BBMP
Loading ...

NAMMA-METRO-2

ಬೆಂಗಳೂರು: ರಾಜ್ಯದ ಜನತೆಗೆ ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್‌ ಎದುರಾಗಿದೆ. ಸರ್ಕಾರ ಒಂದಾದ ನಂತರ ಒಂದರ ಬೆಲೆ ಏರಿಕೆ ಮಾಡುತ್ತಿದ್ದು ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ. ಈಗಾಗಲೇ ಕೆಎಸ್ಆರ್ ಸಿಟಿ, ಬಿಎಂಟಿಸಿ ಬಸ್ ದರ ಏರಿಕೆ ಆಗಿದೆ. ಈ ಬೆನ್ನಲ್ಲೇ ಬೆಂಗಳೂರು ಜನತೆಗೆ ನಮ್ಮ ಮೆಟ್ರೋ ಶಾಕ್ ನೀಡಲು ತಯಾರಾಗಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಪ್ರಯಾಣದರ ಹೆಚ್ಚಿಸಲು ಸಕಲ ಸಿದ್ಧತೆ ನಡೆಸಿದೆ. ನಮ್ಮ ಮೆಟ್ರೋ ಅಂತಿಮ ವರದಿ ಕುರಿತು ಸಮಾಲೋಚನೆ ನಡೆಸಲಿದೆ. ಶೇಕಡಾ 15ರಿಂದ 20ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆಯಾಗುವ ಸಾಧ್ಯತೆ ಇದೆ.

ಜನವರಿ 17ಕ್ಕೆ ದರ ಪರಿಷ್ಕರಣೆ ಸಮಿತಿ ಸಲ್ಲಿಸಿರುವ ಅಂತಿಮ ವರದಿ ಕುರಿತು ಸಮಾಲೋಚನೆ ನಡೆಯಲಿದೆ. ಜನವರಿ‌ 17ರ ಬಿಎಂಆರ್‌ಸಿಲ್ ಮಂಡಳಿ ಸಭೆಯಲ್ಲಿ ಅಂತಿಮ‌ ನಿರ್ಧಾರ ಪ್ರಕಟವಾಗಲಿದೆ. ಸಭೆಯ ವರದಿಯನ್ನು ಅಂತಿಮವಾಗಿ ಸರ್ಕಾರ ಸಲ್ಲಿಸಲು ಬಿಎಂಆರ್‌ಸಿಲ್ ನಿರ್ಧಾರ ಮಾಡಿದೆ.

2017ರಲ್ಲಿ ಕೊನೆಯ ಬಾರಿಗೆ ಮೆಟ್ರೋ ಪ್ರಯಾಣ ದರ ಏರಿಕೆಯಾಗಿತ್ತು. ಏಳು ವರ್ಷಗಳಿಂದ‌ ಮೆಟ್ರೋ ಪ್ರಯಾಣ ದರ ಏರಿಕೆಯಾಗದ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಿದೆ. 2017 ರಲ್ಲಿ‌ ಶೇಕಾಡ 10- 15ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು.

ನಮ್ಮ ಮೆಟ್ರೋ ರೈಲು ಮುಂದಿನ ಐದು ವರ್ಷದಲ್ಲಿ 220 ಕಿಮೀ ನಷ್ಟು ವಿಸ್ತರಣೆ ಹೊಂದಲಿರುವ ಹಿನ್ನೆಲೆ ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾ ಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಶೇ. 15-20 ರಷ್ಟು ದರ ಏರಿಕೆ ಅನಿವಾರ್ಯ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ದರಗಳು ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕನಿಷ್ಠ ದರ ₹10, ಗರಿಷ್ಠ ದರ ₹60 ರೂಪಾಯಿವರೆಗೆ ಇದೆ. ಜತೆಗೆ ಸ್ಮಾರ್ಟ್ ಕಾರ್ಡ್‌ಗಳು ಮತ್ತು ಕ್ಯೂಆರ್‌ಕೋಡ್ ಟಿಕೆಟ್ ಸಹ ಲಭ್ಯವಿದೆ.

ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಂಬಂಧ ರಚಿಸಿದ್ದ ಸಮಿತಿ ಸಹ ತನ್ನ ವರದಿ ನೀಡಿದೆ. ಜನವರಿ 17ರಂದು ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್ ನಲ್ಲಿ ಈ ಬಗ್ಗೆ ಸಹ ಚರ್ಚೆ ನಡೆಯಲಿದೆ. ಶೇಕಾಡ ದರ ಎಷ್ಟು ಹೆಚ್ಚಿಸಬೇಕು, ಸಾಧಕ, ಬಾಧಕಗಳೇನು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಚರ್ಚೆ ಬಳಿಕ ಅಂತಿಮ‌ ನಿರ್ಧಾರದ ವರದಿಯನ್ನು ಸರ್ಕಾರಕ್ಕೆ ಬಿಎಂಆರ್ ಸಿಎಲ್ ಸಲ್ಲಿಸಲಿದೆ. ಸರ್ಕಾರದ ಗ್ರೀನ್ ಸಿಗ್ನಲ್ ಬಳಿಕ ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಲಿದೆ.

ಕರ್ನಾಟಕದಲ್ಲಿ ಮುಂದಿನ 3 ದಿನ ಶೀತಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ!

Leave a Reply

Your email address will not be published. Required fields are marked *