BBMP
Loading ...

KSLECA

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಬಾಗಲಕೋಟೆ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಇದೇ ಶನಿವಾರ (ನ.23)ದಂದು ರಾಜ್ಯ ಮಟ್ಟದ ಕ್ರೀಡಾಕೂಟ ನಡೆಯಲಿದೆ.​

ಗುತ್ತಿಗೆದಾರರ ಸಂಘದ ಗೌರವಾನ್ವಿತ ರಾಜ್ಯಾಧ್ಯಕ್ಷರಾದ ಶ್ರೀ ರಮೇಶ್​ ಅವರ ಅಧ್ಯಕ್ಷತೆಯಲ್ಲಿ, ಬಾಗಲಕೋಟೆ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಕೂಡಲ ಸಂಗಮದಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಶನಿವಾರ ನಡೆಯಲಿದೆ.

ಅದೇ ದಿನ ಸಂಜೆ ಖ್ಯಾತ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ತಂಡದವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಖ್ಯಾತ ನಿರೂಪಕಿ ಅನುಶ್ರೀಯವರು ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

ದಿನಾಂಕ 24/11/2024 ರಾ ಭಾನುವಾರ ದಂದು ಬಸವಣ್ಣರವರ ಪವಿತ್ರ ಐಕ್ಯ ಸ್ಥಳವಾದ ಕೂಡಲಸಂಗಮದ ಬಸವ ಮಂಟಪದಲ್ಲಿ ನಡೆಯುವ 2022-2023 ಮತ್ತು 2023-2024 ನೇ ಸಾಲಿನ ರಾಜ್ಯ ಮಟ್ಟದ ಸರ್ವ ಸದಸ್ಯರ ಸಭೆಯನ್ನು ಆಯೋಜಿಸಲಾಗಿದೆ. ರಾಜ್ಯದ ಎಲ್ಲ ಗೌರವಾನ್ವಿತ ಗುತ್ತಿಗೆದಾರ ಸದಸ್ಯರುಗಳು ಈ ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವೀ ಗೊಳಿಸಬೇಕೆಂದು ಕೇಂದ್ರ ಸಮಿತಿ ಪರವಾಗಿ ರಾಜ್ಯ ಪ್ರಚಾರ ಸಮಿತಿ ಛೇರ್ಮನ್ R. ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ವಿಕ್ಟೋರಿಯಾ ಸೇರಿ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವಾ ದರ ಹೆಚ್ಚಳ: ಇಲ್ಲಿದೆ ದರ ಹೆಚ್ಚಳ ಪಟ್ಟಿ…

Leave a Reply

Your email address will not be published. Required fields are marked *