BBMP
Loading ...

Siddaramaiah

ನವದೆಹಲಿ: ದೇಶದಲ್ಲಿ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವ ರಾಜ್ಯದ ಮುಖ್ಯಮಂತ್ರಿ ಯಾವ ಸ್ಥಾನವನ್ನು ಹೊಂದಿದ್ದಾರೆ. ಇಲ್ಲಿದೆ ವರದಿ.  ಅಸೋಸಿಯೇಷನ್ ಫಾರ್‌ಡೆಮಾಕ್ರಟಿಕ್ ರಿಫಾರ್ಮ (ಎಡಿಆರ್) ಸ್ವಯಂಸೇವಾ ಸಂಸ್ಥೆ ಬಿಡುಗಡೆ ಮಾಡಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಶ್ರೀಮಂತ ಸಿಎಂಗಳ ಪೈಕಿ 3ನೇ ಸ್ಥಾನ ಪಡೆದಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು 931 ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಭಾರತದ ನಂ.1 ಧನಿಕ ಸಿಎಂ ಎನ್ನಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶದ ಪೆಮಾ ಖಂಡು 332 ಕೋಟಿ ರು. ಆಸ್ತಿಯೊಂದಿಗೆ 2ನೇ ಹಾಗೂ 51 ಕೋಟಿ ರು. ಆಸ್ತಿಯೊಂದಿಗೆ ಸಿದ್ದರಾಮಯ್ಯ 3ನೇ ಸ್ಥಾನ ಪಡೆದಿದ್ದಾರೆ.

ಆದರೆ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸಿಎಂಗಳ ನಿವ್ವಳ ಆದಾಯ 7.3 ಪಟ್ಟು ಅಧಿಕ: ಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) 2023-2024ರಲ್ಲಿ ಸರಿಸು ಮಾರು 1,85,854 ರು. ಆಗಿದ್ದರೆ, ಮುಖ್ಯ ಮಂತ್ರಿಗಳ ಸರಾಸರಿ ಸ್ವ-ಆದಾಯವು 13,64, 310 ರು. ಆಗಿದೆ. ಇದು ಭಾರತದ ಸರಾಸರಿ ತಲಾ ಆದಾಯಕ್ಕಿಂತ 7.3 ಪಟ್ಟು ಹೆಚ್ಚು.

ಬಡ ಸಿಎಂಗಳು:
ಪ.ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ರು. ಆಸ್ತಿಯೊಂದಿಗೆ ‘ಅತ್ಯಂತ ಬಡವ ಸಿಎಂ’ ಆಗಿದ್ದರೆ, 55 ಲಕ್ಷ ರು. ಆಸ್ತಿ ಹೊಂದಿರುವ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಒಮರ್‌ಅಬ್ದುಲ್ಲಾ ಅವರು ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.  ಹಾಗೂ 1 ಕೋಟಿ ರು. ಆಸ್ತಿಯೊಂದಿಗೆ ಕೇರಳದ ಪಿಣರಾಯಿ ವಿಜಯನ್ 3ನೇ ಸ್ಥಾನದಲ್ಲಿದ್ದಾರೆ.

13 ಸಿಎಂ ಮೇಲೆ ಕ್ರಿಮಿನಲ್ ಕೇಸು: 

13 (ಶೇ. 42ರಷ್ಟು) ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದರೆ, ಅವರಲ್ಲಿ 10 (ಶೇ.32) ಮಂದಿ ಕೊಲೆ ಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.  ಇನ್ನು 18 ಸಿಎಂಗಳ ಮೇಲೆ ಯಾವುದೇ ಕ್ರಿಮಿನಲ್ ಕೇಸಿಲ್ಲ. ದೇಶದ 31 ಮುಖ್ಯಮಂತ್ರಿ ಗಳ ಪೈಕಿ ಇಬ್ಬರು (ಪ.ಬಂಗಾಳದ ಮಮತಾ ಬ್ಯಾನರ್ಜಿ ಮತ್ತು ದೆಹಲಿಯ ಅತಿಶಿ) ಮಾತ್ರ ಇಬ್ಬರು ಮಹಿಳೆಯರಾಗಿದ್ದಾರೆ.

ಸಿದ್ದರಾಮಯ್ಯ 23 ಕೋಟಿ ರುಪಾಯಿ ಸಾಲಗಾರ ಸಿಎಂ 

ಪೆಮಾ ಖಂಡು ಅವರು 180 ಕೋಟಿ ರು.. ಸಾಲ ಹೊಂದಿದ್ದಾರೆ. ಸಿದ್ದರಾಮಯ್ಯ 23 ಕೋಟಿ ರು. ಹಾಗೂ ನಾಯ್ಡು 10 ಕೋಟಿ ರು. ಸಾಲ ಹೊಂದಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.

ಹೊಸ ವರ್ಷಾಚರಣೆ ಹಿನ್ನಲೆ ನಾಳೆ ರಾತ್ರಿ 11ರಿಂದ ಮಧ್ಯರಾತ್ರಿ 2ರವರೆಗೆ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರ

Leave a Reply

Your email address will not be published. Required fields are marked *