BBMP
Loading ...

Annabhagya Yojana

ಬೆಂಗಳೂರು : ರಾಜ್ಯದ ಪ್ರಮುಖ ಯೋಜನೆಗಳಲ್ಲಿ ಒಂದಾದಂತಹ ಅನ್ನ ಭಾಗ್ಯ ಯೋಜನೆ ಬಡವರಿಗೆ ಅನುಕೂಲವಾಗಲಿ ಹಾಗೂ ಬಡವರು ಯಾವತ್ತು ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕಾಗಿ ಈ ಒಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಹಿನ್ನೆಲೆಯಲ್ಲಿ ಇದೀಗ ಈ ಒಂದು ಯೋಜನೆಯ ಅಡಿಯಲ್ಲಿ ಸಿನಿಮಾ ತಯಾರಿಸಲು ನಿರ್ಧಾರ ಮಾಡಲಾಗಿದ್ದು ಮುಂದಿನ ವರ್ಷ ಅಂದರೆ 2025 ಫೆಬ್ರವರಿ 2ರಂದು ‘ಅನ್ನಭಾಗ್ಯ’ ಯೋಜನೆ ಕುರಿತು ಚಿತ್ರೀಕರಣ ಆರಂಭವಾಗಲಿದೆ.

ಹೌದು ಅನ್ನಭಾಗ್ಯ ಯೋಜನೆ ಕುರಿತು ಸಿನಿಮಾ ಮಾಡಲು ನಿರ್ಧರಿಸಿದ್ದು, 2025 ಫೆಬ್ರವರಿ 2ರಂದು ಸಿನಿಮಾ ಚಿತ್ರಣ ಆರಂಭ ಮಾಡಲಾಗುತ್ತಿದೆ. ಶೂಟಿಂಗ್ ಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದೆ.

ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಹ್ವಾನ ನೀಡಲಾಗಿದೆ. ಬಾ.ಮಾ ಹರೀಶ್ ಹಾಗೂ ಪಡಿತರ ವಿತರಕರ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಟಿ ಕೃಷ್ಣಪ್ಪ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಹ್ವಾನ ನೀಡಲಾಗಿದೆ.

ಕರಾವಳಿಯ ಪ್ರತಿ ಕಂಬಳಕ್ಕೂ 5 ಲಕ್ಷ ರೂ. ನೀಡಲು ರಾಜ್ಯ ಸರ್ಕಾರ ಆದೇಶ!

Leave a Reply

Your email address will not be published. Required fields are marked *