BBMP
Loading ...

KC Genaral

ಬೆಂಗಳೂರು: ಕೆ.ಸಿ.ಜನರಲ್​​​​​ ಆಸ್ಪತ್ರೆಗೆ ಇಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್​. ಪಾಟೀಲ್​​​, ಉಪಲೋಕಾಯುಕ್ತ ಕೆ.ಎನ್​.ಫಣೀಂದ್ರ ಹಾಗೂ ಜಸ್ಟೀಸ್ ಬಿ.ವೀರಪ್ಪ ನೇತೃತ್ವದ ನಿಯೋಗ ದಿಢೀರ್​ ಭೇಟಿ ನೀಡಿದೆ.

ಮಲ್ಲೇಶ್ವರಂನಲ್ಲಿರುವ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ವೈದ್ಯರ ಅಲಭ್ಯತೆ, ಔಷಧಗಳ ಕೊರತೆ, ಶುಚಿತ್ವದ ಕುರಿತು ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿರುವ ಲೋಕಾಯುಕ್ತ ನ್ಯಾಯಮೂರ್ತಿ ನೇತೃತ್ವದ ನಿಯೋಗ, ರೋಗಿಗಳ ಅಹವಾಲು ಆಲಿಸಿದೆ.

“ಆಸ್ಪತ್ರೆಗೆ ಕಳೆದ ತಿಂಗಳು ತಮ್ಮ ಮಗಳನ್ನು ಹೆರಿಗೆಗೆಂದು ಕರೆತಂದಾಗ ವಾರ್ಡ್‌ನ ಸಿಬ್ಬಂದಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ತಾಯಿ ಕಾರ್ಡ್‌ನ್ನೇ ಕಿತ್ತಿಟ್ಟುಕೊಂಡು ಕನಿಷ್ಟ ಎಂದರೂ 500 ರೂಪಾಯಿ ಕೇಳಿದರು” ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳ ಮುಂದೆ ಮಂಜುಳಾ ಎಂಬವರು ದೂರಿದರು.

“ಅಲ್ಲದೇ ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ವೈದ್ಯರು ಇಲ್ಲದಿರುವುದರಿಂದ ಸರಿಯಾಗಿ ಚಿಕಿತ್ಸೆ ಸಿಗುವುದಿಲ್ಲ. ಆಸ್ಪತ್ರೆಯಲ್ಲಿ ಸರಿಯಾಗಿ ಶುಚಿತ್ವ ಕಾಪಾಡುತ್ತಿಲ್ಲ. ಔಷಧಿಗಳ ಕೊರತೆಯಿದೆ. ವ್ಹೀಲ್​ ಚೇರ್​ ಕೂಡ ರೋಗಿಗಳಿಗೆ ಸರಿಯಾಗಿ ಸಿಗುವುದಿಲ್ಲ” ಎಂದು ರೋಗಿಗಳು ದೂರು ನೀಡಿದ್ದಾರೆ.

ಮಹಿಳೆಯರ ಬದುಕಿಗೆ ಆಧಾರವಾದ ಗೃಹಲಕ್ಷ್ಮೀ ಯೋಜನೆ: ಹೊಲಿಗೆ ಯಂತ್ರ ಖರೀದಿ ಸೇರಿ ಹಲವು ವ್ಯಾಪಾರಕ್ಕೆ ಬಂಡವಾಳ!

Leave a Reply

Your email address will not be published. Required fields are marked *