BBMP
Loading ...

Mahantesh Bilagi

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಐಎಎಸ್‌ ಅಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ನೇಮಕ ಮಾಡಲು ಸರ್ಕಾರ ಚಿಂತಿಸಿದೆ. 2012 ರ ಬ್ಯಾಚ್ ನ ಮಹಾಂತೇಶ್ ಬೀಳಗಿ ಸದ್ಯ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಎರಡೂವರೆ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಈ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿ ಸೇರಿ ಹಲವು ಹುದ್ದೆಗಳಲ್ಲಿ ಯಶಸ್ವಿ ಸೇವೆ ಸಲ್ಲಿಸಿದ್ದಾರೆ. ಯಾವುದೇ ವಿವಾದಗಳಿಲ್ಲದೆ ಜವಾಬ್ದಾರಿ ನಿರ್ವಹಿಸುವ ಬೀಳಗಿ ಅವರನ್ನು ಇದೀಗ ಬಿಡಿಎ ಆಯುಕ್ತರ ಹುದ್ದೆಗೆ ನೇಮಕ ಮಾಡಲು ಸರ್ಕಾರ ಮುಂದಾಗಿದೆ.

ಬೀಳಗಿ ಅವರಿಗೆ ಬೆಸ್ಕಾಂ ಎಂಡಿ ಹುದ್ದೆ ಜತೆಗೆ ಹೆಚ್ಚುವರಿಯಾಗಿ ಬಿಡಿಎ ಕಮಿಷನರ್ ಹುದ್ದೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ಸರಕಾರದ ಉನ್ನತ ಮೂಲಗಳು ಫ್ರೀಡಂ ಟಿವಿಗೆ ತಿಳಿಸಿವೆ.

ಬೆಂಗಳೂರು 2ನೇ ವಿಮಾನ ನಿಲ್ದಾಣ ಸ್ಥಳ ನಿಗದಿಗೆ ಮುಹೂರ್ತ ಫಿಕ್ಸ್!

Leave a Reply

Your email address will not be published. Required fields are marked *