BBMP
Loading ...

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಸುದೀಪ್‌ ಅವರ ತಾಯಿ ಸರೋಜಾ ಬಳಲುತ್ತಿದ್ದರು ಎನ್ನಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು ಚಿಕಿತ್ಸೆ ಫಲಕಾರಿ ಆಗದೆ ಸುದೀಪ್ ತಾಯಿ ಸರೋಜಾ ಅವರ ನಿಧನರಾಗಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪಾರ್ಥಿವ ಶರೀರವನ್ನ ಜೆಪಿ ನಗರದ ನಿವಾಸಕ್ಕೆ ಕುಟುಂಬಸ್ಥರು ತರಲಿದ್ದಾರೆ ಎನ್ನಲಾಗಿದೆ.

ನಿನ್ನೆ ಜಯನಗರದ ಅಪೋಲೋ ಆಸ್ಪತ್ರೆಗೆ ಸರೋಜ ಅವರನ್ನು ದಾಖಲಿಸಲಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೆ ಸುದೀಪ್ ತಾಯಿ ಸರೋಜಾ ನಿಧನರಾಗಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪಾರ್ಥಿವ ಶರೀರವನ್ನ ಜೆಪಿ ನಗರದ ನಿವಾಸಕ್ಕೆ ಕುಟುಂಬಸ್ಥರು ತರಲಿದ್ದಾರೆ. ಸುದೀಪ್ ಅಮ್ಮನಿಗೆ 86 ವರ್ಷ ವಯಸ್ಸಾಗಿತ್ತು.

ನಟ ಕಿಚ್ಚ ಸುದೀಪ್‌ ಕನ್ನಡ ಸಿನಿರಂಗದಲ್ಲಿ ಟಾಪ್‌ ನಟ. ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್‌ವುಡ್‌ಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಕಲಾವಿದ. ಕಿಚ್ಚ ಸುದೀಪ್‌ ಬರೀ ನಟನೆ ಮಾತ್ರವಲ್ಲದೇ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ನಿರೂಪಣೆ ಮಾಡುವುದರ ಕಿರುತೆರೆ ಪ್ರೇಕ್ಷರನ್ನು ರಂಜಿಸಿದ್ದಾರೆ.

300 ರೂ.ಲಂಚ ಪಡೆದ ಸರ್ಕಾರಿ ಟೈಪಿಸ್ಟ್‌ ಕೆಲಸದಿಂದ ವಜಾ! ರಾಜ್ಯ ಸರ್ಕಾರದ ಕ್ರಮ ಸರಿ ಎಂದ ಕರ್ನಾಟಕ ಹೈಕೋರ್ಟ್‌

Leave a Reply

Your email address will not be published. Required fields are marked *