BBMP
Loading ...

Nandi Hills

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೂ ನಂದಿಬೆಟ್ಟಕ್ಕೂ ಅದೇನೊ ಒಂಥರ ನಂಟು.. ಪ್ರಕೃತಿ ಮಡಿಲಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹೊಸ ವರ್ಷ 2025ನ್ನು ಸ್ವಾಗತಿಸೋಣ ಅಂತ, ಕೆಲ ಪಾರ್ಟಿ ಪ್ರಿಯರು ಅಂದುಕೊಂಡಿದ್ರೆ… ಈಗಲೇ ನಿಮ್ಮ ಪ್ಲ್ಯಾನ್‌ ಬದಲಾಯಿಸಿಕೊಳ್ಳಿ, ಯಾಕಂದ್ರೆ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಏರಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಅಂದ್ರೆ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೆವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1,478 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಫೇಮಸ್. ಇನ್ನೂ ನಂದಿಗಿರಿಧಾಮದಲ್ಲಿ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ಸ್ವಾಗತೀಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸಿಗೆ ತಣ್ಣೀರು ಎರಚಿದೆ. ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.

ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2025 ಜನವರಿ 1 ರಂದು ಬೆಳಿಗ್ಗೆ 6 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶವನ್ನೂ ಬಂದ್ ಮಾಡಲಾಗಿದೆ. ಇದ್ರಿಂದ ಪ್ರವಾಸೋದ್ಯಮ ಇಲಾಖೆಗೂ ನಿರ್ಬಂಧದ ಬಿಸಿ ಮುಟ್ಟಿದೆ.

ಒಟ್ಟಾರೆ ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಪಬ್ ರೆಸಾರ್ಟ್‌ಗಳ ಬದಲು ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯಕ್ಕೆ ನಿರಾಸೆಯಾಗಿದೆ.

ಕಬ್ಬನ್‌ ಪಾರ್ಕಿನಲ್ಲಿ ಯಾವುದೇ ಗುಂಪು ಚಟುವಟಿಕೆಗೆ ತೋಟಗಾರಿಕಾ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಅನುಮತಿ ಕಡ್ಡಾಯ

Leave a Reply

Your email address will not be published. Required fields are marked *