ಬೆಂಗಳೂರು: ಗೋವಿಂದರಾಜನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಐವರು ಬೈಕ್, ಮೋಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಸೋಹೆಲ್, ಭರತ್,ಹರೀಶ್, ಸಂತೋಷ್,ಸಲ್ಮಾನ್ ಖಾನ್ ಬಂಧಿತ ಆರೋಪಿಗಳಾಗಿದ್ದು, ಬೈಕ್ ಕದ್ದು ಅವುಗಳನ್ನ ಮೊಬೈಲ್ ಕಳ್ಳತನಕ್ಕೆ ಬಳಸಿಕೊಳ್ತಿದ್ದರು.
ರಸ್ತೆಗಳಲ್ಲಿ ಓಡಾಡುವವರು ಬಾರ್ ಗಳಲ್ಲಿರುವವರಿಂದ ಕಳ್ಳತನ ಮಾಡ್ತಿದ್ದರು. ಬಿಲ್ಡಂಗ್ ಕನ್ಸ್ಟ್ರಕ್ಚನ್ ಕೆಲಸಗಾರರನ್ನೂ ಟಾರ್ಗೆಟ್ ಮಾಡಿ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಇಬ್ಬರು ನಚಿಕೇತ್ ಪಾರ್ಕ್ ಮತ್ತು ಮೂವರು ಜಿಕೆ ಡಬ್ಲ್ಯೂ ಲೇಔಟ್ ಬಳಿ ಬಂಧಿಸಿದ್ದು,
ಬಂಧಿತರಿಂದ ಒಟ್ಟು 6 ಲಕ್ಷ ಮೌಲ್ಯದ 38 ಮೊಬೈಲ್ ಮತ್ತು 8 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ. ಇನ್ನೂ ಘಟನೆ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Election Results Live : ಕರ್ನಾಟಕ ಉಪಚುನಾವಣೆ, ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ ನೇರಪ್ರಸಾರ


