BBMP
Loading ...

BBMP

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಬುಸಾಪಾಳ್ಯದಲ್ಲಿ ಬಹುಮಹಡಿ ಕಟ್ಟಡ ಕುಸಿದು ಸಾವು ನೋವು ಸಂಭವಿಸಿತ್ತು. ಇದರ ಬೆನ್ನಲ್ಲೆ ಪಾಲಿಕೆ ಅಧಿಕಾರಿಗಳು ಖುದ್ದು ಅಖಾಡಕ್ಕಿಳಿದು ಸರ್ವೇ ಕಾರ್ಯ ನಡೆಸಿದ್ದಾರೆ. ಈ ವೇಳೆ ನಗರದಲ್ಲಿ ಮೂರರಲ್ಲಿ ಎರಡು ಕಟ್ಟಡಗಳು ಅನಧಿಕೃತವಾಗಿ ನಿರ್ಮಾಣವಾಗುತ್ತಿವೆ. ಹೀಗೆ ಅನುಮತಿ ಇಲ್ಲದೇ ತೆಲೆಎತ್ತುವ ಕಟ್ಟಡಗಳೇ ಮುಂದೆ ಜನರ ಜೀವ ತೆಗೆಯುತ್ತವೆ ಎಂಬ ಸತ್ಯ ಪಾಲಿಕೆ ಅಧಿಕಾರಿಗಳ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಮೂರು ಕಟ್ಟಡಗಳಲ್ಲಿ ಎರಡಕ್ಕೆ ಸರ್ಕಾರಿ ಸಂಸ್ಥೆ ಬಿಬಿಎಂಪಿ ಅಧಿಕಾರಿಗಳು ಅನುಮೋದನೆ ನೀಡಿಲ್ಲ. ಇದು ಬೆಂಗಳೂರಿನ ಯೋಜನಾ ಅರಾಜಕತೆ, ಇಲ್ಲಿನ ನೀತಿ ನಿಮಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಅನುಮೋದನೆ ಇಲ್ಲದೇ ಬಹುಮಹಡಿ ಕಟ್ಟಡ ನಿರ್ಮಾಣ ಭವಿಷ್ಯ ಹಲವು ಯಡವಟ್ಟುಗಳಿಗೆ ಕಾರಣ ಆಗುವ ಸಾಧ್ಯತೆ ಇರುತ್ತದೆ. ಈ ಕುರಿತು ‘ಡಿಎಚ್‌’ ವರದಿ ಮಾಡಿದೆ.

ಇತ್ತೀಚೆಗೆ ಬಿಬಿಎಂಪಿ ನಿರ್ಮಾಣ ಹಂತದಲ್ಲಿದ್ದ 2,419 ಆಸ್ತಿಗಳನ್ನು ಸಮೀಕ್ಷೆ ಮಾಡಿಸಿತ್ತು. ಇದರಲ್ಲಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಇವೆ. ಕಳೆದ ವರ್ಷ 2024ರ ಅಕ್ಟೋಬರ್ ತಿಂಗಳಲ್ಲಿ ಬಾಬುಸಪಾಳ್ಯದಲ್ಲಿ 06 ಅಂತಸ್ತಿನ ಕಟ್ಟಡ ಕುಸಿದು ಒಂಬತ್ತು ಮೃತಪಟ್ಟಿದ್ದರು. ಇದು ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ, ನಿಯಮಗಳು, ಸ್ಥಳೀಯ ಸಂಸ್ಥೆಗಳ ಆಡಳಿತ ನಿರ್ವಹಣೆಯನ್ನು ಎತ್ತಿ ತೋರಿಸಿತ್ತು. ಇದು ಸಹ ಅನುಮತಿ ಪಡೆಯದೇ ನಿಯಮ ಮೀರಿ ನಿರ್ಮಿಸಿದ್ದ ಕಟ್ಟಡ ಎಂಬುದು ನಂತರ ತಿಳಿದು ಬಂದಿತ್ತು.

ಸದ್ಯ ಬಿಬಿಎಂಪಿ ನಡೆಸಿದ ಒಟ್ಟು ಆಸ್ತಿಗಳ ಸಮೀಕ್ಷೆಯಲ್ಲಿ 835 ಆಸ್ತಿ ಮಾಲೀಕರು ಮಾತ್ರವೇ ಬಿಬಿಎಂಪಿಯಿಂದ ಅನುಮತಿ ಪಡೆದು ಜಾಗದಲ್ಲಿ ಕಟ್ಟಡ ನಿರ್ಮಿಸುತ್ತಿದ್ದಾರೆ. ಉಳಿದ ಅಂದರೆ ಬಹುಪಾಲು 1,584 ಆಸ್ತಿ ಮಾಲೀಕರು ಕಟ್ಟಡ ಯೋಜನೆಗಳಿಗೆ ಅನುಮೋದನೆ ಪಡೆದಿಲ್ಲ. ಈ ಕಟ್ಟಡಗಳಲ್ಲಿ ಬಹುತೇಕವುಗಳು ನಿರ್ಮಾಣ ಅಂತ್ಯಗೊಂಡಿದೆ ಎಂದು ವರದಿ ಹೇಳುತ್ತದೆ.

‘ಬಿ’ ಖಾತಾ ಆಸ್ತಿಗೆ ಅನುಮತಿ ನೀಡಲ್ಲ
ಬಿಬಿಎಂಪಿ ‘ಬಿ’ ಖಾತಾ ಆಸ್ತಿಗಳಿಗೆ ಕಟ್ಟಡ ಯೋಜನಾ ಅನುಮೋದನೆ ನೀಡುವುದಿಲ್ಲ. ಅವು ಕಂದಾಯ ನಿವೇಶನಗಳು ಅಥವಾ ಅನಧಿಕೃತ ವಿನ್ಯಾಸಗಳಲ್ಲಿ ನೆಲೆಗೊಂಡಿರುವ ಒಂದೇ ಪ್ಲಾಟ್‌ಗಳು. ಅವುಗಳಿಗೆ ಬೇರೆ ನಿಯಮಗಳು ಇರುತ್ತವೆ. ಅವುಗಳ ಪಾಲಿಸಬೇಕು. ಅದಾಗದಿದ್ದಾಗ ಹೀಗೆ ಅನಧಿಕೃತವಾಗಿ, ಅನುಮತಿ ಇಲ್ಲದೇ ನಿರ್ಮಿಸಲು ಮುಂದಾಗಿದ್ದು ಗೊತ್ತಾಗಿದೆ. ನಿರ್ದಿಷ್ಟ ಕಟ್ಟಡಗಳಲ್ಲಿ ನಿರ್ಮಾಣ ಕಾರ್ಯ ಆರಂಭಿಸುವ ಮೊದಲು 30×40 ಅಥವಾ 40×60 ನಂತಹ ಸಣ್ಣ ಕಟ್ಟಡಗಳ ಮಾಲೀಕರು ಮೊದಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ಸಂಪರ್ಕಿಸಬೇಕು. ಸದ್ಯ ಬಿಡಿಎ ಅನುಮತಿ ನೀಡಲು ಆರಂಭಿಸಿಲ್ಲ.

ಆಸ್ತಿ ಮಾಲೀಕರು ಕಡ್ಡಾಯವಾಗಿ ಮನೆ ನಿರ್ಮಿಸುವಾಗ ಅನುಮೋದನೆ ಪಡೆಯಬೇಕು. ಅನುಮೋದನೆ ಇಲ್ಲದ ಕಟ್ಟಡ ನಿರ್ಮಿಸುವುದು ಬೆಂಗಳೂರಿನಲ್ಲಿರುವ 22 ಲಕ್ಷ ಪೈಕಿ ಅಂದಾಜು 6 ಲಕ್ಷ ಆಸ್ತಿಗಳನ್ನು ‘ಬಿ’ ಖಾತಾ ನಿವೇಶನಗಳಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ‘ಬಿ’ ಖಾತಾ ನಿವೇಶನಗಳಿಗೆ ಸಂಬಂಧಿಸಿದಂತೆ ಇರುವ ಮಾಲೀಕರ ಸಮಸ್ಯೆ, ಆತಂಕ ಪರಿಹಾರಕ್ಕೆ ಸರ್ಕಾರ ಶ್ರಮಿಸುತ್ತಿದೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಬಿಎಂಪಿಯಿಂದ ಈಗಾಗಲೇ ‘ಬಿ’ ಖಾತಾಗಳನ್ನು ಪಡೆದಿರುವ ಆಸ್ತಿಗಳಿಗೆ ಅನುಮೋದನೆ ನೀಡಲು ಯಾವುದೇ ಕಾನೂನು ನಿಬಂಧನೆಗಳು ಇಲ್ಲ. ಬಿಡಿಎ ಬೃಹತ್ ಅಂದರೆ 20 ಗುಂಟೆಗೂ ದೊಡ್ಡ ನಿವೇಶನಗಳಿಗೆ ಮಾತ್ರ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡುತ್ತಿದೆ ಎಂದರು.

ಅನೇಕ ಆಸ್ತಿಗಳಲ್ಲಿ ಕಟ್ಟಡ ನಿರ್ಮಿಸುವ ವೇಳೆ ‘ಎ’ ಖಾತಾ ಸೈಟ್‌ನಲ್ಲಿದ್ದರೂ ಬಿಬಿಎಂಪಿಯಿಂದ ಯೋಜನೆ ಆರಂಭಿಸಲು ಅನುಮತಿ ಪಡೆಯುತ್ತಾರೆ. ಮಾಲೀಕರ ಗೊಂದಲಗಳನ್ನು ನಿವಾರಿಸಲು ಸಂಸ್ಥೆಗಳು ನಿರಂತರ ಪ್ರಯತ್ನದಲ್ಲಿವೆ ಎಂದರು.

ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ₹3 ಲಕ್ಷ ಲಂಚ ಪಡೆದ ಬೆಸ್ಕಾಂ ಎಇ ಲೋಕಾ ಬಲೆಗೆ

Leave a Reply

Your email address will not be published. Required fields are marked *