BBMP
Loading ...

DYSP

ತುಮಕೂರು : ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ರಾಸಲೀಲೆ ನಡೆಸಿದ್ದ ತುಮಕೂರು ಜಿಲ್ಲೆಯ ಮಧುಗಿರಿ ಠಾಣೆಯ ಡಿವೈಎಸ್ಪಿ ರಾಮಚಂದ್ರಪ್ಪನನ್ನು ಮಧುಗಿರಿಯ JMFC ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಮಹಿಳೆ ಡಿವೈಎಸ್ಪಿ ರಾಮಚಂದ್ರಪ್ಪನ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.

ಹೌದು ಮಹಿಳೆಯೊಬ್ಬರು ವಿಡಿಯೋ ಮೂಲಕ ಡಿವೈಎಸ್ಪಿ ರಾಮಚಂದ್ರಪ್ಪನ ಕಾಮಪುರಾಣವನ್ನು ಬಯಲಿಗೆ ಎಳೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿರುವ ಮಹಿಳೆ ಫೇಸ್ ಬುಕ್ ನಲ್ಲಿ ಪರಿಚಯವಾದಂತಹ ಗೆಳೆಯನಿಗೆ 12 ಲಕ್ಷಕ್ಕೂ ಅಧಿಕ ಹಣ ನೀಡಿ ವಂಚನೆಗೆ ಒಳಗಾಗಿದ್ದರು. ಈ ಕುರಿತು ಠಾಣೆಗೆ ದೂರು ನೀಡಲು ಮಹಿಳೆ ತನ್ನ ಗಂಡನ ಜೊತೆಗೆ ಆಗಮಿಸಿದ್ದಾರೆ.ತನ್ನ ಹಣವನ್ನು ವಾಪಸ್‌ ಕೊಡಿಸುವಂತೆ ದೂರು ನೀಡಿದ್ದರು. ಈ ದೂರನ್ನು ಆಲಿಸಿ ಡಿವೈಎಸ್‌ಪಿ ರಾಮಚಂದ್ರಪ್ಪ ತನ್ನ ಕಚೇರಿಗೆ ಕರೆಸಿಕೊಂಡಿದ್ದ.

ಈ ವೇಳೆ ಮಹಿಳೆ ಮಹಿಳಾ ಆಯೋಗಕ್ಕೆ ಕೂಡ ದೂರು ನೀಡಿದ್ದ ಮಹಿಳೆ, ಇದರ ಹಿನ್ನೆಲೆಯಲ್ಲಿ ಡಿವೈಎಸ್ಪಿ ರಾಮಚಂದ್ರಪ್ಪ ಆಕೆ ಗಂಡನನ್ನು ಮಾತ್ರ ಹೊರಗೆ ಕೂಡಿಸಿ ಆಕೆಯನ್ನು ಕೊಠಡಿಯ ಒಳಗೆ ಕರೆದಿದ್ದ. ಈ ವೇಳೆ ಮಹಿಳೆಯ ಜೊತೆಗೆ ಅಸಭ್ಯವಾಗಿ ವರ್ತಿಸಿದ ರಾಮಚಂದ್ರಪ್ಪ ಆಕೆಯ ದೇಹದ ಭಾಗಗಳಿಗೆ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನೀವು ನನ್ನ ತಂದೆಯ ಸಮಾನ ಎಂದು ಕಾಲಿಗೆ ಬಿದ್ದು ಬೇಡಿಕೊಂಡರು ಕೂಡ ಇದೆಲ್ಲ ಸಹಜ ಸಹಕರಿಸು ನಿನಗೆ 500 ರೂಪಾಯಿ ಕೊಡುತ್ತೇನೆ ಎಂದು ಹಣ ನೀಡಲು ಕೂಡ ಮುಂದಾಗಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.

ಬಳಿಕ ಆಕೆ ಹೆದರಿಕೊಂಡು ಕೊಠಡಿಯಲ್ಲಿಯೇ ಮೂತ್ರ ಮಾಡಿಕೊಂಡ ಮಹಿಳೆ, ಅಲ್ಲಿಂದ ತನ್ನ ಗಂಡನ ಹತ್ತಿರ ಬಂದು ಕುಳಿತಿದ್ದಾಳೆ. ಬಳಿಕ ಆತನಿಗೆ ಎಲ್ಲ ವಿಷಯವನ್ನು ತಿಳಿಸಿದಾಗ ಕಳೆದುಕೊಂಡ ಹಣವು ಬೇಡ ನಮಗೆ ಯಾವ ನ್ಯಾಯವೂ ಬೇಡ ಎಂದು ದಂಪತಿ ತೆರಳಿದ್ದಾರೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಮತ್ತೊಬ್ಬ ಮಹಿಳೆ ಜೊತೆಗೆ ಡಿವೈಎಸ್ಪಿ ರಾಮಚಂದ್ರಪ್ಪ ರಾಸಲೀಲೆ ನಡೆಸಿದ್ದ ಪ್ರಕರಣ ಹೊರ ಬೀಳುತ್ತಿದ್ದಂತೆ ಈ ಮಹಿಳೆ ವಿಡಿಯೋ ಮೂಲಕ ರಾಮಚಂದ್ರಪ್ಪನ ಮತ್ತೊಂದು ಕಾಮಪುರಾಣ ಬಯಲಿಗೆ ಎಳೆದಿದ್ದಾಳೆ. ಹಾಗಾಗಿ ರಾಮಚಂದ್ರಪ್ಪ ವಿರುದ್ಧ ಮತ್ತೊಂದು ದೂರು ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಯಾಣಿಕರಿಗೆ ಮತ್ತೊಂದು ಕಹಿಸುದ್ದಿ: ಖಾಸಗಿ ಬಸ್‌ ದರ ಏರಿಕೆಗೆ ಅವಕಾಶ ಕೋರಿದ ಬಸ್‌ ಮಾಲೀಕರು

Leave a Reply

Your email address will not be published. Required fields are marked *