ತುಮಕೂರು: ದಾಳಿ ವೇಳೆ ವಶಕ್ಕೆ ಪಡೆದಿದ್ದ ವಿದ್ಯುತ್ ಮೀಟರ್ ವಾಪಸ್ ನೀಡಲು 1.40 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟು, 15 ಸಾವಿರ ರೂ. ತೆಗೆದುಕೊಳ್ಳುವಾಗ ಬೆಸ್ಕಾಂ ಜಾಗೃತ ದಳದ ಕಾನ್‌ಸ್ಟೇಬಲ್ ಕೃಷ್ಣಮೂರ್ತಿ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಸ್ಕಾಂ ಜಾಗೃತ ದಳದವರು ಸೆ. 21ರಂದು ಗುಬ್ಬಿ ತಾಲ್ಲೂಕಿನ ಕಡಬಾ ಹೋಬಳಿಯ ಕೆ.ಮತ್ತಿಘಟ್ಟ ಗ್ರಾಮದ ಎಂ.ಜಿ.ಬಸವರಾಜು ಅವರಿಗೆ ಸೇರಿದ ಮಂಜುನಾಥ ಅರೇಕಾ ಪ್ಲೇಟ್ಸ್ ತಯಾರಿಕಾ ಶೆಡ್ ಮೇಲೆ ದಾಳಿ ನಡೆಸಿದ್ದರು. ಶೆಡ್‌ನಲ್ಲಿ ಅಳವಡಿಸಿದ್ದ ವಿದ್ಯುತ್ ಮೀಟರ್ ವಶಕ್ಕೆ ಪಡೆದಿದ್ದರು. ಈ ಮೀಟರ್ ವಾಪಸ್ ನೀಡಲು 1.40 ಲಕ್ಷ ರೂ. ಲಂಚ ಕೊಡುವಂತೆ ಕೃಷ್ಣಮೂರ್ತಿ ಒತ್ತಾಯಿಸಿದ್ದರು.

ಬಸವರಾಜು ನ. 30ರಂದು 85 ಸಾವಿರ ರೂ., ಡಿ. 7ರಂದು 40 ಸಾವಿರ ರೂ. ಕೊಟ್ಟಿದ್ದರು. ಬಾಕಿ ಹಣ ನೀಡಿದರೆ ಮಾತ್ರ ವಿದ್ಯುತ್ ಮೀಟರ್ ಮರಳಿಸುವುದಾಗಿ ಹೇಳಿದ್ದರು. ಲಂಚಕ್ಕೆ ಒತ್ತಾಯಿಸಿದ್ದರಿಂದ ಬೇಸತ್ತು ಬಸವರಾಜು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಗರದ ಬಿಜಿಎಸ್ ವೃತ್ತದ ಬಳಿಯ ಖಾಸಗಿ ಹೋಟೆಲ್‌ನಲ್ಲಿ 15 ಸಾವಿರ ರೂ. ಹಣ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕೃಷ್ಣಮೂರ್ತಿಯನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಡಿವೈಎಸ್‌ಪಿ ಕೆ.ಜಿ.ರಾಮಕೃಷ್ಣ, ಬಿ.ಉಮಾಶಂಕರ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಶಿವರುದ್ರಪ್ಪ ಮೇಟಿ, ಬಿ.ಮೊಹ್ಮದ್ ಸಲೀಂ, ಕೆ.ಸುರೇಶ್, ಸಿಬ್ಬಂದಿ ಆಲಂಪಾಷ, ಪ್ರಕಾಶ್, ರಾಘವೇಂದ್ರ, ಟಿ.ಎಸ್.ಗಿರೀಶ್‌ಕುಮಾರ್, ರವೀಶ್, ಬಾಸ್ಕರ್, ನಳಿನಾಕ್ಷಿ, ಯಶೋದ, ಕರಿಯಪ್ಪ, ಸಂತೋಷ್, ಬಸವರಾಜು, ಮಹಾಲಿಂಗಪ್ಪ, ಮಹೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ.ಲಕ್ಷ್ಮಿನಾರಾಯಣ ತಿಳಿಸಿದ್ದಾರೆ.
ಮೈಶುಗರ್ ಸಕ್ಕರೆ ಕಾರ್ಖಾನೆಯ 52 ಕೋಟಿ ರೂ. ವಿದ್ಯುತ್ ಬಿಲ್ ಮನ್ನಾ ಮಾಡಿದ ರಾಜ್ಯ ಸರ್ಕಾರ..!