ಬೆಂಗಳೂರು: ಪ್ಯಾನ್ ಇಂಡಿಯಾ, ಬಹುನಿರೀಕ್ಷಿತ ಕನ್ನಡ ಸಿನಿಮಾಗಳಲ್ಲಿ ಒಂದಾದ ರಿಷಭ್ ಶೆಟ್ಟಿ ನಟನೆಯ ಪ್ರೀಕ್ವೆಲ್ ‘ಕಾಂತಾರ 2’ ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ.
ಬಹುದಿನಗಳಿಂದ ಸಿನಿಮಾದ ಬಗ್ಗೆ ಮಾಹಿತಿ ಪಡೆಯಲು ಕಾತರ ವ್ಯಕ್ತಪಡಿಸುತ್ತಿದ್ದ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಕಡೆಗೂ ಸಿಹಿ ಸುದ್ದಿ ನೀಡಿದ ರಿಷಭ್, ಚಿತ್ರ ಅಕ್ಟೋಬರ್ 02, 2025ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಹೊಂಬಾಳೆ ಫಿಲಂಸ್ ತಮ್ಮ ಜಾಲತಾಣದ ಖಾತೆಗಳಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ.
𝐓𝐇𝐄 𝐌𝐎𝐌𝐄𝐍𝐓 𝐇𝐀𝐒 𝐀𝐑𝐑𝐈𝐕𝐄𝐃 🔥
𝐓𝐇𝐄 𝐃𝐈𝐕𝐈𝐍𝐄 𝐅𝐎𝐑𝐄𝐒𝐓 𝐖𝐇𝐈𝐒𝐏𝐄𝐑𝐒 🕉️#KantaraChapter1 Worldwide Grand Release on 𝐎𝐂𝐓𝐎𝐁𝐄𝐑 𝟐, 𝟐𝟎𝟐𝟓.#KantaraChapter1onOct2 #Kantara @shetty_rishab @VKiragandur @hombalefilms @HombaleGroup @ChaluveG… pic.twitter.com/KLyXbj3CUj— Rishab Shetty (@shetty_rishab) November 17, 2024
2022ರ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ತೆರೆಕಂಡು ಬ್ಲಾಕ್ಬಸ್ಟರ್ ಚಿತ್ರಗಳ ಸಾಲಿಗೆ ಸೇರಿದ ಕಾಂತಾರ ಭಾಗ 1, ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿತು. ಚಿತ್ರರಂಗಕ್ಕೆ ಹೊಸ ಆಯಾಮ ಮತ್ತು ಪ್ರಶಸ್ತಿಗಳನ್ನು ಹೊತ್ತು ತಂದ ಕಾಂತಾರ ರೂವಾರಿ, ನಟ ರಿಷಭ್ ಶೆಟ್ಟಿಗೆ, ದೇಶದ ದಿಗ್ಗಜ ನಟರಿಂದ ಪ್ರಶಂಸೆ ವ್ಯಕ್ತವಾಯಿತು. ಸದ್ಯ ಕಾಂತಾರ 2 ಬಿಡುಗಡೆಗೆ ಎದುರುನೋಡುತ್ತಿರುವ ಕನ್ನಡಿಗರ ಮಧ್ಯೆ ಇತರೆ ಚಿತ್ರರಂಗದವರ ಗಮನವೂ ಕನ್ನಡ ಸಿನಿಮಾ ಮೇಲಿದೆ ಎಂಬುದು ಗಮನಾರ್ಹ.
ಅನರ್ಹರ ಬಿಪಿಎಲ್ ಕಾರ್ಡ್ಗಳು ಮಾತ್ರ ವಾಪಾಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ


