ನಟ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದೆ. ನಿಶ್ಚಿತಾರ್ಥ ಸಂಭ್ರಮದಲ್ಲಿ ನಟ ಡಾಲಿ ಧನಂಜಯ ಜೋಡಿ ಇದೆ. ಧನಂಜಯ ಅವರ ಮನೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಮದುವೆ ಸಮಭ್ರಮ ಜೋರಾಗಿ ನಡೆಯುತ್ತಿದೆ.
ಲಗ್ನ ಶಾಸ್ತ್ರದಲ್ಲಿ ಧನಂಜಯ ಹಾಗೂ ಭಾವಿ ಪತ್ನಿ ಧನ್ಯತಾ ಭಾಗಿಯಾಗಿದ್ದಾರೆ. ಡಾಲಿ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ ಹಾಗೂ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ನಡೆದಿದೆ. 2025ರ, ಫೆಬ್ರವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಡಾಲಿ ಹಾಗೂ ಧನ್ಯತಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ನಲ್ಲಿ ಡಾಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.

ಡಾಲಿ ಧನಂಜಯ್ ಮಾತನಾಡಿ `ನಮ್ಮ ಅಜ್ಜಿ ಬದುಕಿದ್ದಾಗ ಅವರಿಗೆ ನಾನು ಮದ್ವೆ ಆಗೋ ಹುಡುಗಿನ ಪರಿಚಯ ಮಾಡಿಸಿದ್ದೆ. ನಮ್ಮ ಮದುವೆಗೆ ನನ್ನ ಅಜ್ಜಿಯ ಆಶಿರ್ವಾದ ಇದೆ. ಮದ್ವೆ ಆಗ್ತಿದ್ದೀನಿ. ಎಲ್ಲಾ ಅಭಿಮಾನಿಗಳಿಗೆ ಊಟ ಹಾಕಿಸಬೇಕು. ಶಿವಣ್ಣ ನನ್ನ ಮದ್ವೆ ವಿಚಾರ ತಿಳಿದು ಸಂತೋಷ ಪಟ್ಟರು. ಒಳ್ಳೆ ಡಿಶಿಷನ್ ಅಂತ ಹೇಳಿದ್ರು’ ಎಂದು ಈ ಹಿಂದೆ ಮಾತನಾಡಿದ್ದರು ಡಾಲಿ.
ಡಾಲಿ ಧನಂಜಯ್ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಮದುವೆ ವಿಚಾರ ಹೇಳಿಕೊಂಡಿದ್ದರು. ಆದಷ್ಟು ಬೇಗ ಮದುವೆ ಆಗ್ತೀನಿ ಅಂತಲೂ ಹೇಳಿದ್ದರು. ಆ ಪ್ರಕಾರ ರಾಜ್ಯೋತ್ಸವ ದಿನದಂದು ತಮ್ಮ ಬಾಳ ಸಂಗಾತಿಯನ್ನ ಪರಿಚಯ ಮಾಡಿಸಿದ್ದಾರೆ ಧನು ಮತ್ತು ಧನ್ಯತಾ ಮೈಸೂರಿನಲ್ಲಿಯೇ ದ್ದಾರೆ. ಇಲ್ಲಿಯೇ ಕನೆಕ್ಟ್ ಆಗಿರೋ ಈ ಜೋಡಿ ಇದೀಗ ತಮ್ಮ ಮದುವೆಯನ್ನ ಕೂಡ ಇದೇ ಮೈಸೂರಿನಲ್ಲಿಯೇ ಆಗುತ್ತಿದ್ದಾರೆ.

ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.
ಡಾಲಿ ಧನಂಜಯ್ ಅಭಿನಯದ ಜೀಬ್ರಾ ಚಿತ್ರದ ಟ್ರೈಲರ್ ಇತ್ತೀಚಗಷ್ಟೇ ರಿಲೀಸ್ ಆಗಿತ್ತು. , ಮೆಗಾ ಸ್ಟಾರ್ ಚಿರಂಜೀವಿ ಈ ಟ್ರೈಲರ್ ರಿಲೀಸ್ಗೆ ಬಂದಿದ್ದರು. ಅವರ ಮುಂದೇನೆ ಡಾಲಿ ಧನಂಜಯ್ ಈ ಒಂದು ಹಾಡನ್ನ ಹಾಡಿದ್ರು. ನವೆಂಬರ್ 22 ರಂದು ಜೀಬ್ರಾ ರಿಲೀಸ್ ಆಗುತ್ತಿದೆ. ತೆಲುಗು ಸೇರಿದಂತೆ ಕನ್ನಡದಲ್ಲೂ ಈ ಚಿತ್ರ ರಿಲೀಸ್ ಆಗುತ್ತಿದೆ. ಡೇರ್ ಡೆವಿಲ್ ಮುಸ್ತಾಫಾ ತಂಡವೇ ಈ ಚಿತ್ರದ ಕನ್ನಡ ಡಬ್ಬಿಂಗ್ ಕೆಲಸ ಮಾಡಿದೆ.

ಇನ್ಮುಂದೆ ಈ ವಾಹನಗಳು ಟೋಲ್ ತೆರಿಗೆ ಪಾವತಿಸಬೇಕಾಗಿಲ್ಲ: ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ!


