BBMP
Loading ...

Muniratna new

ಬೆಂಗಳೂರು: ಶಾಸಕ ಮುನಿರತ್ನ ಮೇಲೆ ದಿನಗೂಲಿ ಕೆಲಸ ಮಾಡುವವರ ಮೇಲೆ ದೌರ್ಜನ್ಯ ಮಾಡಿರುವ ಆರೋಪ ಕೇಳಿ ಬಂದಿದ್ದು, ಹೀಗಾಗಿ ಹಿನ್ನೆಲೆಯಲ್ಲಿ ಅವರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಹೌದು ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ಅಕ್ಕಮಹಾದೇವಿ ಸ್ಲಂ ನಲ್ಲಿ ದಿನಗೂಲಿ ಕಾರ್ಮಿಕರು ವಾಸಿಸುತ್ತಿದ್ದ ಮನೆಗಳನ್ನು ನೆಲಸಮ ಮಾಡಲಾಗಿತ್ತು. ಸುಮಾರು 50ಕ್ಕು ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದ ಸ್ಲಂಗೆ ಬಂದ ಶಾಸಕ ಮುನಿರತ್ನ ಮತ್ತು ಸಹಚರರು ಏಕಾಏಕಿ ಅಲ್ಲಿದ್ದ ಎಲ್ಲರ ಮನೆಗಳನ್ನು ನೆಲಸಮ ಮಾಡಿದ್ದರು.

ಇದೀಗ ಇದರ ಕುರಿತು ಸಂತ್ರಸ್ಥರು ಪೊಲಿಸ್​ ಠಾಣೆ ಮೆಟ್ಟಿಲೇರಿದ್ದು. ಮುನಿರತ್ನ ಮತ್ತು ಸಹಚರರು ಏಕಾಏಕಿ ಬಂದು ಎಲ್ಲರ ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ , ಕಿಟ್ಟಿ , ಗಂಗಾ ಎಂಬುವವರು ಬಂದು ಮನೆ ನೆಲಸಮ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.

ಪ್ರತಿ ಮನೆಯಲ್ಲಿ ಕೂಡಿಟ್ಟಿದ್ದ 20 ರಿಂದ 70 ಸಾವಿರ ಹಣ ಮತ್ತು 30ಗ್ರಾಂ ಚಿನ್ನಾಭರಣ ಮಣ್ಣು ಪಾಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಾಸಕ ಮುನಿರತ್ನ ತನ್ನ ಪ್ರಭಾವ ಬಳಸಿ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರಿಸಿದ್ದಾರೆ ಎಂದು RMC ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ನಟ ದರ್ಶನ್​ಗೆ ಮತ್ತೊಂದು ಶಾಕ್: ಮುಂದಿನ ಆದೇಶದವರೆಗೆ ಗನ್ ಲೈಸೆನ್ಸ್ ಅಮಾನತು!

Leave a Reply

Your email address will not be published. Required fields are marked *