BBMP
Loading ...

ಬೆಂಗಳೂರು: ಗಡುವು ಮುಗಿದ್ರೂ ಬಿಲ್ ಪಾವತಿಸದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ಆ ಮೂಲಕ ಗ್ರಾಹಕರಿಗೆ ವಿದ್ಯುತ‌್ ಸಂಪರ್ಕ ಕಟ್​ ಬಿಸಿ ಮುಟ್ಟಿಸಲು ಬೆಸ್ಕಾಂ ಮುಂದಾಗಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬೆಸ್ಕಾಂ, ಸೆಪ್ಟೆಂಬರ್ 1ರಿಂದಲೇ ಕಟ್ಟುನಿಟ್ಟಾಗಿ ನಿಯಮ ಪಾಲನೆ ಜಾರಿಯಾಗಲಿದೆ ಎಂದು ತಿಳಿಸಿದೆ.

ಯಾವೆಲ್ಲಾ ನಿಯಮಗಳು ಜಾರಿ?
ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ಬೆಸ್ಕಾಂ ಹೇಳಿದೆ. ಹೆಚ್ಚುವರಿ ಭದ್ರತಾ ಠೇವಣಿ ಪಾವತಿಸದಿದ್ದರೂ, ವಾಣಿಜ್ಯ ಬಳಕೆ, ಅಪಾರ್ಟ್ಮೆಂಟ್​ ಹಾಗೂ ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರಿಗೂ ಇದು ಅನ್ವಯವಾಗಲಿದೆ. ಮೀಟರ್‌ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್‌ ಸಂಪರ್ಕ ಕಡಿತ ಮಾಡಲಾಗುತ್ತಿದ್ದು, ಹಾಗಾಗಿ ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಬೆಸ್ಕಾಂನಿಂದ ಮನವಿ ಮಾಡಲಾಗಿದೆ.

ವಿದ್ಯುತ‌ ಬಿಲ್‌ ಪಾವತಿಗೆ ಅಂತಿಮ ದಿನಾಂಕದವರೆಗೆ (ಅಂದರೆ ಬಿಲ್ ನೀಡಿದ 15 ದಿನಗಳು) ಯಾವುದೇ ಬಡ್ಡಿಯಿಲ್ಲದೆ 15 ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಆದಾಗ್ಯೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ‌ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂ. ಗಳಿಗಿಂತ ಅಧಿಕವಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಲಿದೆ.

ಇನ್ನು ಕರ್ನಾಟಕ ವಿದ್ಯುತ್​ ಸರಬರಾಜು ನಿಗಮ ನಿಯಮಿತ ಲೈನ್‌ ದುರಸ್ತಿ ಮತ್ತು ನಿರ್ವಹಣಾ ಕಾಮಗಾರಿ ಸಲುವಾಗಿ ನಾಳೆ ಅಂದರೆ ಆಗಸ್ಟ್​ 31ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ.

ತುರುವೇಕೆರೆ ಇನ್ಸ್​ಪೆಕ್ಟರ್​ ಲೋಹಿತ್​ಗೆ ಪ್ರೆಸ್​ ಕ್ಲಬ್ ಕೌನ್ಸಿಲ್ ಪ್ರಶಸ್ತಿ: ಕರವೇ ಕನ್ನಡಿಗರ ಧ್ವನಿ ರಾಜ್ಯಾಧ್ಯಕ್ಷ ಅನಿಲ್ ಕುಮಾರ್​ಗೂ ಗೌರವ

Leave a Reply

Your email address will not be published. Required fields are marked *