BBMP
Loading ...

Sarigama viji

ಬೆಂಗಳೂರು: ಕರ್ನಾಟಕ ಚಲನಚಿತ್ರ ನಟರಾದ ಹಿರಿಯ ಕಲಾವಿದ ಹಾಸ್ಯ ಚಕ್ರವರ್ತಿ ಸರಿಗಮ ವಿಜಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.

ಕನ್ನಡದ ಹಲವು ಚಿತ್ರಗಳಲ್ಲಿ ಹಾಸ್ಯನಟರಾಗಿ ಅಭಿನಯಿಸಿ, ನೋಡುಗರನ್ನು ರಂಚಿಸುವ ಮೂಲಕ ಹಾಸ್ಯ ಚಕ್ರವರ್ತಿ ಎಂಬುದಾಗಿಯೇ ಕರೆಸಿಕೊಂಡಿದ್ದವರು ಸರಿಗಮ ವಿಜಿ ಅವರು.

ಸ್ಯಾಂಡಲ್ ವುಡ್ ಹಿರಿಯ ಕಲಾವಿದ, ಹಾಸ್ಯ ಚಕ್ರವರ್ತಿ ಸರಿಗಮ ವಿಜಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಬೆಂಗಳೂರಿನ ಮಣಿಪಾಲ್ ಹಾಸ್ಪಿಟಲ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯನಟ ಸರಿಗಮ ವಿಜಿ ಕುಟುಂಬ ಈಗ ಆರ್ಥಿಕವಾಗಿ ಕಷ್ಟದಲ್ಲಿ ಕೂಡ ಇದ್ದು, ಅವರ ಚಿಕಿತ್ಸೆಗೂ ನೆರವಾಗುವಂತೆ ಸರ್ಕಾರವನ್ನು ಕೋರಿದೆ.

ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳು ಜಾರಿ: ಅರ್ಹ ವರ್ಗದವರು ಈ ಕೂಡಲೇ ಅರ್ಜಿ ಸಲ್ಲಿಸಿ, ಸಂಪೂರ್ಣ ವಿವರ ಇಲ್ಲಿದೆ…

Leave a Reply

Your email address will not be published. Required fields are marked *