Required fields are marked *