BBMP
Loading ...

Darshan

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಜೈಲು ಸೇರಿ 100 ದಿನಗಳೇ ಕಳೆದು ಹೋಗಿದೆ. ಒಬ್ಬ ನಟನ ಜೀವನದಲ್ಲಿ 100 ದಿನ ಅನ್ನೋದು ಬಹಳ ಮುಖ್ಯ ಪಾತ್ರವಹಿಸುತ್ತೆ. 100 ದಿನಗಳ ಕಾಲ ಒಂದು ಸಿನಿಮಾ ಓಡಿದ್ರೆ ಸಾಕು ಆ ನಟನ ಲಕ್​ ಬದಲಾಗಿ ಸ್ಟಾರ್​ ಪಟ್ಟಕ್ಕೇರುತ್ತಾನೆ. ಪ್ರತಿಯೊಬ್ಬ ನಟನ ಆಸೆ ಕೂಡ ಆದೇ ಆಗಿರುತ್ತದೆ. ತಾನು ನಟಿಸುವ ಸಿನಿಮಾ 100 ದಿನ ಪೂರೈಸಲಿ ಅನ್ನೋ ಕನಸು ಹೊತ್ತುಕೊಂಡೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟವರು ದರ್ಶನ್​, 2001ರಲ್ಲಿ ದರ್ಶನ್​ ನಟಿಸಿದ ಮೊದಲ ಸಿನಿಮಾ ಮೆಜೆಸ್ಟಿಕ್​ ಗಾಂಧಿನಗರದಲ್ಲಿ ದಾಖಲೆ ನಿರ್ಮಿಸಿತ್ತು. ನೂರು ದಿನಗಳ ಪ್ರದರ್ಶನ ಕಂಡು ದರ್ಶನ್​ ನನ್ನು ಸ್ಟಾರ್ ಮಾಡಿತ್ತು. ಇದೀಗ ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್ ಜೈಲು ಪಾಲಾಗಿದ್ದಾರೆ. ಕಂಬಿ ಹಿಂದೆ ಬಂಧಿಯಾಗಿ 100 ದಿನವಾಗಿದೆ. ಈ 100 ದಿನದಲ್ಲಿ ಏನೆಲ್ಲಾ ಆಯ್ತು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್​.

ಜೂನ್ 8 : ದರ್ಶನ್ ಗೆಳತಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಾನೆ ಎನ್ನುವ ಕಾರಣಕ್ಕೆ ದರ್ಶನ್​ ಗ್ಯಾಂಗ್,​ ಚಿತ್ರದುರ್ಗದಿಂದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದರು. ಅಂದೇ ರೇಣುಕಾಸ್ವಾಮಿಯನ್ನು ಕೂಡಿ ಹಾಕಿದ್ದ ಶೆಡ್​ಗೆ ಬಂದ ದರ್ಶನ್​ ಹಾಗೂ ಪವಿತ್ರಾ ಆತನ ಮೇಲೆ ಹಲ್ಲೆ ನಡೆಸಿದ್ರು ಎನ್ನುವ ವಿಚಾರ ಚಾರ್ಜ್​ ಶೀಟ್​​ನಲ್ಲಿ ದಾಖಲಾಗಿದೆ ಎನ್ನಲಾಗಿದೆ. ನಿರಂತರವಾಗಿ ಹಲ್ಲೆ ನಡೆಸಿದ ಬಳಿಕ ರೇಣುಕಾಸ್ವಾಮಿ ಸಾವನ್ನಪ್ಪಿದ್ದ ಎಂದು ವರದಿ ಆಗಿದೆ.

ಜೂನ್ 8 : ರೇಣುಕಾಸ್ವಾಮಿ ಸಾವನ್ನಪ್ಪಿರುವ ವಿಷಯವನ್ನು ಪೋನ್​ ಮೂಲಕ ನಟ ದರ್ಶನ್​​ಗೆ ತಿಳಿಸಿದ್ದಾರೆ. ರಾತ್ರಿ ವೇಳೆ ವಿನಯ್ ಹಾಗೂ ಇತರೆ ಇಬ್ಬರು ಆರೋಪಿಗಳು ಸೇರಿ ರೇಣುಕಾಸ್ವಾಮಿ ಶವವನ್ನು ಸುಮನಹಳ್ಳಿ ರಾಜಕಾಲುವೆಗೆ ಎಸೆದಿದ್ದರು.

ಜೂನ್ 9 : ಬೆಳಗ್ಗೆ 8 ಗಂಟೆಗೆ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆ ಆಗಿದೆ. ಬೆಳಗ್ಗೆ 8.30ಕ್ಕೆ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜೂನ್ 10 : ದರ್ಶನ್​ ಮೂವರನ್ನು ಶರಣಾಗುವಂತೆ ಮನವೊಲಿಕೆ ಮಾಡಿದ್ರಂತೆ. ಬಳಿಕ ಮೂವರು ದರ್ಶನ್ ಸಹಚರರು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಠಾಣೆಗೆ ಶರಣಾಗಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ವಿಷಯ ಬೆಳಕಿಗೆ ಬಂದಿತ್ತು. ಈ ವೇಳೆ ಆರೋಪಿಗಳು ದರ್ಶನ್ ಹಾಗೂ ಪವಿತ್ರಾ ಗೌಡ ಹೆಸರನ್ನು ಬಾಯ್ಬಿಟ್ಟಿದ್ರು.

ಜೂನ್ 10 : ರಾತ್ರಿಯೇ ಮೈಸೂರಿಗೆ ತೆರಳಿದ ಬೆಂಗಳೂರು ಪೊಲೀಸರು. ದರ್ಶನ್ ಇರುವ ಸ್ಥಳದ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಇತರೆ ಆರೋಪಿಗಳನ್ನೂ ಬಂಧಿಸಿದ್ರು.

ಜೂನ್ 11 : ಬೆಳಗ್ಗೆ 6.30ಕ್ಕೆ ಮೈಸೂರಿನ ರ್ಯಾಡಿಸನ್ ಹೋಟೆಲ್​ನಲ್ಲಿ ಜಿಮ್ ಮಾಡ್ತಿದ್ದ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದ್ರು. ಬಳಿಕ ಪೊಲೀಸರು ಅದೇ ದಿನ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತಂದಿದ್ದರು. ದರ್ಶನ್ ಬಂಧನದ ಸುದ್ದಿ ಕೇಳಿ ಇಡೀ ಸ್ಯಾಂಡಲ್ವುಡ್ ಬೆಚ್ಚಿಬಿದ್ದಿತ್ತು.

ಜೂನ್​ 21: ಜೂನ್​ 11 ರಿಂದ 21ರವರೆಗೂ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪೊಲೀಸರು ದರ್ಶನ್​ ವಿಚಾರಣೆ ನಡೆಸಿದ್ದರು. ಜೂನ್ 11ರಂದು ದರ್ಶನ್ ಬಂಧಿಸಿದ ಬಳಿಕ ಬರೋಬ್ಬರಿ 12 ದಿನಗಳ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ರು. ಕೊಲೆ ಕೇಸ್ ಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ರು. ಆರಂಭದಲ್ಲಿ ನನಗೇನು ಗೊತ್ತಿಲ್ಲ ಅಂತಿದ್ದ ದರ್ಶನ್ ಬಳಿಕ ಖಾಕಿ ಸತ್ಯ ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ಈ ಕೊಲೆ ಕೇಸ್ ನಲ್ಲಿ ಪವಿತ್ರಾ ಗೌಡ ಎ1 ಆಗಿದ್ರೆ, ದರ್ಶನ್ ಎ2 ಆರೋಪಿ ಆಗಿದ್ದಾರೆ.

ಜೂನ್ 22: ಕಸ್ಟಡಿ ಅಂತ್ಯಗೊಂಡ ಬಳಿಕ ಕೋರ್ಟ್ ಮುಂದೆ ದರ್ಶನ್ ನನ್ನು ಹಾಜರು ಪಡಿಸಲಾಯ್ತು. ನ್ಯಾಯಾಲಯ ನಟ ದರ್ಶನ್ ಗೆ ನ್ಯಾಯಾಂಗ ಬಂಧನದ ಆದೇಶ ನೀಡಿತು. ಬಳಿಕ ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ರು.

ಆಗಸ್ಟ್ 26: ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ 2 ತಿಂಗಳಿದ್ದ ದರ್ಶನ್ ಜೈಲಿನಲ್ಲಿ ರಾಜಾತಿಥ್ಯ ಪಡೆದು ಸುದ್ದಿ ಆಗಿದ್ರು. ಜೈಲು ಸೇರಿದ್ರು ನಟ ದರ್ಶನ್ ಜೈಲಿನಲ್ಲಿ ಐಷಾರಾಮಿ ಆಗಿಯೇ ಬದುಕುತ್ತಿದ್ರು. ರೌಡಿಶೀಟರ್​ ಜೊತೆ ಕುಳಿತು ಕೈಯಲ್ಲಿ ಸಿಗರೇಟ್ ಹಿಡಿದು ಕಾಫಿ ಕುಡಿತ್ತಿದ್ದ ನಟ ದರ್ಶನ್ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಆಗಸ್ಟ್ 29: ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ನಟ ದರ್ಶನ್ ನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಯ್ತು. ಸದ್ಯ ದರ್ಶನ್ ಆ್ಯಂಡ್​ ಗ್ಯಾಂಗ್ ನ್ಯಾಯಾಂಗ ಬಂಧನದ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಆಗಿದೆ. ಜೈಲಿನಲ್ಲಿದ್ರೂ ದರ್ಶನ್​ ಧಿಮಾಕು ಕಡಿಮೆ ಆಗಿಲ್ಲ. ಇತ್ತೀಚೆಗಷ್ಟೇ ಮಾಧ್ಯಮಗಳ ಕ್ಯಾಮೆರಾ ಕಂಡಾಗ ಅಸಭ್ಯ ಸನ್ನೆ ಮಾಡಿದ್ದು ವಿಡಿಯೋ ಕೂಡ ವೈರಲ್ ಆಗಿತ್ತು.

ಸೆಪ್ಟೆಂಬರ್ 19 ಗುರುವಾರದಂದು ವಿಜಯನಗರ, ಮಾಗಡಿ ರಸ್ತೆ, ದಾಸರಹಳ್ಳಿ ಸೇರಿ ಹಲವೆಡೆ ಪವರ್ ಕಟ್: ಇಲ್ಲಿದೆ ಪಟ್ಟಿ

Leave a Reply

Your email address will not be published. Required fields are marked *