ರಾಜ್ಯ ಸರ್ಕಾರವು ರಾಜ್ಯದಲ್ಲಿನ ಎಲ್ಲಾ ಆಸ್ತಿಗಳ ನೋಂದಣಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಮಾಡಿದೆ. ಬೆಂಗಳೂರಿನಲ್ಲಿ ಇ – ಖಾತಾ ವಿತರಣೆ ಮಾಡಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ)ಯು ಈಗಾಗಲೇ ನಗರದಲ್ಲಿನ ಆಸ್ತಿಗಳ ಡಿಜಿಟಲೀಕರಣ ಪ್ರಕ್ರಿಯೆ ಪ್ರಾರಂಭಿಸಿದೆ.
ಈ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಸ್ತಿಗಳ ಡಿಜಿಟಲ್ ಪ್ರಕ್ರಿಯೆ ಜೋರಾಗಿದೆ. ಇದೀಗ ಇ -ಖಾತಾ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಆಸ್ತಿಗಳಿಗೂ ಅನ್ವಯಿಸುವ ನಿಟ್ಟಿನಲ್ಲಿ ಮಹತ್ವದ ಆದೇಶವೊಂದನ್ನು ಮಾಡಲಾಗಿದೆ. ಏನಿದು ಹೊಸ ಆದೇಶ, ಯಾರಿಗೆಲ್ಲ ಅನ್ವಯಿಸಲಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಜ್ಯ ಸರ್ಕಾರವು ಆಸ್ತಿಗಳ ವಿಚಾರದಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ಈ ಮೂಲಕ ಕರ್ನಾಟಕದ ಎಲ್ಲಾ ಆಸ್ತಿದಾರರಿಗೂ ಇದು ಅನ್ವಯವಾಗಲಿದೆ ಎಂದು ಹೇಳಲಾಗಿದೆ. ಕರ್ನಾಟಕದಲ್ಲಿನ ಎಲ್ಲಾ ವಸತಿ, ಕೃಷಿ ಹಾಗೂ ವಾಣಿಜ್ಯ ಭೂಮಿಯೂ ಸೇರಿದಂತೆ ಎಲ್ಲಾ ಮಾದರಿಯ ಆಸ್ತಿಗಳ ವಿಚಾರದಲ್ಲೂ ಹೊಸ ಬದಲಾವಣೆ ತರಲಾಗುತ್ತಿದೆ. ಕರ್ನಾಟಕದಲ್ಲಿನ ಎಲ್ಲಾ ಮಾದರಿಯ ಆಸ್ತಿಗಳ ನೋಂದಣಿಗೂ ಇ – ಖಾತಾವನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ಸ್ಥಿರಾಸ್ತಿಗಳ ನೋಂದಣಿ ಮಾಡಿಸಲು ಗ್ರಾಮಪಂಚಾಯಿತಿ ಹಾಗೂ ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆ ವಿತರಿಸುವ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಆಸ್ತಿಗಳ ನೋಂದಣಿ ಸಮಯದಲ್ಲಿ ಅನುಸರಿಸಬೇಕಾದ ವಿಧಾನದ ವಿಷಯದ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ.
ಇ – ಖಾತಾ ಕಡ್ಡಾಯ: ಸಭೆಯಲ್ಲಿ ಹಲವು ವಿಷಯಗಳು ಚರ್ಚೆಯಾಗಿವೆ. ಅದರಲ್ಲಿ ಪ್ರಮುಖವಾಗಿ ರಾಜ್ಯ ಗ್ರಾಮ ಪಂಚಾಯ್ತಿಗಳು ಮತ್ತು ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಮಾದರಿಗಳ ಆಸ್ತಿಗಳ ನೋಂದಣಿಗೆ ಇ-ಖಾತಾಗಳನ್ನು ತ್ವರಿತವಾಗಿ ವಿತರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಎಲ್ಲಾ ಮಾದರಿಯ ಆಸ್ತಿಗಳಿಗೂ ಕಡ್ಡಾಯ ಇ -ಖಾತಾ ಮಾಡುವ ಬಗ್ಗೆ ಆದೇಶಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕರ್ನಾಟಕದ ಎಲ್ಲಾ ಮಾದರಿಯ ಆಸ್ತಿಗಳಿಗೂ ಇ-ಖಾತಾ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಈಗ ಇ – ಖಾತಾ ವಿತರಣೆ ಮಾಡುವುದರಲ್ಲಿ ಕೆಲವು ಸಣ್ಣ ಪುಟ್ಟ ಲೋಪಗಳಿವೆ ಅವುಗಳನ್ನು ಕಾಲ ಮಿತಿಯಲ್ಲಿ ಸರಿಪಡಿಸಲಾಗುತ್ತಿದೆ ಎಂದಿದ್ದಾರೆ.
ಯಾಕೆ ಇ – ಖಾತಾ ಕಡ್ಡಾಯ ಇದರ ಲಾಭವೇನು ?
ರಾಜ್ಯದಲ್ಲಿ ಎಲ್ಲಾ ಆಸ್ತಿಗಳಿಗೂ ಇ – ಖಾತಾ ಕಡ್ಡಾಯ ಮಾಡಿರುವುದರ ಹಿಂದೆ ಪ್ರಮುಖ ಕಾರಣ ಇದೆ. ಅದು ಯಾವುದೇ ಆಸ್ತಿಗಳಲ್ಲಿ ಲೋಪವಾಗುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೇ ಇ-ಖಾತಾ ಕಡ್ಡಾಯ ಮಾಡಿರುವುದರಿಂದ ನಕಲಿ ಖಾತೆಗಳನ್ನು ಸೃಷ್ಟಿ ಮಾಡುವುದು ಸಾಧ್ಯವಿಲ್ಲ. ಅಲ್ಲದೇ ನಕಲಿ ಖಾತಾ ಸೃಷ್ಟಿ ಮಾಡಿ ಮೋಸ ಮಾಡುವುದಕ್ಕೂ ಬರುವುದಿಲ್ಲ. ಇದೆಲ್ಲದಕ್ಕೂ ಕಡಿವಾಣ ಬೀಳಲಿದೆ ಎಂದು ಅವರು ಹೇಳಿದ್ದಾರೆ.
ಇ – ಖಾತಾ ಮಾಡಿಸಲು ಬೇಕಾಗುವ ದಾಖಲೆಗಳೇನು ?
ಇ – ಖಾತಾ ಪಡೆಯುವುದಕ್ಕೆ ಕೆಲವು ಪ್ರಮುಖ ದಾಖಲೆಗಳ ಅವಶ್ಯಕತೆ ಇರುತ್ತದೆ. ಇ – ಖಾತಾ ಮಾಡಿಸುವಾಗ ಯಾವ ದಾಖಲೆಗಳನ್ನು ಕೊಡಬೇಕು. ಯಾವೆಲ್ಲ ದಾಖಲೆಗಳ ಅವಶ್ಯಕತೆ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
* ನಿಮ್ಮ ಆಸ್ತಿ ತೆರಿಗೆ ಪಾವತಿ ಮಾಡಿರುವ ರಶೀದಿ (ಬಿಲ್)
* ನಿಮ್ಮ ಆಸ್ತಿ ಮಾರಾಟ ಅಥವಾ ನೋಂದಾಯಿತ ಪತ್ರ
* ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಲೀಕರ ಆಧಾರ್ ಕಾರ್ಡ್
* ಬೆಸ್ಕಾಂ ಬಿಲ್ (ವಿದ್ಯುತ್ ಬಿಲ್)
* ಜಲಮಂಡಳಿ ಬಿಲ್ (ನೀವು ಕಾವೇರಿ ಸಂಪರ್ಕವನ್ನು ಪಡೆದಿದ್ದರೆ )
* ಬಿಡಿಎ ಅಥವಾ ಯೋಜನಾ ಪ್ರಾಧಿಕಾರದಿಂದ ಲೇಔಟ್ ಅಥವಾ ಸೈಟ್ ಅನುಮೋದನೆ (ದಾಖಲೆ ನಿಮ್ಮ ಬಳಿ ಇದ್ದರೆ)
* ಬಿಬಿಎಂಪಿಯಿಂದ ಕಟ್ಟಡ ಯೋಜನೆ ಅನುಮೋದನೆ (ದಾಖಲೆ ಇದ್ದರೆ)
* ಡಿಸಿ ಪರಿವರ್ತನೆ (ದಾಖಲೆ ಇದ್ದರೆ)
* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಇಲ್ಲವೇ ಕರ್ನಾಟಕ ಹೌಸಿಂಗ್ ಬೋರ್ಡ್(KHB) ಅಥವಾ ಯಾವುದೇ ಸರ್ಕಾರಿ ಪ್ರಾಧಿಕಾರದಿಂದ ನೀಡಲಾಗಿರುವ ಹಂಚಿಕೆ ಪತ್ರ (ಇದು ಒಂದೊಂದು ಪ್ರಕರಣಕ್ಕೂ ಭಿನ್ನವಾಗಿದೆ ಮತ್ತು ನಿಮ್ಮ ಬಳಿ ದಾಖಲೆ ಇದ್ದಾರೆ)
ಇವು ಪ್ರಮುಖವಾಗಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನ್ವಯಿಸುತ್ತದೆ. ಉಳಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಸ್ಥಳೀಯ ಮಟ್ಟಕ್ಕೆ ಅನ್ವಯಿಸುವ ದಾಖಲೆಗಳನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇದೆ.


