BBMP
Loading ...

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಗುರುತಿನ ಸಂಖ್ಯೆಯನ್ನು(ಪಿಐಡಿ) ಬೆಸ್ಕಾಂನ ವಿದ್ಯುತ್​ ಬಿಲ್​ನಲ್ಲಿ ನಮೂದಿಸಲಾಗುವುದು ಎಂದು ಬಿಬಿಎಂಪಿ ಮುಖ್ಯಆಯುಕ್ತ ತುಷಾರ್​ ಗಿರಿನಾಥ್​ ಹೇಳಿದ್ದಾರೆ.

ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಪಿಎಸ್​ ಮಾಹಿತಿಯನ್ನು ಪ್ರತಿ ಆಸ್ತಿಗೂ ಸೆರೆ ಹಿಡಿಯುವ ಅಭಿಯಾನವನ್ನೂ ಆರಂಭಿಸಲಾಗಿದೆ.ಇದಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಆಸ್ತಿಗಳಿಗೆ ಭೇಟಿ ನೀಡಲಿದ್ದಾರೆ. ಮಾಲೀಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಮೊಬೈಲ್​ ಅಪ್ಲಿಕೇಶನ್​ ಮೂಲಕ ವಾರ್ಡ್​ಗಳಲ್ಲಿರುವ ಎಲ್ಲ ಸ್ವತ್ತುಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಬೆಸ್ಕಾಂ ಬಿಲ್​ಗಳಲ್ಲೂ ಆಸ್ತಿಗಳ ಪಿಐಡಿ ನಮೂದಿಸುವುದರಿಂದ ಸ್ವತ್ತಿನ ಸಮರ್ಪಕ ಮಾಹಿತಿ ಲಭ್ಯವಾಗುತ್ತದೆ. ಈ ಬಗ್ಗೆ ಬೆಸ್ಕಾಂನೊಂದಿಗೆ ಮಾತುಕತೆ ನಡೆಸಲಾಗಿದ್ದು, ಇದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಪಿಎಸ್​ ಸೆರೆಹಿಡಿದು ತಂತ್ರಾಂಶದಲ್ಲಿ “ಸಿಟಿಜನ್​ ಮಾಡ್ಯೂಲ್​’ ಯೋಜನೆ ಆರಂಭಿಸಲಾಗುವುದು. ಯೋಜನೆಯಡಿ ನಾಗರಿಕರೇ ನಮ್ಮ ಸ್ವತ್ತುಗಳನ್ನು ಜಿಪಿಎಸ್​ ಸೆರೆಹಿಡಿದು ಸಲ್ಲಿಸಬಹುದು ಎಂದು ಹೇಳಿದರು.

75 ಕೋಟಿ ಮೌಲ್ಯದ ಒತ್ತುವರಿ ತೆರವು:ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳ ಪ್ರದೇಶದಲ್ಲಿ ಜಾಗ ಒತ್ತುವರಿ ತೆರವುಗೊಳಿಸುವ ಕಾರ್ಯ ಜಾರಿಯಲ್ಲಿದೆ ಎಂದು ಬಿಬಿಎಂಪಿ ವಿಭಾಗದ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್​ ಹೇಳಿದ್ದಾರೆ. ಮಹದೇವಪುರ ವಲಯದ ದೊಡ್ಡನೆಕ್ಕುಂದಿ ಕೆರೆಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ನಡೆಸಿದ್ದ ಸರ್ವೇಯಲ್ಲಿ 2 ಎಕರೆ 6 ಗುಂಟೆ ಕೆರೆಯ ಪ್ರದೇಶ ಒತ್ತುವರಿಯಾಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆಯ ಸಹಕಾರದೊಂದಿಗೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ ತಂತಿಬೇಲಿ ಅಳವಡಿಸಲಾಗುತ್ತಿದೆ. ಈ ಜಾಗದ ಮಾರುಕಟ್ಟೆ ಮೌಲ್ಯ 75 ಕೋಟಿ ರೂ. ಆಗಿದೆ ಎಂದರು.

ಬೆಂಗಳೂರಿನಲ್ಲಿ ಈ ಒಂದು ಅನಾಹುತ ತಡೆಯಲು ಬಿಬಿಎಂಪಿ, ಬೆಸ್ಕಾಂ ಜಂಟಿ ಕಾರ್ಯಾಚರಣೆ

Leave a Reply

Your email address will not be published. Required fields are marked *