ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ & ಗ್ಯಾಂಗ್ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಸಿದ್ಧಪಡಿಕೊಂಡಿದ್ದಾರೆ. ಕೋರ್ಟ್‌ಗೆ ಇಂದು ಚಾರ್ಜ್‌ಶೀಟ್ ಸಲ್ಲಿಸುವುದು ಅನುಮಾನ ಎನ್ನಲಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಮೂರು ವಿಧಗಳಾಗಿ ಆರೋಪಿಗಳನ್ನು ವಿಂಗಡಿಸಿದ್ದಾರೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದಾರೆ. ‘ಡಿ’ ಗ್ಯಾಂಗ್‌ನ ಆರೋಪಿಗಳ ಪೈಕಿ 14 ಮಂದಿಗೆ ಕೊಲೆ ಕೇಸ್‌ನಲ್ಲಿ ಪಿಟ್ ಮಾಡಿದ್ದರೆ, ಇನ್ನೂ ಉಳಿದ ಮೂವರಿಗೆ ಸಾಕ್ಷ್ಯನಾಶದಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆಕೇಸ್‌ನಿಂದ ರಿಲಾಕ್ಷೇಷನ್ ಪಡೆದು ಸಾಕ್ಷ್ಯನಾಶ ಮಾಡಿರುವ ಆರೋಪದಡಿಯಲ್ಲಿ ಚಾರ್ಜ್ ಮಾಡಲಾಗಿರುವ ಆರೋಪಿಗಳು:
* ಕಾರ್ತೀಕ್, ಆರೋಪಿ ನಂಬರ್ 15
* ಕೇಶವಮೂರ್ತಿ, ಆರೋಪಿ ನಂಬರ್ 16
* ನಿಖಿಲ್ ನಾಯಕ್, ಆರೋಪಿ ನಂಬರ್ 17
ಈ ಮೂವರು ಆರೋಪಿಗಳಿನ್ನು ಕೊಲೆ ಕೇಸ್‌ನಿಂದ ಕೈಬಿಟ್ಟಿರಲು ಕಾರಣ?
ಎ 15 ಕಾರ್ತಿಕ್, 16 ಕೇಶವಮೂರ್ತಿ, ಎ17 ನಿಖಿಲ್ ನಾಯಕ್, ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿರುವುದಾಗಲಿ, ಹತ್ಯೆ ಮಾಡಿರುವಂತ ಸಂದರ್ಭಗಳಲ್ಲಾಗಲಿ ಇವರು ಇರಲಿಲ್ಲ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ ಎನ್ನಲಾಗುತ್ತಿದೆ. ರೇಣುಕಾಸ್ವಾಮಿ ದೇಹವನ್ನು ವಿಲೇವಾರಿ ಮಾಡಿ ಸಾಕ್ಷ್ಯನಾಶ ಮಾಡಲು ಮುಂದಾಗಿದ್ದರು ಎಂದು ತನಿಖೆಯಿಂದ ಪೊಲೀಸರಿಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರು ಆರೋಪಿಗಳ ವಿರುದ್ಧ ಸಾಕ್ಷ್ಯನಾಶ ಆರೋಪದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲು ತಯಾರಾಗಿದೆ ಎನ್ನಲಾಗಿದೆ.
ಬೆಂಗಳೂರು ಜನ ಕಟ್ಟಡ ನಕ್ಷೆ ಮಂಜೂರಾತಿಗೆ ಅಲೆಯಬೇಕಿಲ್ಲ! BBMP ವ್ಯಾಪ್ತಿಯಲ್ಲಿ ನಂಬಿಕೆ ನಕ್ಷೆ ಯೋಜನೆ ಆರಂಭ


